Jootoor Designs

Arrow Up

Arrow Down

ಆನೇಕಲ್

ಜಿಲ್ಲೆಗಳುದಿನಾಂಕ ತಾಲೂಕುಗಳು ಭೂಪಟ
ಬೆಂಗಳೂರು ನಗರ1 ನವೆಂಬರ್ 1956
  1. ಆನೇಕಲ್
  2. ಬೆಂಗಳೂರು ಉತ್ತರ
  3. ಬೆಂಗಳೂರು ಪೂರ್ವ
  4. ಬೆಂಗಳೂರು ದಕ್ಷಿಣ
ಬೆಂಗಳೂರು ನಗರ

ಆನೇಕಲ್ : ಇದು ಬೆಂಗಳೂರು ನಗರ ಜಿಲ್ಲೆಯ ತಾಲೂಕುಗಳಲ್ಲೊಂದು. ಆನೇಕಲ್ ಒಂದು ಪ್ರಮುಖ ಪಟ್ಟಣ ಹಾಗು ತಾಲ್ಲೂಕು ಕೇಂದ್ರ. ಬೆಂಗಳೂರಿನಿಂದ ೩೫ ಕಿ.ಮೀ. ದೂರದಲ್ಲಿರುವ ಆನೇಕಲ್, ತಮಿಳುನಾಡು ಗಡಿಯಿಂದ ಕೇವಲ ೫ ಕಿ.ಮೀ.ದೂರದಲ್ಲಿದೆ. ರೇಷ್ಮೆ ವಸ್ತ್ರ ತಯಾರಿಕೆ ಹೆಸರುವಾಸಿಯಾಗಿರುವ ಆನೇಕಲ್ ತಾಲ್ಲೂಕಿನಲ್ಲಿ ಅನೇಕ ಐತಿಹಾಸಿಕ ಹಾಗು ನೈಸರ್ಗಿಕ ತಾಣಗಳಿವೆ. ಗಡಿನಾಡು ಪ್ರದೇಶದಲ್ಲಿದರು ತಾಲ್ಲುಕಿನಲ್ಲಿ ಕನ್ನಡಿಗರು ಬಹುಸಂಖ್ಯಾತರಗಿದ್ದಾರೆ. ಆನೇಕಲ್ಲನ್ನು ಕರ್ನಾಟಕದ ರಾಗಿಯ ಕಣಜ ವೆಂದು ಕರೆಯಲಾಗುತ್ತದೆ.

ಪ್ರೇಕ್ಷಣೀಯ ಸ್ಥಳಗಳು

  • ಬನ್ನೇರುಘಟ್ಟ
  • ಬನ್ನೇರುಘಟ್ಟ ಬೆಂಗಳೂರು ಹಾಗು ಆನೇಕಲ್ ನಡುವೆ ಎರಡೂ ಸ್ಥಳಗಳಿಂದ ಸುಮಾರು ೨೦ ಕಿ.ಮೀ ದೂರದಲ್ಲಿದೆ. ಬನ್ನೇರುಘಟ್ಟದಲ್ಲಿ ಒಂದು ಸುಂದರ ರಾಷ್ಟೀಯ ಉದ್ಯಾನವವಿದೆ.
  • ವಿದ್ಯುನ್ಮಾನ ನಗರ (Electronics City)
  • ಮಾಹಿತಿ ತಂತ್ರಜ್ನಾನ ಹಾಗು ವಿದ್ಯುನ್ಮಾನ ಸಂಸ್ಥೆಗಳ ಕಚೇರಿಗಳಿರುವ ವಿದ್ಯುನ್ಮಾನ ನಗರ (Electronics City)ಆನೇಕಲ್ ನಿಂದ ೨೦ ಕಿ.ಮೀ ದೂರದಲ್ಲಿದೆ.
  • ಮುತ್ಯಾಲಮಡುವು : ಆನೇಕಲ್ ನಿಂದ ೫ ಕಿ.ಮೀ ದೂರದಲ್ಲಿರುವ ಮುತ್ಯಾಲಮಡುವಿನಲ್ಲಿ ಸುಂದರ ಜಲಪಾತವಿದೆ ಹಾಗು ಇದು ಒಂದು ಪ್ರಸಿದ್ದ ಪ್ರವಾಸಿ ತಾಣವಾಗಿದೆ.
  • ಕಂಬದ ಗಣಪತಿ ದೇವಾಲಯ
  • ಶ್ರೀ ತಿಮ್ಮರಾಯಸ್ವಾಮಿ ದೇವಾಲಯ
  • ಶ್ರೀ ಚನ್ನಕೇಶವ ದೇವಾಲಯ
  • ಶಂಕರ ಮಠ : ಇಲ್ಲಿನ ಅಮೃತ ಶಿಲೆಯ ಶ್ರೀ ಶಂಕರಾಚಾರ್ಯ ಹಾಗು ಶ್ರೀ ಶಾರದಾ ದೇವಿಯ ವಿಗ್ರಹಗಳು ಐತಿಹಾಸಿಕ ಮಹತ್ವ ಪಡೆದಿದೆ.
  • ಶ್ರೀ ಆಂಜಿನೇಯ ದೇವಾಲಯ ಹೊಸುರು ಬಾಗಿಲು

ವಿಕೀಪಿಡಿಯ