Jootoor Designs

Arrow Up

Arrow Down

ಅಥಣಿ

ಅಥಣಿ ಬೆಳಗಾವಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ೨೦೦೧ ರ ಜನಗಣತಿಯ ಪ್ರಕಾರ ೩೯೨೦೦ ಜನಸಂಖ್ಯೆಯನ್ನು ಹೊಂದಿರುತ್ತದೆ. ಒಟ್ಟು ಜನಸಂಖ್ಯೆಯು ಸುಮಾರು ೪೦೦,೦೦೦. ಜಿಲ್ಲಾ ಕೇಂದ್ರವಾದ ಬೆಳಗಾವಿ ನಗರದಿಂದ ಸುಮಾರು ೧೨೫ ಕಿ.ಮಿ. ದೂರವಿದ್ದು, ಐತಿಹಸಿಕ ಕೇಂದ್ರವಾದ ವಿಜಾಪುರದಿಂದ ಸುಮಾರು ೭೫ ಕಿ.ಮಿ. ದೂರವಿದೆ. ಮಹರಾಷ್ಟ್ರ ಗಡಿಗೆ ಅಂಟಿಕೊಂದಿರುವ ಅಥಣಿಯು ಬೆಳಗಾವಿ ಜಿಲ್ಲೆಯ ಅತ್ಯಂತ ವಿಶಾಲವಾದ ತಾಲೂಕು ಆಗಿದ್ದು ೧೯೯೫.೫ ಚ.ಕಿ.ಮಿ. ವಿಸ್ತೀರ್ಣ ಹೊಂದಿದೆ. ಇಲ್ಲಿನ ಪ್ರಮುಖ ಕಸುಬು ವ್ಯವಸಾಯವಾಗಿದ್ದು, ಭೂಮಿಯ ಬಹುತೇಕಪಾಲು ಕೃಷಿಯಲ್ಲಿ ತೊಡಗಿದೆ. ಕಬ್ಬು ಇಲ್ಲಿನ ಪ್ರಮುಖ ಬೆಳೆಯಾಗಿದೆ. ಸುಮಾರು ೪ ಸಕ್ಕರೆ ಕಾರ್ಖಾನೆಗಳಿವೆ. ಕೃಷ್ಣಾ ನದಿಯು ತಾಲೂಕಿನುದ್ದಕ್ಕು ಹರಿದು ಹೋಗುವುದರಿಂದ ರೈತರಿಗೆ ಅನುಕೂಲಕರವಾಗಿದೆ. ಅಥಣಿಯು ಸುಮಾರು ೮೯ ಗ್ರಾಮಗಳನ್ನೊಳಗೊಂದಿದೆ. ಇದಲ್ಲದೆ ಅಥಣಿಯು ಶೈಕ್ಷಣಿಕವಾಗಿಯೂ ಪ್ರಗತಿ ಹೊಂದಿದ್ದು ೩೦೦ ರಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳಿದ್ದು, ಸುಮಾರು ೧೫ ಕ್ಕೂ ಹೆಚ್ಚು ಮಹಾವಿದ್ಯಾಲಯಗಳನ್ನು ಹೊಂದಿದೆ. ಸುಮಾರು ೬೮% ಜನರು ವಿದ್ಯಾವಂತರಿದ್ದಾರೆ. ಗಡಿಯ ಮಹರಾಷ್ಟ್ರದ ನಗರಗಳಾದ ಮಿರಜ್, ಸಾಂಗ್ಲಿ, ಜತ್ತ್, ಹಾಗೂ ರಾಜ್ಯದ ಪ್ರಮುಖ ಮತ್ತು ವಾಣಿಜ್ಯ ನಗರಗಳಿಗೆ ಒಳ್ಳೆಯ ರಸ್ತೆಯ ಸಂಪರ್ಕವನ್ನು ಹೊಂದಿರುತ್ತದೆ.

ಈ ತಾಲೂಕಿನಲ್ಲಿ ಐನಾಪೂರ ಪ್ರಸಿದ್ದ್ ಗ್ರಾಮವಾಗಿದೆ. ಪೇಡೆಗೆ ಹೆಸರುವಾಸಿ.

ಅಥಣಿ ತಾಲೂಕಿನ ಸುಟ್ಟಟ್ಟಿಯಲ್ಲಿ ಶ್ರೀ ಅಪ್ಪಯ್ಯಾಸ್ವಾಮಿ ಕನ್ನಡ ಮಾಡಧ್ಯಮ ಶಾಲೆ.ನದಿ ತೀರದ ಗ್ರಾಮಗಳ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಶಣ ನೀಡುವ ಉದ್ದೇಶದಿಂದ ಆರಂಭಗೊಂಡಿದೆ.ಸುತ್ತಮುತ್ತಲಿನ ಗ್ರಾಮಗಳ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸ ದೊರೆಯುತ್ತಿದೆ.

ವಿಕೀಪಿಡಿಯ