Jootoor Designs

Arrow Up

Arrow Down

ಬಾದಾಮಿ

ಜಿಲ್ಲೆದಿನಾಂಕ ತಾಲೂಕುಗಳು ಭೂಪಟ
ಬಾಗಲಕೋಟೆ15 ಆಗಸ್ಟ್ 1997
  1. ಬಾದಾಮಿ
  2. ಬಾಗಲಕೋಟೆ
  3. ಬೀಳಗಿ
  4. ಹುನಗುಂದ
  5. ಜಮಖಂಡಿ
  6. ಮುಧೋಳ
ಬಾಗಲಕೋಟೆ

ಈ ಲೇಖನವು ಚಾಲುಕ್ಯರ ರಾಜಧಾನಿಯಾಗಿದ್ದ ಬಾದಾಮಿ ಸ್ಥಳದ ಬಗ್ಗೆ. ಅಡಿಗೆಗೆ ಉಪಯೋಗಿಸುವ ಬಾದಾಮಿ ಪದಾರ್ಥದ ಮಾಹಿತಿಗೆ ಈ ಲೇಖನ ನೋಡಿ. ಚಾಲುಕ್ಯ ಮಹಾಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದ ಇತಿಹಾಸ ಪ್ರಸಿದ್ಧ ಬಾದಾಮಿ ಇಂದು ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕು ಕೇಂದ್ರ.

ಗುಡ್ಡದ ಬದಿಯನ್ನು ಕೊರೆದು ನಿರ್ಮಿಸಿದ ಬಾದಾಮಿಯ ಗುಹಾಲಯಗಳು ವಿಶ್ವವಿಖ್ಯಾತವಾಗಿವೆ. ಈ ಗುಡ್ಡದ ಬುಡದಲ್ಲಿರುವ ಕೆರೆಯ ಪಶ್ಚಿಮ ತೀರದಲ್ಲಿ ಊರು ಹಬ್ಬಿದೆ. ಗುಡ್ಡದ ಮೇಲೆ ಕೋಟೆಯೂ ಚಾಲುಕ್ಯರ ಕಾಲದ ದೇವಾಲಯಗಳೂ ಕಟ್ಟಡಗಳೂ ಇವೆ. ಕೆರೆಯ ಉತ್ತರದ ದಡದ ಮೇಲೆ ಬಂಡೆಯೊಂದರ ಮೇಲೆ ಕಪ್ಪೆ ಅರಭಟ್ಟನ ಶಾಸನವನ್ನು ಕಾಣಬಹುದು. ಹತ್ತಿರದಲ್ಲೆ ಇನ್ನೊಂದು ಬಂಡೆಯ ಮೇಲೆ ಮುನ್ನಿದ್ದ ಶಾಸನವನ್ನು ಅಳಿಸಿ ಕೆತ್ತಲಾಗಿರುವ ಪಲ್ಲವ ನರಸಿಂಹವರ್ಮನ ಜಯಶಾಸನವನ್ನೂ ಕಾಣಬಹುದು. ಭಾರತೀಯ ದೇವಸ್ಥಾನ ನಿರ್ಮಾಣ ಕಲೆಯ ತೊಟ್ಟಿಲೆಂದೆನಿಸಿರುವ ಐಹೊಳೆ (ಐವಳಿ) ಪಟ್ಟದಕಲ್ಲುಗಳೂ, ಚಾಲುಕ್ಯರ ಪೂರ್ವ ರಾಜಧಾನಿಯಾಗಿದ್ದಿರಬಹುದಾದ ಮಹಾಕೂಟವೂ ಬಾದಾಮಿಗೆ ಅನತಿ ದೂರದಲ್ಲಿಯೆ ಇವೆ.

ಸಾಮಾನ್ಯ ಶಕವರ್ಷ ೬೪೨ರಲ್ಲಿ ಇಮ್ಮಡಿ ಪುಲಿಕೇಶಿಯ ಕೊನೆಗಾಲದಲ್ಲಿ ಪಲ್ಲವರು ಬಾದಾಮಿಯನ್ನು ಮುತ್ತಿ ಹಾಳುಗೆಡವಿದರು (೨). ಸಾಮ್ರಾಜ್ಯದಲ್ಲಿ ಅರಾಜಕತೆ ಮೂಡಿತು. ೧೩ ವರ್ಷಗಳ ನಂತರ ಪುಲಿಕೇಶಿಯ ಮಗ ವಿಕ್ರಮಾದಿತ್ಯ ಪಲ್ಲವರನ್ನು ಸೋಲಿಸಿ ರಾಜ್ಯವನ್ನು ಪುನರ್ಘಟಿಸಿದ. ಸಾ.ಶ ೭೫೦ರ ವೇಳೆಗೆ ಸಾಮ್ರಾಜ್ಯ ಬಲಗುಂದುತ್ತಿತ್ತು. ೭೫೩ರಲ್ಲಿ ರಾಷ್ಟ್ರಕೂಟರ ವಂಶದವನಾದ ದಂತಿದುರ್ಗ ಸಾಮ್ರಾಟ ಇಮ್ಮಡಿ ಕೀರ್ತಿವರ್ಮನನ್ನು ಬದಿಗೊತ್ತಿ ತನ್ನ ರಾಜವಂಶವನ್ನು ಸ್ಥಾಪಿಸಿದ (೧). ಅಲ್ಲಿಗೆ ಬಾದಾಮಿಯು ಚರಿತ್ರೆಯ ಮುಖಪುಟದಿಂದ ಮರೆಯಾಯಿತು. ಮುಂದೆ ಚಾಲುಕ್ಯ ವಂಶದವರು ಮತ್ತೆ ರಾಜ್ಯಕ್ಕೆ ಬಂದಾಗ ಕಲ್ಯಾಣ ರಾಜಧಾನಿಯಾಯಿತು.

ಇಡಿಯ ಭಾರತದ ಚರಿತ್ರೆ ಸಂಸ್ಕೃತಿಗಳ ಮೇಲೆ ತಮ್ಮ ಅಚ್ಚೊತ್ತಿದ ಚಾಲುಕ್ಯರ ಬಾದಾಮಿಯು ಸರ್ವಥಾ ಪ್ರೇಕ್ಷಣೀಯ, ಸರ್ವಥಾ ಆದರಣೀಯ.

ಬಾದಾಮಿಗೆ ಬೆಂಗಳೂರು, ಬಾಗಲಕೋಟೆ, ಬಿಜಾಪುರ, ಹೊಸಪೇಟೆ, ಹುಬ್ಬಳ್ಳಿ, ಧಾರವಾಡ, ಗದಗ ಮುಂತಾದೆಡೆಗಳಿಂದ ಬಸ್ ಸಂಪರ್ಕವಿದೆ. ಗದಗ-ಸೊಲ್ಲಾಪುರ ರೈಲು ಮಾರ್ಗವು ಬಾದಾಮಿಯನ್ನು ಹಾಯ್ದು ಹೋಗುತ್ತದೆ. ವಸತಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮ (KSTDC) ನಡೆಸುವ ಹೊಟೆಲ್ ಅನುಕೂಲವಾಗಿದೆ.

ಚಾರಿತ್ರಿಕ ಘಟನೆಗಳು: ಓರೆ ಅಕ್ಷರಗಳು ಇತಿಹಾಸ

ಶೈಕ್ಷಣಿಕ : ಪ್ರಮುಖ ವಿದ್ಯಾಸಂಸ್ಥೆಗಳು ಶ್ರೀ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆ, ಬದಾಮಿ. ಶ್ರೀ ಕಾಳಿದಾಸ ವಿದ್ಯಾವರ್ಧಕ ಸಂಸ್ಥೆ, ಬದಾಮಿ ಸ್ವಾಮಿ ವಿವೆಕಾನಂದ ಶಾಲೆ, ಬಾದಾಮಿ

ಪ್ರಮುಖ ಬೆಳೆಗಳು : ಜೋಳ, ಸಜ್ಜೆ, ಸೇಂಗಾ, ಸೂರ್ಯಪಾನ, ಉಳ್ಳಾಗಡ್ಡಿ(ಈರುಳ್ಳೆ). ಪ್ರಮುಖ ಆಹಾರ ಧಾನ್ಯ ಜೋಳ ಜೊತೆಗೆ ಗೋಧಿ, ಬೇಳೆಕಾಳುಗಳು.

ರಸ್ತೆ ಸಾರಿಗೆ : ವಾಯವ್ಯ .ಕ.ರಾ.ಸಾ.ಸಂಸ್ಥೆ ವಿಭಾಗ ಬಾದಾಮಿ ಪಟ್ಟಣ ಸಾರಿಗೆ ಸಂಪರ್ಕ ಹೊಂದಿದೆ. ಸರಕಾರೇತರ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಸಾರಿಗೆ ವಾಹನಗಳು (ಬಸ್ ಗಳು) ಜಿಲ್ಲೆಯಾದ್ಯಂತ ಸಂಚರಿಸುತ್ತವೆ.

ದಿನ ಪತ್ರಿಕೆ

ವಿಕೀಪಿಡಿಯ