Jootoor Designs

Arrow Up

Arrow Down

ಬೈಲಹೊಂಗಲ

ಬೈಲಹೊಂಗಲ ಪಟ್ಟಣವು ಬೆಳಗಾವಿಯಿಂದ ಪೂರ್ವಕ್ಕೆ 44 ಕಿ ಮೀ ಅಂತರದಲ್ಲಿ ಇದೆ. ಬೈಲಹೊಂಗಲ ಪಟ್ಟಣವು ಉಪವಿಭಾಗ ಹಾಗೂ ತಾಲೂಕಾ ಕೇಂದ್ರ ಸ್ಥಾನವಿದ್ದು, ಪಟ್ಟಣದ ಜನಸಂಖ್ಯೆಯು 2001 ಜನಗಣತಿಯ ಪ್ರಕಾರ 43215 ಇರುತ್ತದೆ.ಇತಿಹಾಸ ಪ್ರಸಿದ್ದವಾದ ಕನ್ನಡ ನಾಡಿನ ವೀರರಾಣಿ ಕಿತ್ತೂರ ಚನ್ನಮಾಜಿಯವರು ಇಲ್ಲಿಯೇ ಸ್ವರ್ಗವಾಸಿಯಾಗಿದ್ದು, ಅವರ ಸಮಾಧಿಯು ಇಲ್ಲಿಯೇ ಇದೆ. ಇಲ್ಲಿ ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ದಿನಗಳಂದು ಸಂತೆ ನಡೆಯುವದು. ಪುರಸಭೆ ವತಿಯಿಂದ ಎರಡು ಹೈಸ್ಕೂಲಗಳು ನಡೆಯುತ್ತಿವೆ.ಅವುಗಳಲ್ಲಿ ಒಂದು ಗಂಡು ಮಕ್ಕಳಿಗಾಗಿ ಹಾಗೂ ಇನ್ನೋಂದು ಹೆಣ್ಣು ಮಕ್ಕಳ ಸಲುವಾಗಿ ಬೇರೆ ಬೇರೆಯಾಗಿ ನಡೆಯುತ್ತಿವೆ. ಅಲ್ಲದೆ ಮೂರು ಸಾವಿರಮಠ ವತಿಯಿಂದ ಒಂದು ಹೈಸ್ಕೂಲ ಹಾಗೂ ಒಂದು ವೃತ್ತಿ ತರಬೇತಿ ಸಂಸ್ಥೆಯನ್ನು ನಡೆಸಲಾಗುತ್ತಿದೆ. ಇದು ಅಲ್ಲದೇ ಕೆ.ಆರ್‌.ಸಿ.ಇ. ಸಂಸ್ಥೆಯವರು ಕಲಾ, ವಿಜ್ಙಾನ, ವಾಣಿಜ್ಯ ಹಾಗೂ ಕಾನೂನು ಮಹಾ ವಿಧ್ಯಾಲಯಗಳನ್ನು ನಡೆಸುತ್ತದ್ದಾರೆ. ಇಲ್ಲಿ 25 ಸರಾಸರಿ ಪ್ರಾಥಮಿಕ ಕನ್ನಡ ಶಾಲೆಗಳು ಹಾಗೂ 2 ಪ್ರಾಥಮಿಕ ಉರ್ದು ಶಾಲೆಗಳು ಇವೆ. ಒಂದು ಉರ್ದು ಹೈಸ್ಕೂಲ ಸಹ ಇರುತ್ತದೆ.ಅಲ್ಲದೇ ಒಂದು ಮಹಿಳಾ ಕಾಲೇಜ ಸಹ ಇದೆ. ಹಾಗೂ ಪದವಿ ಪೂರ್ವ ಕಾಲೇಜ 2, ಪದವಿ ಕಾಲೇಜ 4, ಪಾಲಿಟೆಕ್ನಿಕ್‌ 1 ಹಾಗೂ 1ಲಾ-ಕಾಲೇಜ ಇರುತ್ತದೆ. ಬೈಲಹೊಂಗಲ ಪಟ್ಟಣದಲ್ಲಿ ಕೃಷಿ ಪ್ರದಾನವಾಗಿದೆ. ಹತ್ತಿ ಜೋಳ, ಗೋವಿನಜೋಳ, ಶೇಂಗಾ ಗೋಧಿ ಇವು ಮುಖ್ಯ ಬೆಳೆಯಾಗಿತ್ತದೆ. ಇಲ್ಲಿ ಜಿನ್ನಿಂಗ್‌ ಹಾಗೂ ಪ್ರೆಸ್ಸಿಂಗ್‌ ಫ್ಯಾಕ್ಟರಿಗಳು ಎಣ್ಣೆ ತೆಗೆಯುವ ಕಾರ್ಖಾನೆಗಳು ಸಹ ಇರುತ್ತವೆ.ನಗೆರದಲ್ಲಿ 2ಚಲನ ಚಿತ್ರ ಮಂದಿರಗಳು ಹಾಗೂ 4 ಉದ್ಯಾನವನಗಳು ಇರುತ್ತದೆ.

ವಿಕೀಪಿಡಿಯ