Jootoor Designs

Arrow Up

Arrow Down

ಬೆಳಗಾವಿ

ಬೆಳಗಾವಿ ಉತ್ತರ ಕರ್ನಾಟಕದಲ್ಲಿ ಇರುವ ನಗರ ಮತ್ತು ಜಿಲ್ಲೆ. ಕರ್ನಾಟಕದ ಅತೀ ದೊಡ್ಡ ಜಿಲ್ಲೆ ಹಾಗು ಪ್ರಮುಖ ನಗರಗಳಲ್ಲೊಂದು. ರಾಜ್ಯದ ಎರಡನೇ ರಾಜಧಾನಿ ಎಂದು ನೇಮಿಸಲ್ಪಟ್ಟ ಮಹಾನಗರ (ಆಂಗೀಕಾರವಾಗಿಲ್ಲ). ಇಂದಾಲ್ (ಭಾರತೀಯ ಅಲ್ಯೂಮಿನಿಯಮ್ ಕಂಪೆನಿ) ಬೆಳಗಾವಿಯಲ್ಲಿದೆ. ಇದಲ್ಲದೆ ಭಾರತೀಯ ಸೇನಾ ಪಡೆಗಳಿಗೆ ಸಂಬಂಧಪಟ್ಟ ಕೆಲವು ತರಬೇತಿ ಶಿಬಿರಗಳು ಮತ್ತು ಭಾರತೀಯ ವಾಯುಸೇನೆಯ ಒಂದು ವಿಮಾನ ನಿಲ್ದಾಣ ಬೆಳಗಾವಿಯಲ್ಲಿವೆ.

ಚರಿತ್ರೆ : ಬೆಳಗಾವಿಯ ಪುರಾತನ ಹೆಸರು ವೇಣುಗ್ರಾಮ. ಆದರೆ ಈಗಿರುವ ಹೆಸರು ಬಂದದ್ದು "ಬೆಳ್ಳಗೆ+ಆವಿ" ಎಂದರೆ ಇಲ್ಲಿನ ವಾತಾವರಣದಲ್ಲಿ ಬೆಳಗಿನ ಜಾವ ಮಂಜು ಬೀಳುತ್ತಿರುತ್ತದೆ. ಅದರಿಂದ "ಬೆಳ್ಳಗಾವಿ" ಹೆಸರು ಬಂದಿದೆ. ಈ ಜಿಲ್ಲೆಯ ಅತಿ ಪ್ರಾಚೀನ ಸ್ಥಳ ಎಂದರೆ ಹಲಸಿ - ಉಪಲಬ್ಧವಾಗಿರುವ ತಾಮ್ರಶಾಸನಗಳ ಆಧಾರದ ಮೇಲೆ ಹಲಸಿ ಕೆಲವು ಕದಂಬ ವಂಶದ ಅರಸರ ರಾಜಧಾನಿಯಾಗಿದ್ದಿತೆಂದು ಊಹಿಸಲಾಗಿದೆ. ೬ ನೇ ಶತಮಾನದಿಂದ ಸುಮಾರು ಕ್ರಿ.ಶ. ೭೬೦ ರ ವರೆಗೆ ಈ ಸ್ಥಳ ಚಾಲುಕ್ಯ ಸಾಮ್ರಾಜ್ಯದ ಭಾಗವಾಗಿದ್ದು, ನಂತರ ರಾಷ್ಟ್ರಕೂಟರ ನಿಯಂತ್ರಣಕ್ಕೆ ಸಾಗಿತು. ರಾಷ್ಟ್ರಕೂಟರ ಶಕ್ತಿ ಕಡಿಮೆಯಾದ ನಂತರ ರತ್ತ ವಂಶದ (೮೭೫ - ೧೨೫೦)ಕೈಯಲ್ಲಿದ್ದ ವೇಣುಗ್ರಾಮ, ೧೨೧೦ ರ ನಂತರ ರಾಜಧಾನಿಯಾಯಿತು. ೧೨೫೦ ರ ನಂತರ ದೇವಗಿರಿಯ ಯಾದವರು ಈ ಪ್ರದೇಶವನ್ನು ಸ್ವಲ್ಪ ಕಾಲ ಆಳಿದರು. ೧೩೨೦ ರಲ್ಲಿ ದೆಹಲಿಯ ಸುಲ್ತಾನೇಟ್ ಗಳ ಕೈಯಲ್ಲಿ ಯಾದವರು ಸೋಲನುಭವಿಸಿದ ನಂತರ ಸ್ವಲ್ಪ ಕಾಲ ದೆಹಲಿಯ ಆಡಳಿತದಲ್ಲಿ ಬೆಳಗಾವಿ ಜಿಲ್ಲೆ ಇತ್ತು. ಆದರೆ ಕೆಲವೇ ವರ್ಷಗಳ ನಂತರ ವಿಜಯನಗರ ಸಾಮ್ರಾಜ್ಯ ಈ ಪ್ರದೇಶವನ್ನು ತನ್ನದಾಗಿಸಿಕೊಂಡಿತು. ಬೆಳಗಾವಿ ಜಿಲ್ಲೆಯ ಉತ್ತರದ ಭಾಗಗಳು ೧೩೪೭ ರಲ್ಲಿ ಬಹಮನಿ ಸುಲ್ತಾನರ ಕೈ ಸೇರಿದವು. ೧೪೭೩ ರಲ್ಲಿ ಬೆಳಗಾವಿ ಪಟ್ಟಣ ಮತ್ತು ಜಿಲ್ಲೆಯ ಉಳಿದ ಭಾಗಗಳನ್ನು ಸಹ ಬಹಮನಿ ಸುಲ್ತಾನರು ಗೆದ್ದರು. ಬಿಜಾಪುರದ ಸುಲ್ತಾನರನ್ನು ಔರಂಗಜೇಬ್ ೧೬೮೬ ರಲ್ಲಿ ಸೋಲಿಸಿದ ಮೇಲೆ ಸ್ವಲ್ಪ ಕಾಲ ಬೆಳಗಾವಿ ಮುಘಲ್ ಸಾಮ್ರಾಜ್ಯದ ಭಾಗವಾಯಿತು. ೧೭೭೬ ರಲ್ಲಿ ಹೈದರ್ ಅಲಿ ಈ ಪ್ರದೇಶವನು ಗೆದ್ದರೂ ಬ್ರಿಟಿಷರ ಸಹಾಯದಿಂದ ಮರಾಠಾ ಪೇಶ್ವೆಗಳು ಈ ಪ್ರದೇಶವನ್ನು ಗೆದ್ದರು. ೧೮೧೮ ರಲ್ಲಿ ಬ್ರಿಟಿಷರ ಆಡಳಿತಕ್ಕೆ ಸಾಗಿದ ಬೆಳಗಾವಿ ಧಾರವಾಡ ಜಿಲ್ಲೆಯ ಭಾಗವಾಗಿತ್ತು. ೧೮೩೬ ರಲ್ಲಿ ಈ ಜಿಲ್ಲೆಯನ್ನು ಎರಡು ಭಾಗವಾಗಿ ಮಾಡಿ ಉತ್ತರ ಭಾಗವನ್ನು ಬೆಳಗಾವಿ ಜಿಲ್ಲೆಯಾಗಿ ಮಾಡಲಾಯಿತು.೧೯೪೭ ರಲ್ಲೆ ಭಾರತ ಸ್ವಾಂತಂತ್ರ್ಯಪಡೆದ ನಂತರ ಬೆಳಗಾವಿ ಮುಂಬೈ ರಾಜ್ಯದ ಭಾಗವಯಿತು ಆದರೆ ೧೯೫೬ ರಲ್ಲಿ ನಡೆದ ರಾಜ್ಯಗಳ ಮರುವಿಂಗಡನಾ ಕಾಯ್ದೆಯ ಪ್ರಕಾರ ಬೆಳಗಾವಿಯನ್ನ ಆಗಿನ ಮೈಸೂರು ರಾಜ್ಯಕ್ಕೆ ಸೆರಿಸಲಾಯಿತು ನಂತರ ೧೯೭೨ ರಲ್ಲಿ ಮೈಸೂರು ಕರ್ನಾಟಕ ರಾಜ್ಯವಾದ ನಂತರ ಬೆಳಗಾವಿ ಕರ್ನಾಟಕದ ಭಾಗವಾಗಿ ಮುಂದುವರಿಯಿತು.

ಬೆಳಗಾವಿ ಜಿಲ್ಲೆಯಲ್ಲಿರುವ ಕಿತ್ತೂರು ಚಾರಿತ್ರಿಕವಾಗಿ ಪ್ರಸಿದ್ಧ. ಕಿತ್ತೂರು ರಾಣಿ ಚೆನ್ನಮ್ಮ ಚರಿತ್ರೆಯಲ್ಲಿ ಸಾಹಸ ಮತ್ತು ಧೈರ್ಯದ ಪ್ರತೀಕವಾಗಿದ್ದಾಳೆ. ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿದ ಬೆಳಗಾವಿಯ ಇನ್ನೊಬ್ಬ ಪ್ರಸಿದ್ಧ ವ್ಯಕ್ತಿಯೆಂದರೆ ಸಂಗೊಳ್ಳಿ ರಾಯಣ್ಣ.

ಸ್ವಾಂತಂತ್ರ್ಯ ಪೂರ್ವ ಭಾರತದ ಇತಿಹಾಸದಲ್ಲು ಬೆಳಗಾವಿ ತನ್ನದೇ ಆದ ಪಾತ್ರವನ್ನ ಹೊಂದಿತ್ತು. ಡಿಸೆಂಬರ್ ೧೯೨೪ ರಲ್ಲಿ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ೩೯ ನೇ ಭಾರತೀಯ ಕಾಂಗ್ರೆಸ್ ಅಧಿವೇಶನ ಬೆಳಗಾವಿಯಲ್ಲಿ ನಡೆದಿತ್ತು.

ಸಂಸ್ಕೃತಿ :ವೈವಿದ್ಯತೆಗಳಲ್ಲಿ ಏಕತೆಯನ್ನು ಹೊಂದಿರುವ ಭಾರತದಂತೆ ಬೆಳಗಾವಿ ಕೂಡ ಹಲವು ಭಾಷಿಕರ ಹಾಗು ಹಲವು ಧರ್ಮಿಯರ ನೆಲೆಬೀಡು. ಕನ್ನಡ (ಆಡಳಿತ ಭಾಷೆ), ಹಿಂದಿ(ಕೇವಲ ನಗರದಲ್ಲಿ), ಮರಾಠಿ(ಕೇವಲ ನಗರದಲ್ಲಿ) ಇಲ್ಲಿ ಮಾತನಾಡಲ್ಪಡುವ ಪ್ರಮುಖ ಭಾಷೆಗಳು. ಉತ್ತರ ಕರ್ನಾಟಕದ ಸೊಗಡು ಇಲ್ಲಿಯ ಜೀವನ ಶೈಲಿಯ ವಿಷೇಶತೆ.

ಶಿಕ್ಷಣ ಹಾಗು ವಿದ್ಯಾ ಸಂಸ್ಥೆಗಳು : ಬೆಳಗಾವಿ ಕರ್ನಾಟಕದ ಒಂದು ಪ್ರಮುಖ ವಿದ್ಯಾ ಕೇಂದ್ರ. ೮ ಅಭಿಯಾಂತ್ರಿಕ ಕಾಲೇಜುಗಳು(engineering colleges),೨ ವೈದ್ಯಕೀಯ ಮಹಾವಿದ್ಯಾಲಯಗಳು , ಕೆಲವು ದಂತ ವಿದ್ಯಾಲಯಗಳು ಸೇರಿದಂತೆ ಹಲವಾರು ವಿದ್ಯಾಸಂಸ್ಥೆಗಳು ಇಲ್ಲಿವೆ.ಇಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕರ್ನಾಟಕದ ಅತೀ ದೊಡ್ಡ ವಿಶ್ವವಿದ್ಯಾಲಯವಾಗಿದೆ, ಸುಮಾರು ೧೪೦ ಕ್ಕೂ ಅಧಿಕ ತಾಂತ್ರಿಕ ವಿದ್ಯಾಲಯಗಳು ಈ ವಿಶ್ವವಿದ್ಯಾಲಯದ ಅಧಿನದೊಳಗೆ ಕಾರ್ಯನಿರ್ವಹಿಸುತ್ತವೆ ಅಲ್ಲದೆ ಸ್ನಾತಕೋತ್ತರ ವಿಭಾಗದಲ್ಲಿ M-Tech,MCA ನಂತಹ ಪದವಿಗಳು ಕೂಡ ವಿ ತಾ ವಿ ಅಧಿನದಲ್ಲಿವೆ.ಇದಲ್ಲದೆ ಅದೇ ರೀತಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯಲ್ಲಿದೆ. ಇದರ ಬೆಳಗಾವಿ ಭಾಗಲಕೋೞ್, ವಿಜಾಪುರ ಪದವಿ ಕಾಲೇಜುಗಳು ಇದರ ಅಧಿನದಲ್ಲಿವೆ . ಇತರೆ ಪದವಿ ಕಾಲೇಜುಗಳು,ಪಾಲಿಟೆಕ್ನಿಕ್ ವಿದ್ಯಾಲಯಗಳು, ಕಾನೂನು ಮಹಾವಿದ್ಯಾಲಯಗಳು ಕೂಡ ಇಲ್ಲಿವೆ. ಕೆ ಎಲ್ ಇ , ಕೆ ಎಲ್ ಎಸ್, ಗೋಮಟೆಶ , ಭರತೇಶ ಹಾಗು ಮರಾಠ ಮಂಡಳದಂತಹ ಹಲವಾರು ವಿದ್ಯಾಸಂಸ್ಥೆಗಳು ಸಾಕಷ್ಟು ಶೈಕ್ಷಣಿಕ ವಿದ್ಯಲಯಗಳನ್ನು ನಡೆಸುತ್ತಿವೆ.

ಭಾಷೆಗಳು : ಬೆಳಗಾವಿ ಜಿಲ್ಲೆಯಲ್ಲಿ ಮಾತನಾಡಲ್ಪಡುವ ಮುಖ್ಯ ಭಾಷೆಗಳು ಕನ್ನಡ, ಮತ್ತು ಮಹಾರಾಷ್ಟ್ರದ ಸಾಮೀಪ್ಯದಿಂದಾಗಿ ಮರಾಠಿ, ಈ ಎರಡು ಭಾಷೆಗಳಲ್ಲದೆ ಸಾಮನ್ಯವಾಗಿ ಹಿಂದಿ ಹಾಗು ಕೊಂಕಣಿ ಭಾಷೆಗಳು ಕೂಡ ಇಲ್ಲಿ ಮಾತನಾಡಲ್ಪಡುತ್ತವೆ .

ಪ್ರೇಕ್ಷಣೀಯ ಸ್ಥಳಗಳು ಮತ್ತು ಆಕರ್ಷಣೆಗಳು

ವಿಕೀಪಿಡಿಯ