Jootoor Designs

Arrow Up

Arrow Down

ದೇವನಹಳ್ಳಿ

ಜಿಲ್ಲೆದಿನಾಂಕ ತಾಲೂಕುಗಳು ಭೂಪಟ
ಬೆಂಗಳೂರು ಗ್ರಾಮೀಣ15 ಆಗಸ್ಟ್ 1986
  1. ದೇವನಹಳ್ಳಿ
  2. ದೊಡ್ಡಬಳ್ಳಾಪುರ
  3. ಹೊಸಕೋಟೆ
  4. ನೆಲಮಂಗಳ
ಬೆಂಗಳೂರು ಗ್ರಾಮೀಣ

ದೇವನಹಳ್ಳಿ (ಹಳೆಯ ಹೆಸರುಗಳು ದೇವನದೊಡ್ಡಿ, ದೇವನಪುರ ಮತ್ತು ಯುಸುಫಾಬಾದ್) ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಪಟ್ಟಣ. ಇದು ಬೆಂಗಳೂರು ನಗರದಿಂದ ೩೦ ಕಿ.ಮಿ ದೂರದಲ್ಲಿದೆ.

ಬೆಂಗಳೂರು ಅಂತರಾಷ್ಟ್ರೀಯ ವಿಮಾನನಿಲ್ದಾಣ : ಬೆಂಗಳೂರು ಗ್ರಾಮಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದಾಗಿ ವಿಶ್ವದ ವಿಮಾನಸಾರಿಗೆ ಸಾಗಾಣಿಕೆಯ ನಕ್ಷೆಯಲ್ಲಿ ಮೂಡಿಬಂದಿದೆ. ೨೦೦೮ ರ ಮೇ ೨೩ ರಂದು ಕರ್ನಾಟಕ ರಾಜ್ಯದ ಪ್ರಪ್ರಥಮ ಅಂತಾ-ರಾಷ್ಟ್ರೀಯ ವಿಮಾನನಿಲ್ದಾಣ' ದ ಉದ್ಘಾಟನೆಯಾಯಿತು. ಬೆಂಗಳೂರು ನಗರದಿಂದ ಸುಮಾರು ೩೨ ಕಿ. ಮೀ ದೂರದಲ್ಲಿರುವ ಈ ಸಾರಿಗೆ ವಿಮಾನ ನಿಲ್ದಾಣಕ್ಕೆ ಸಂಪರ್ಕರಸ್ತೆಗಳು ಸರಿಯಾಗಿವೆ. 'ಎಕ್ಸ್ಪ್ರೆಸ್ ವೇ' ಮತ್ತು 'ಹೈಸ್ಪೀಡ್ ರೈಲ್ವೆ' ಲೈನಿನ ಯೋಜನೆಯ 'ನೀಲನಕ್ಷೆ' ತಯಾರಾಗಿದೆ. ಟ್ಯಾಕ್ಸಿ ಸೇವೆ, ಮತ್ತು ಕೆ. ಎಸ್. ಆರ್. ಟಿ. ಸಿ ಹವಾನಿಯಂತ್ರಿತ ಬಸ್ ಗಳು ಪ್ರತಿ ೧೫ ನಿಮಿಷಕ್ಕೆ ಒಂದರಂತೆ ಸಂಚಾರಕ್ಕೆ ವ್ಯವಸ್ಥೆಮಾಡಲಾಗಿದೆ. ಬೆಂಗಳೂರಿನ ಯಾವಮೂಲೆಯಿಂದಲಾದರೂ ಹೊರಟು ವಿಮಾನನಿಲ್ದಾಣವನ್ನು ಸುಮಾರು ಒಂದರಿಂದ ಒಂದೂವರೆ ಗಂಟೆಗಳಲ್ಲಿ ತಲುಪುವ ವ್ಯವಸ್ಥೆ ಗಮನಾರ್ಹವಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ 'ಬಿ ಐ ಎ ಎಲ್ ಸಹಾಯವಾಣಿ' ಯ ಸೌಲಬ್ಯವಿದೆ. ವಿಮಾನನಿಲ್ದಾಣಕ್ಕೆ ಸಂಪರ್ಕಮಾರ್ಗ, ಸಾರಿಗೆ ಸೌಲಬ್ಯಗಳ ವಿವರಗಳು, ಮತ್ತು ಸಾಮಾನ್ಯ ಮಾಹಿತಿಗಳನ್ನು ದೂರವಾಣಿಯ ಮೂಲಕ ಕೂಡಲೆ ಪಡೆಯಬಹುದು. ಸಹಾಯವಾಣಿ ಸಂಖ್ಯೆ : ೪೦೫೮೧೧೧೧. ವಿಮಾನವೇರುವ ಮೊದಲು ನಡೆಸುವ 'ಭದ್ರತಾ ತಪಾಸಣೆಯ ವಿಧಿ' ಯಲ್ಲಿ ಪ್ರಯಾಣಿಕರು 'ಹಲವು ಕ್ಯೂ' ಗಳಲ್ಲಿ ಕಾದು ಮುಂದುವರೆಯುವ ಬದಲು, 'ಒಂದೇಹಂತದ ತಪಾಸಣಾ ವ್ಯವಸ್ಥೆ' ಯನ್ನು ನಿರೂಪಿಸಲಾಗಿದೆ. ೫೩ 'ಚೆಕ್-ಇನ್ ಕೌಂಟರ್' ಗಳು, ಹಾಗೂ ೧೮ 'ಸ್ವಯಂ ತಪಾಸಣಾಯಂತ್ರ' ಗಳನ್ನು ಸ್ಥಾಪಿಸಲಾಗಿದೆ. ಮಕ್ಕಳ ಉಪಚಾರ ಹಾಗೂ ಆರೋಗ್ಯ-ಸೇವೆಗೆ (ಔಷಧಾಲಯ, ಡಯಾಪರ್ ಬದಲಾವಣೆ, ಹಾಲುಕುಡಿಸುವಿಕೆ ಇತ್ಯಾದಿಗಳಿಗೆ) ಪ್ರತ್ಯೇಕ ಜಾಗವಿದೆ.

ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ನಡೆಯುವ 'ಲಕ್ಷದೀಪೋತ್ಸವ' : ವೇಣುಗೋಪಾಲಸ್ವಾಮಿ ದೇವಸ್ಥಾನ ಮತ್ತು ಚಂದ್ರಮೌಳೇಶ್ವರ ದೇವಸ್ಥಾನಗಳಿವೆ. ಪ್ರತಿದೀಪಾವಳಿಯಲ್ಲಿ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ನಡೆಯುವ 'ಲಕ್ಷದೀಪೋತ್ಸವ' ನೋಡುವುದೇ ಕಣ್ಣಿಗೆ ಹಬ್ಬ. ಪುರಾತನ 'ಶ್ರೀನಗರೇಶ್ವರ ದೇವಾಲಯ,' ಹತ್ತಿರದ ವಿಜಯಪುರದಲ್ಲಿದೆ. ಊರ ನಾಲ್ಕೂ ದಿಕ್ಕಿನಲ್ಲಿ ೩೦೦ ವರ್ಷಗಳ ಹಿಂದಿನ ಕಲ್ಯಾಣಿಗಳು ಇನ್ನೂ ಇವೆ. 'ಬೆಂಗಳೂ ಬ್ಲೂ ದ್ರಾಕ್ಷಿ' ಯಿಂದ ದ್ರಾಕ್ಷಾರಸವನ್ನು ತಯಾರಿಸುತ್ತಾರೆ. ದೇವನಹಳ್ಳಿಯ ಆಡಳಿತ ದೃಷ್ಟಿಯಿಂದ ವಿಜಯಪುರ ಹಾಗೂ ದೇವನಹಳ್ಳಿ ನಗರಸಭೆಗಳು ಇರುವುದನ್ನು ನಾವು ಕಾಣಬಹುದು.

ವಿಕೀಪಿಡಿಯ