Jootoor Designs

Arrow Up

Arrow Down

ಹೊಸಕೋಟೆ

ಜಿಲ್ಲೆದಿನಾಂಕ ತಾಲೂಕುಗಳು ಭೂಪಟ
ಬೆಂಗಳೂರು ಗ್ರಾಮೀಣ15 ಆಗಸ್ಟ್ 1986
  1. ದೇವನಹಳ್ಳಿ
  2. ದೊಡ್ಡಬಳ್ಳಾಪುರ
  3. ಹೊಸಕೋಟೆ
  4. ನೆಲಮಂಗಳ
ಬೆಂಗಳೂರು ಗ್ರಾಮೀಣ

ಹೊಸಕೋಟೆ - ಭಾರತದ ರಾಜ್ಯ ಕರ್ನಾಟಕದಲ್ಲಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪಟ್ಟಣಗಳಲ್ಲೊಂದು. ಅದಕ್ಕೆ ಈ ಹೆಸರು ಅಲ್ಲಿನ ಹೊಸದಾದ ಕೋಟೆಯ ಕಾರಣ ಬಂದಿದೆ. ಹಳೆಯ ಕೋಟೆಯಲ್ಲಿ ಅವಿಮುಕ್ತೇಶ್ವರ , ವರದರಾಜ ಮತ್ತು ವಿಠೋಬಾ ದೇವಸ್ಥಾನಗಳಿವೆ. ಅವಿಮುಕ್ತೇಶ್ವರವು ದ್ರಾವಿಡ ಶೈಲಿಯದಾಗಿದ್ದು ಅದನ್ನು ಸುಗತೂರಿನ ಪಾಳೇಗಾರ ತಮ್ಮೇಗೌಡನು ಕಟ್ಟಿಸಿದ್ದು ಎಂದು ಹೇಳುತ್ತಾರೆ. ಹೊಸಕೋಟೆಯಲ್ಲಿ ವೋಲ್ವೋ ವಾಹನ ತಯಾರಿಕಾಘಟಕವೂ ಇದೆ. ೧೯೪೬ರಲ್ಲಿ ಆರಂಭವಾದ ಹೊಸಕೋಟೆಯ ಮಾರ್ ಥೋಮಾ ಮಿಶನ್ ಸಂಸ್ಥೆಯು ಈ ಭಾಗದ ಅತ್ಯಂತ ಹಳೆಯ ಮಿಶನರಿ ಸಂಸ್ಥೆಗಳಲ್ಲೊಂದಾಗಿದೆ. ಈಗ ರೆವರೆಂಡ್ ಜೇಮ್ಸ್ ವೀರಮಾಲಾ ಅವರು ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಂಪರ್ಕ : ಹೊಸಕೋಟೆಯು ೧೩.೦೭ ಉತ್ತರ ಅಕ್ಷಾಂಶ ಮತ್ತು ೭೭.೮ ಪೂರ್ವ ರೇಖಾಂಶ ( 13.07° N 77.8° E )ದಲ್ಲಿದೆ[೧]. ಅದರ ಸರಾಸರಿ ಎತ್ತರವು ಸಮುದ್ರಮಟ್ಟದಿಂದ ೮೭೫ ಮೀಟರ್ಗಳು ಅಥವಾ ೨೮೭೦ ಅಡಿಗಳು.

ಪ್ರಮುಖ ವ್ಯಕ್ತಿಗಳು (ಸಾಹಿತ್ಯ)

ಬ್ಯಾಂಕುಗಳು

ವಿಕೀಪಿಡಿಯ