Jootoor Designs

Arrow Up

Arrow Down

ಕಂಪ್ಲಿ

ಕ್ರಿ. ಶ. 750 ನೇ ಶತಮಾನದಿಂದ ಕಂಪಿಲ ಪ್ರದೇಶದಲ್ಲಿ ರಾಜರ ಆಳ್ವಿಕೆ ಪ್ರಾರಂಭವಾಯಿತು. ತುಂಗಭದ್ರ ನದಿ ಹರಿಯುತ್ತಿರುವ ಪಕ್ಕದಲ್ಲಿ ಒಂದು ಸುಭೆದ್ರವಾದ ಕೋಟೆಯನ್ನು ನಿರ್ಮಿಸಿ, ವ್ಯವಸ್ಥಿತವಾಗಿ ರಾಜ್ಯವನ್ನು ವಿಸ್ತರಿಸಿ ಅನೇಕ ರಾಜರು ಅಳುತ್ತಾಬಂದರು. 12 ನೇ ಶತಮಾನದಲ್ಲಿ ಬಂದ ರಾಜ ಮನೆತನದ ಮುಮ್ಮಡಿ ಸಿಂಗೇಯ ನಾಯಕ ಈ ಕಂಪಿಲರಾಯ ಮತ್ತು ಮೂಮ್ಮಗ ಗಂಡುಗಲಿ ಕುಮಾರರಾಮನ ಚರಿತ್ರೆ ಅಜರಾಮರವಾಗಿ ಭೆವ್ಯವಾಗಿ ಅಳಿದ ನಾಡು ಇವರೊಂದಿಗೆ ಕೊನೆಗೊಂಡಿತು. ಇವರ ಕುರುಹಾಗಿ ಕಂಪಿಲರಾಯ ರಾಜ್ಯ ಆಳುತ್ತಿರುವುದರಿಂದ ಈ ಊರಿಗೆ ಕಂಪಿಲ, ಕಂಪಿಲ ಎಂಧು ಕರೆಯುತ್ತಿದ್ದರು. ಕಂಪಿಲ ನಾಮದಿಂದ ಕಂಪ್ಲಿ ಎಂಬ ಶಬ್ಧವು ಜನಜನಿತವಾಯಿತು. ಬ್ರಿಟಿಷರ ಕಾಲದಲ್ಲಿ ಕಂಪ್ಲಿಯು ತಾಲೂಕು ಕೇಂದ್ರವಾಗಿತ್ತು. ನಂತರ ಇದನ್ನು ಹೊಸಪೇಟೆ ನಗರಕ್ಕೆ ವರ್ಗಾಯಿಸಲಾಯಿತು. ಕಂಪ್ಲಿಯು ನೀರಾವರಿ ಪ್ರದೇಶವಾಗಿದ್ದು ಭತ್ತ, ಕಬ್ಬು , ಬಾಳಿ ಮುಖ್ಯವಾದ ಬೆಳೆಗಳಾಗಿವೆ. ಅಲ್ಲದೆ ಬಳ್ಳಾರಿ ಜಿಲ್ಲೆಗೆ ಕಂಪ್ಲಿಯು ಎಕೈಕ ಪುರಸಭೆ ಕಾರ್ಯಾಲಯವಿದ್ದು , 2ನೇ ಹಂತದ ಕುಡಿಯುವ ನೀರಿನ ಯೋಜನೆ ಯಿಂದ ಜನರಿಗೆ ಕುಡಿಯುವ ನೀರಿಗೆ ಬರವೇ ಇಲ್ಲವೆಂದೆ ಹೇಳಬೇಕು. ಇನ್ನು ವಾಣಿಜ್ಯ ಕೇಂದ್ರವಾದ ಕಂಪ್ಲಿ ಪಟ್ಟಣದಲ್ಲಿ 20 ಅಕ್ಕಿ ಗಿರಣಿ , 4 ಚಲನಚಿತ್ರ ಮಂದಿರಗಳು, ಅನೇಕ ಸರ್ಕಾರಿ ಕಛೇರಿಗಳು , ಬ್ಯಾಂಕಗಳು ಇವೆ. ಇನ್ನು ಸಾಹಿತ್ಯ ಕ್ಷೇತ್ರದಲ್ಲಿ ಬಂದರೆ ಇಲ್ಲಿ ಬಯಲಾಟ , ನಾಟಕ , ಕಲೆ , ಸಾಹಿತ್ಯ ಸಂಸ್ಕೈತಿಗಳ ತಾಣವಾಗಿದ್ದು , ಅನೇಕ ಸಂಘ ಸಂಸ್ಥಗಳಿದ್ದು , ಕನ್ನಡಪರ ಸಂಘಗಳು ಕನ್ನಡವನ್ನು ಬೆಳೆಸುವಲ್ಲಿ ಕಲೆ ಸಾಹಿತ್ಯವನ್ನು ಸಾಂಸ್ಕೈತಿಕ ಕಾರ್ಯಕ್ರಮಗಳ ಮೊಲಕ ನಡೆಸುತ್ತಾ ಬರುತ್ತಿವೆ. ಮತ್ತು ಇತರೆ ಸಂಘ ಸಂಸ್ಥಘಳು , ಕ್ರೀಡಾಕೊಟ ಇನ್ನು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಡೆಸುತ್ತಾ ಬುರುತ್ತಿವೆ.

ಕಂಪ್ಲಿ ಪಟ್ಟಣ ನೂತನ ವಿಧಾನಸಭಾ ಕ್ಷೇತ್ರಕ್ಕೆ ಆಯ್ಕೆಯಾಗಿರುವುದರಿಂದ ಕಂಪ್ಲಿ ಜನತೆಗೆ ಬಹು ಸಡಗರು ಸಂಭ್ರಮವಾಗಿ ಜನರು ಹರ್ಷದಿಂದ ಸ್ವಾಗತಿಸಿದ್ದಾರೆ. ಕಂಪ್ಲಿಯ ಗಂಡು ಮೆಟ್ಟಿನ ನಾಡಾದ ಗಂಡುಗಲಿ ಕುಮಾರರಾಮನ ಚರಿತ್ರೆಯನ್ನು ಬಳ್ಳಾರಿ ಜಿಲ್ಲೆಯ ದರೊಜಿ ಗ್ರಾಮದ ಬುಡ್ಗ ಜನಾಂಗದ ಶ್ರೀ ಮತಿ ಈರಮ್ಮ ಬುರ್ರಕಧಾ ( ಬಾಯಿ ಪಾಠ ) ಹೇಳುವ ಬಗೆ ಜನ ಮೆಚ್ಚುಗೆ ಪಡೆದಿದ. ಇದನ್ನು ಗುರುತಿಸಿ , ಹಂಪಿ ಕನ್ನಡ ವಿಶ್ವವಿದ್ಯಾಲಯವು " ಕರಡಿ ಧಾಮ " ಇರುವುದು ಒಂದು ವಿಶೇಷವಾಗಿದೆ. ಐತಿಹಾಸಿಕ ಸ್ಥಳವೆಂದರೆ ಗತ ವೈಭವದಲ್ಲಿದ್ದ ಶ್ರೀ ಸೋಮೇಶ್ವರ ದೇವಸ್ಥಾನ ಮತ್ತು ಮುಂದುಗಡೆ ಸೋಮಪ್ಪ ಕೆರೆ ಎಂದೆ ಪ್ರಸಿದ್ಧವಾದ ಪ್ರದೇಶವುಳ್ಳ ಬಹು ವಿಶಾಲವಾದ ಕೆರೆಯನ್ನು ಹೊಂದಿದೆ. ಮತ್ತು ಶ್ರೀ ಪಂಪಾಪತಿ ದೇವಸ್ಥಾನ ಇದು ತುಂಗಭದ್ರ ನದಿ ಪ್ರದೇಶದಲ್ಲಿದ್ದು ಪುರಾತನ ಕಾಲದವು.