Jootoor Designs

Arrow Up

Arrow Down

ಸಂಡೂರು

'ಸಂಡೂರು,' 'ಬಳ್ಳಾರಿ' ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಉತ್ತರದಲ್ಲಿ ಹೊಸಪೇಟೆ ತಾಲ್ಲೂಕು, ಪೂರ್ವದಲ್ಲಿ ಬಳ್ಳಾರಿ ತಾಲ್ಲೂಕು ಮತ್ತು ಆಂಧ್ರ ಪ್ರದೇಶ. ಆಗ್ನೇಯದಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ನೈಋತ್ಯ ಮತ್ತು ದಕ್ಷಿಣದಲ್ಲಿ ಕೂಡ್ಲಿಗಿ, ಪಶ್ಚಿಮದಲ್ಲಿ ಹೊಸಪೇಟೆ ತಾಲ್ಲೂಕು ಸುತ್ತುವರಿದಿವೆ. ತೋರಣಗಲ್ಲು, ಸಂಡೂರು, ಚೋರನೂರು-ಇವು ಹೋಬಳಿಗಳು. ಈ ತಾಲ್ಲೂಕಿನ ಸಂಡೂರು ಬೆಟ್ಟಗಳು ಅವುಗಳ ಸುತ್ತಲಿನ ವನಸಿರಿಯಿಂದ ಕೂಡಿದ ಬೇತೋಹಾರಿ ನಿಸರ್ಗಸೌಂದರ್ಯದಿಂದ, ಹಾಗೂ ,ಖನಿಜ ಸಂಪತ್ತಿನಿಂದ ಪ್ರಸಿದ್ಧವಾಗಿವೆ,.

'ಸಂಡೂರು,' ಹಾಗೂ ಅಕ್ಕ-ಪಕ್ಕದ ಊರುಗಳು ಕೆಲವೊಮ್ಮೆ, ಮಲೆನಾಡನ್ನು ಹೋಲುತ್ತವೆ : ಸಂಡೂರು ತಾಲ್ಲೂಕನ್ನು ನೀವು ಸೆಪ್ಟೇಂಬರ್ ತಿಂಗಳಲ್ಲಿ ನೊಡಿದರೆ, ಇದು 'ಉತ್ತರ ಕರ್ನಾಟಕದ ತಾಲ್ಲೂಕು ಅಲ್ಲ'ವೆಂದು ನಂಬುತ್ತಿರಿ, ಸುಂದರ ಬೆಟ್ಟಗಳಿಂದ ಕೂಡಿದ ಸುಂದರ ನಾಡು ಈ 'ಸಂಡೂರು'. ಇಲ್ಲಿನ ಬೆಟ್ಟಗಳು ಮಲೆನಾಡಿನ ಬೇಟ್ಟಗಳಿಗೆ ಹೋಲುತ್ತವೆ. ಇಲ್ಲಿ ನೋಟ ಮತ್ತು ಪರಿಸರ ಅದ್ಬುತವಾಗಿತ್ತು, ಆದರೆ ಈಗ 'ಕಬ್ಬಿಣದ ಅದೀರು' ಹೇರಳವಾಗಿ ದೋರೆಯುವುದರಿಂದ ಇದು ಅದೀರು ತೆಗೆಯಲು ಪರಿಸರ ನಾಶ ಮಾಡಿದ್ದಾರೆ ಹಾಗೂ ಇನ್ನೂ ಮಾಡುತ್ತಿದ್ದರೆ. ಇದರಲ್ಲಿ 'ಸರ್ಕಾರಿ' ಮತ್ತು 'ಖಾಸಗಿ ಸಂಸ್ಥೆಗಳ ಕೈವಾಡ'ವು ತುಂಬ ಹೇರಳವಾಗಿದೆ. ಸೊವೆನಹಳ್ಳೀ ಗ್ರಾಮದಲ್ಲಿ ಪ್ರತಿ ವರುಷ ಜನವರಿ ತಿನ್ಗಲಲ್ಲಿ ಸಾರಿ ದುರುಗಮ್ಮ ಜಾತ್ರಿ ಅದ್ದುರಿಯಗಿ ನದೆಯುತ್ತದೆ.

'ಬೊಮ್ಮಘಟ್ಟ' ದಲ್ಲಿ ರಥೋತ್ಸವ :ಇಲ್ಲಿಯ 'ಶ್ರೀ ಹುಲಿಕುಂಟೇರಾಯ ದೇವಸ್ಥಾನ'ವು ಪ್ರಸಿದ್ಧ. ಇಲ್ಲಿ ಪ್ರತೀ ವರ್ಷ ಪಾಲ್ಗುಣ ಶುಕ್ಲ ದದಶಮಿಯಂದು ರತೋತ್ಸವ ಇರುತ್ತದೆ. ಸಂಡೂರಿನ ಇತಿಹಾಸ ಮತ್ತು ವರ್ತಮಾನವನ್ನು ಅರ್ಥ ಮಾಡಿಕೊಳ್ಳಲು ಉಪಯುಕ್ತವಾಗುವ ಹೊಸತೊಂದು ಪುಸ್ತಕ, ೨೦೦೮ ರಲ್ಲಿ 'ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ'ದಿಂದ ಪ್ರಕಟವಾಗಿದೆ. ಆ ಪುಸ್ತಕದ ಹೆಸರು 'ಸೊಂಡೂರು ಭೂ ಹೋರಾಟ'. ಈ ಕೃತಿಯನ್ನು 'ಡಾ. ಅರುಣ್‌ ಜೋಳದ ಕೂಡ್ಲಿಗಿ' ಸಂಶೋಧನೆ ಮಾಡಿ ಬರೆದಿದ್ದಾರೆ. ಇದು ಕರ್ನಾಟಕದ ಸಮಾಜವಾದಿ ಹೋರಾಟಗಾರರ ಇತಿಹಾಸವನ್ನೂ ಕೂಡ ದಾಖಲಿಸುತ್ತದೆ. ಕರ್ನಾಟಕದಲ್ಲಿ ರೈತ ಹೋರಾಟ ಎಂದರೆ ಕೇವಲ ಕಾಗೋಡು ಸತ್ಯಗ್ರಹವನ್ನು ಮಾತ್ರ ಉಲ್ಲೇಖ ಮಾಡುತ್ತೇವೆ. ಆದರೆ ೧೯೭೩ ರಲ್ಲಿ 'ಸಂಡೂರಿನಲ್ಲಾದ ರೈತರ ಹೋರಾಟ' ಅಸಾಮಾನ್ಯವಾದುದು. ೧೩ ಸಾವಿರ ಎಕರೆ ಭೂಮಿಯನ್ನು ರೈತರು ಈ ಹೋರಾಟದಿಂದ ಪಡೆದರು. ಈ ಹೋರಾಟದಲ್ಲಿ ಹಿರಿಯ ಸಮಾಜವಾದಿ ನಾಯಕ, 'ಜಾರ್ಜ ಫರ್ನಾಂಡೀಸ್' ಮುಂತಾದವರು ಪಾಲ್ಗೊಂಡಿದ್ದರು. ಇದು 'ಸಂಡೂರು ಇತಿಹಾಸದಲ್ಲಿಯೇ ಅತ್ಯಂತ ಪ್ರಮುಖವಾದ ಪ್ರಮುಖ ಘಟನೆಯಾಗಿದೆ'. ಈ ಸಮಗ್ರ ದಾಖಲೆಯನ್ನು 'ಅರುಣ್‌ ಜೋಳದ ಕೂಡ್ಲಿಗಿ'ಯವರು ಈ ಕೃತಿಯಲ್ಲಿ ದಾಖಲಿಸಿದ್ದಾರೆ.