j o o t o o r

web counter

ನಮ್ಮ ಕನ್ನಡ ನಾಡು ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ


ಕರ್ನಾಟದ ಏಕೀಕರಣ ಅಂದರೆ ಸುಮ್ಮನೆಯೆ??: ಬಹಳಷ್ಟೂ ನಮ್ಮ ಕನ್ನಡಿಗರಿಗೆ ಗೊತ್ತಿಲ್ಲ ಕರ್ನಾಟದ ಏಕೀಕರಣ ಅಂದರೆ ಏನು, ಅನೇಕ ಕಡೆ ಸುವರ್ಣ ಸಂಭ್ರಮ ಆಗುತ್ತಿದೆ, ಗಲ್ಲಿ ಗಲ್ಲಿಗಳಲ್ಲಿ ಸಮಾರಂಭ ನಡೆಯುತ್ತಿದೆ. ಅದೇ ಹಾಡು-ಕುಣಿತ ಮತ್ತು ಕೆಲವು ರಾಜಕೀಯ ನಾಯಕರ ಮತ್ತು ಉಟ್ಟು ಹೋರಾಟಗಾರಾರ ಕಿವಿಗೆ ಅಪ್ ಪಳಿಸುವ ಭಾಷಣಗಳು. ಆದರೆ ಇದಕ್ಕೆ ನಿಜಕ್ಕೂ ಹೋರಾಡಿದ, ಭಗೀರಥ ಪ್ರಯತ್ನವನ್ನು ಮಾಡಿದ ಶ್ರೀ ಆಲೂರರ ಸಾಧನೆ ನಮ್ಮ ಇಂದಿನ ಜನಾಂಗಕ್ಕೆ ತಿಳಿಯದಿರುವುದು ದುಃಖದ ಸಂಗತಿ. ಉದ್ದಗಲಕ್ಕೂ ಹಂಚಿಹೋಗಿದ್ದ ನಮ್ಮ ರಾಜ್ಯವನ್ನು ಒಂದು ಮಾಡಿದ ಸಾಧನೆ ಕಡಿಮೆಯೇ, ಯಾಕೆ ನಾವು ಇವರನ್ನು ಸ್ಮರಿಸುತ್ತಿಲ್ಲ, ಯಾಕೆ ನಮ್ಮ ಶಿಕ್ಷಣದಲ್ಲಿ ಇವರ ಪಾಠವಿಲ್ಲ ?? ಎಲ್ಲೆಲ್ಲಿ ತೇಪೆಗಳಾಗಿದ್ದವು ಅಂತ ನಮ್ಮ ಜನಕ್ಕೆ ಗೊತ್ತೆ ??
 1. ಬೆಂಗಳೂರು ಗ್ರಾಮಂತರ, ಮಂಡ್ಯ, ಕೋಲಾರ, ತುಮಕೂರು. ಮೈಸೂರುಗಳನ್ನು ಒಳಗೊಂಡ ಮೈಸೂರು ಅರಸರ ಪ್ರಾಂತ್ಯ.
 2. ಬ್ರಿಟಿಷ್ ಆಡಳಿತದಲ್ಲಿ ಇದ್ದ ಬೆಂಗಳೂರು(ಕಂಟೋನ್ಮೆಂಟ್)
 3. ಬ್ರಿಟಿಷ್ ಆಡಳಿತ ಆದರೆ ಮುಂಬೈ ಪ್ರೆಸಿಡೆನ್ಸಿದಲ್ಲಿ ಇದ್ದ ಬೆಳಗಾವಿ, ಉತ್ತರ ಕನ್ನಡ, ಧಾರವಾಡ ಮತ್ತು ವಿಜಾಪುರ. ಉತ್ತರ ಮತ್ತು ದಕ್ಶಿಣ ಸೊಲ್ಲಾಪುರ ಮತ್ತು ಮಂಗಳವಾಡೆ.
 4. ಬ್ರಿಟಿಷ್ ಮದ್ರಾಸ್ ಪ್ರಾಂತ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡು, ಬಳ್ಳಾರಿ, ಪೆನೆಗೊಂಡ, ನೀಲಗಿರಿ, ಕೊಳ್ಳೆಗಾಲ, ಹಿಂದೂಪುರ, ಕಲ್ಯಾಣದುರ್ಗ, ಪೆನಗೋಂಡ, ಹೊಸೂರು, ಮಡಕಶಿರಾ ಮತ್ತು ತಾಳವಾಡಿ.
 5. ಕೊಡಗು
 6. ಹೈದಾರಬಾದ್ ಸಂಸ್ಥಾನಕ್ಕೆ ಸೇರಿದ ಬೀದರ್, ರಾಯಚೂರು ಮತ್ತು ಗುಲ್ಬರ್ಗ
 7. ಸಾಂಗ್ಲಿ ಸಂಸ್ಥಾನಕ್ಕೆ ಸೇರಿದ ಷಾಪುರ, ಶಿರಹಟ್ಟಿ, ದೊಡ್ದವಾಡ.
 8. ಮೀರಜ್ ಸಂಸ್ಥಾನಕ್ಕೆ ಸೇರಿದ ಲಕ್ಶ್ಮೇಶ್ವರ
 9. ಕಿರಿಯ ಮೀರಜ್ ಸಂಸ್ಥಾನಕ್ಕೆ ಸೇರಿದ ಗುಡಗೇರಿ
 10. ಹಿರಿಯ ಕುರುಂದ್ ನಾಡ್
 11. ವಡಗಾಂವ್
 12. ಔಂದ್ ಸಂಸ್ಥಾನಕ್ಕೆ ಸೇರಿದ ವಿಜಾಪುರದ ಗುಣದಾಳು
 13. ರಾಮದುರ್ಗ ಸಂಸ್ಥಾನ
 14. ಜಮಖಂಡಿ ಸಂಸ್ಥಾನಕ್ಕೆ ಸೇರಿದ ಕುಂದಗೋಳ, ಚಿಪ್ಪಲಕಟ್ಟಿ ೧೫) ಮುಧೋಳ ಸಂಸ್ಥಾನಕ್ಕೆ ಸೇರಿದ ಮುಧೊಳ್
 15. ಸೊಂಡುರು ಸಂಸ್ಥಾನಕ್ಕೆ ಸೇರಿದ ಸೊಂಡುರು
 16. ಜತ್ ಸಂಸ್ಥಾನಕ್ಕೆ ಸೇರಿದ ಜತ್ ಜಿಲ್ಲೆ
 17. ಸವಣೂರು ಸಂಸ್ಥಾನಕ್ಕೆ ಸೇರಿದ ಸವಣೂರು ಜಿಲ್ಲೆ
 18. ಅಕ್ಕಲಕೋಟೆಯ ಸಂಸ್ಥಾನಕ್ಕೆ ಸೇರಿದ ಅಕ್ಕಲಕೋಟೆ ಜಿಲ್ಲೆ ಹೀಗೆ ಅನೇಕರ ಕೈಗಳಲ್ಲಿ ಹಂಚಿಹೊಗಿದ್ದ ಕರುನಾಡನ್ನು ಒಂದು ಮಾಡಿದ್ದು ನಿಜಕ್ಕೂ ಮಾಯೆಯೆ ಸರಿ, ಕನ್ನಡಿಗರ ಹಿತ ರಕ್ಸಿಸುವ ಒಂದು ರಾಜ್ಯವಿರಲಿಲ್ಲ, ನಮ್ಮ ಜನರನ್ನು ಆಳುವ ಪ್ರಭುಗಳು ಇತರ ಭಾಷಿಕರಾಗಿದ್ದು, ನಾವು ಅನಾಥಪ್ರಜ್ನೆ ಅನುಭವಿಸುತ್ತ ಇದ್ದೆವೂ. ಏಕೀಕರಣಕ್ಕೆ ಅಡ್ದಿ ಆತಂಕಗಳು ಬರಲಿಲ್ಲ್ವವೇ ?? ಬಂಡಾಯದ ಧ್ವನಿ ಕೇಳಿಬಂದವೂ, ಆದರೂ ದೃತಿಗೆಡದೆ ಕನ್ನಡದ ಹಿತಕ್ಕೆ ಇಟ್ಟ ಹೆಜ್ಜೆಯನ್ನು ಹಿಂದೆ ತೆಗೆಯದ ಆ ಚೇತನ ನಮ್ಮ ಇಂದಿನ ಪೀಳಿಗೆಗೆ ಮಾದರಿ.

ಇವರನ್ನು ನೆನೆಯದೆ ನಾವು ಒಬ್ಬ ಸಿನೆಮಾ ನಟನನ್ನು ಇಲ್ಲ ಬೇರೆಯವರನ್ನು ನೆನೆದು ಅವರಿಗೆ ಸನ್ಮಾನ ಮಾಡುವುದು ಎಷ್ಟರ ಮಟ್ಟಿಗೆ ಸರಿ ?? ಆಗಿನ ಕನ್ನಡದ ಸ್ಥಿತಿ ಹೇಗಿತ್ತು ಗೊತ್ತಾ ?? "ಅಕ್ಕ ತಂಗಿಯರೆಲ್ಲಾ ಮುಂದುಮುಂದಾಗಿರಲು ನಮ್ಮ ತಾಯಿಯೊಬ್ಬಳೆ ಸೊರಗಿರುವಳಲ್ಲ? ಅಮ್ಮನನ್ನು ಕೈಬಿಡದೆ ಇನ್ನು ಮೆರಸುವೆವೆ? ಹಿರಿಯ ಹೆಸರನು ತಿರುಗಿ ಗಳಸಿಕೊಳ್ಳುವವೆ ? ಸರಿಯವರ ತಲೆಮಟ್ಟಿ ಮುಂದೆ ನಿಲ್ಲುವವೆ ? ನೆಮ್ಮದಿಯ ಬೆಳಕಿನಲಿ ನಾವು ಬಾಳುವೆವೆ ??" ಅಂತ ತೀ.ನಂ.ಶ್ರೀ ಬರೆದಿದ್ದರು. ಇದನ್ನು ಡಾ|| ಸೂರ್ಯನಾಥ ಕಾಮತ್ ಅವರ ಏಕೀಕರಣದ ಪುಸ್ತಕ ಓದುವಾಗ ನನಗೆ ಅನಿಸಿದ್ದು. ನೀವು ತಪ್ಪದೇ ಓದಿ.


Jootoor Designers       RP Square Designers