Jootoor Designs

Arrow Up

Arrow Down

  

ರಾಷ್ಟ್ರಕೂಟ

ರಾಷ್ಟ್ರಕೂಟರು ಕ್ರಿ.ಶ. ೮ ರಿಂದ ೧೦ನೇ ಶತಮಾನದವರೆಗೆ ದಖ್ಖನವನ್ನು ಆಳಿದ ರಾಜವಂಶ. ದಂತಿದುರ್ಗನಿಂದ ಮೊದಲುಗೊಂಡ ಇವರ ಮೂಲಸ್ಥಾನ ಲಟ್ಟಲೂರು ಆಗಿದ್ದು, ತದನಂತರ ತಮ್ಮ ರಾಜಧಾನಿ ಮಾನ್ಯಖೇಟದಿಂದ ಆಳ್ವಿಕೆ ನಡೆಸಿದರು.

ಸಾಹಿತ್ಯ ಮತ್ತು ಸಂಸ್ಕೃತಿ : ರಾಷ್ಟ್ರಕೂಟರ ಕಾಲದಲ್ಲಿ ಕನ್ನಡದಲ್ಲಿ ಹಲವಾರು ರೀತಿಯ ರಚನೆಗಳು ಇದ್ದವೆಂದು ತಿಳಿದು ಬರುವುದು. ಬದಂಡೆ, ಚತ್ರಾಣ, ಮುಂತಾದ ಕಾವ್ಯಭೇದಗಳಿದ್ದವು. ಪ್ರಾಂತದ ಭಾಷೆ ತಿರುಳುಗನ್ನಡವೆಂದು ಹೆಸರು ಪಡೆದಿತ್ತು. ಆ ಸಮಯದಲ್ಲಿ ಮತ್ತು ನೃಪತುಂಗನಿಗಿಂತಲು ಹಿಂದೆ ಅನೇಕ ಕವಿಗಳಿದ್ದರೆಂದು ರಾಜಾ ನೃಪತುಂಗನು ತನ್ನ ’’ಕವಿರಾಜಮಾರ್ಗ’’ ಕೃತಿಯಲ್ಲಿ ತಿಳಿಸಿದ್ದಾನೆ. ರಾಮಾಯಣ, ಮಹಾಭಾರತಗಳ ಸಂಕ್ಷಿಪ್ತ ಕನ್ನಡರೂಪ ಲಭ್ಯವಾಗಿದ್ದವು. ೫ ನೇ ಶತಮಾನದ ಕನ್ನಡದ ಶಾಸನದ ನಂತರದಲ್ಲಿ ಪ್ರಥಮವಾಗಿ ರಚಿತವಾಗಿರುವ ಕವಿರಾಜಮಾರ್ಗದಲ್ಲಿ ಕಾವೇರಿಯಿಂದ ಗೋದಾವರಿಯವರೆಗೆ ಇದ್ದ ನಾಡು ಕನ್ನಡನಾಡು ಎಂದು ತಿಳಿಸಲಾಗಿದೆ. ಆ ಸಮಯದಲ್ಲಿ ಹಲವಾರು ಜೈನ ಕವಿಗಳಿದ್ದರು. ಶಿವಕೋಟಿ ಆಚಾರ್ಯನ ‘’ವಡ್ಡಾರಾಧನೆ’’ ಮೊದಲ ಗದ್ಯಕೃತಿ ರಚಿತವಾಗಿತ್ತು.

ರಾಷ್ಟ್ರಕೂಟ ಅರಸರು (753-982)

 • ದಂತಿದುರ್ಗ (735 - 756)
 • ಮೊದಲನೇ ಕೃಷ್ಣ (756 - 774)
 • ಇಮ್ಮಡಿ ಗೋವಿಂದ (774 - 780)
 • ಧ್ರುವ ಧಾರಾವರ್ಷ (780 - 793)
 • ಮುಮ್ಮಡಿ ಗೋವಿಂದ (793 - 814)
 • ಮೊದಲನೇ ಅಮೋಘವರ್ಷ (814 - 878)
 • ಇಮ್ಮಡಿ ಕೃಷ್ಣ (878 - 914)
 • ಮುಮ್ಮಡಿ ಇಂದ್ರ (914 -929)
 • ಇಮ್ಮಡಿ ಅಮೋಘವರ್ಷ (929 - 930)
 • ನಾಲ್ವಡಿ ಗೋವಿಂದ (930 – 936)
 • ಮುಮ್ಮಡಿ ಅಮೋಘವರ್ಷ (936 – 939)
 • ಮುಮ್ಮಡಿ ಕೃಷ್ಣ (939 – 967)
 • ಕೊಟ್ಟಿಗ ಅಮೋಘವರ್ಷ (967 – 972)
 • ಇಮ್ಮಡಿ ಕರ್ಕ (972 – 973)
 • ನಾಲ್ವಡಿ ಇಂದ್ರ (973 – 982)
 • ಇಮ್ಮಡಿ ತೈಲಪ (973-997)