Jootoor Designs

Arrow Up

Arrow Down

  

ಜನಪದ ಕಥನ ಕಾವ್ಯಗಳು

ಕೆರೆಗೆ ಹಾರ

ಕೆರೆಗೆ ಹಾರ ಒಂದು ಜನಪದ ಕಾವ್ಯ. ಇದನ್ನು ನಾವು ಒಂದು ಪ್ರೇಮಕಥೆ ಎಂದು ಭಾವಿಸಬಹುದು. ಈ ಹಾಡಿನಲ್ಲಿ ಭಾಗೀರಥಿ ಎಂಬ ಮಹಿಳೆಯನ್ನು ಬಲಿ-ಯಾಗಿ ಕೊಡಲಾಗುತ್ತದೆ. ಆಗ ಅವಳ ಮನಸ್ಸಿನ ತಳಮಳವನ್ನು ಹಾಡಿನಲ್ಲಿ ಸೂಕ್ಷ್ಮವಾಗಿ ಬಿಂಬಿಸಲಾಗಿದೆ.

ಬಲಿ

ಮಾನವನ ಮೂಲಭೂತ ಕ್ರಿಯೆಗಳಲ್ಲಿ ಒಂದಾದ ಆಹಾರ ಭಕ್ಷಣೆ ಪ್ರಾಕೃತಿಕ ನಿಯಮ, ತನ್ನ ಹಸಿವನ್ನು ಹಿಂಗಿಸಿಕೊಳ್ಳುವುದಕ್ಕಾಗಿ ಮನುಷ್ಯ ಏನುಬೇಕಾದರೂ ಮಾಡಬಲ್ಲ. ದೈವ-ದೇವರ ಹೆಸರಿನಲ್ಲಿ ರೂಢಿಸಿಕೊಂಡ ವಿಧಿ ವಿಧಾನಗಳನ್ನು ಸೂಕ್ಷ್ಮವಾಗಿ ನೋಡಿದ್ದೆ ಆದರೆ ತನ್ನ ಸಮುದಾಯದ ಜನವರ್ಗದವರ ಭದ್ರತೆಗೆ ಮೊದಲ ತಾನು ಬೆಳೆದ ಮೊದಲ ಫಲವನ್ನು ಪ್ರಕೃತಿಗೆ ಕೊಟ್ಟು ಆ ಬಳಿಕ ತಾನು ಉಪಯೋಗಿಸಿಕೊಂಡ, ಕೆರೆಯಲ್ಲಿ ನೀರು ಉಕ್ಕಿಬರಲು ಕೆರೆಗೆ ಹಾರ (ಬಲಿ) ಅಥವಾ ಕೋಟೆ ಕೊತ್ತಳಗಳು ಭದ್ರವಾಗಿ ನಿಲ್ಲಲು ನರಬಲಿ,(ರಾಯಚೂರು ಕೋಟೆಗೆ ಬಲಿ 'ರಾಚೂರುಕೋಟಿಗೆ ಹಾರ') ಪ್ರಾಣಿಬಲಿ ಕೊಟ್ಟ ನಿದರ್ಶನಗಳಿವೆ. ಮನುಷ್ಯ ತಾನು ಭೇಟೆಯಾಡಿದ ಮೊದಲ ಪ್ರಾಣಿಯನ್ನು ದೇವರ ಹೆಸರಿನಲ್ಲಿ ಮೊದಲು ಅರ್ಪಣೆ ನೀಡಿದ್ದಾನೆ, ಹೀಗೆ ನಂಬಿದ ಕುಲದೇವತೆಗಳಿಗೆ ಅಥವಾ ಸ್ಥಳೀಯ ಸ್ಥಳದ ದೈವ ಸಾನಿಧ್ಯಕ್ಕೆ ಬಲಿ ಅರ್ಪಿಸಿ ಆ ಬಳಿಕ ಪ್ರಸಾದವಾಗಿ/ಆಹಾರವಾಗಿ ಸ್ವೀಕರಿಸಿದ್ದಾನೆ. ಸಾಮಾನ್ಯ ಅರ್ಥದಲ್ಲಿ ಬಲಿ ಎಂದರೆ ಅರ್ಪಿಸುವುದು. ಏನನ್ನು ಅರ್ಪಿಸುವುದು? ಜೀವ ಹೊಂದಿರುವಂತಹ ಅಥವಾ ಹಸಿಯಾಗಿರುವ ಯಾವುದೇ ರೂಪವನ್ನು ಎಡೆಯ ರೂಪದಲ್ಲಿ ನೀಡುವ ಮನುಷ್ಯ ತಾನು ನಂಬಿದ ದೈವ ಶಕ್ತಿಯನ್ನು ಸಂತೃಪ್ತಿ ಪಡಿಸಲೊಸ್ಕರವಾಗಿ ಬಲಿ ಪ್ರಕ್ರಿಯೆ ಆದಿಮಾನವನಿಂದ ಹಿಡಿದು ಇಂದಿನ ಆಧುನಿಕ ಕಂಪ್ಯೂಟರ್ ಯುಗದವರೆಗೂ ನಡೆದಿವೆ, ನಡೆಯುತ್ತಲೇ ಬಂದಿದೆ.