Jootoor Designs

Arrow Up

Arrow Down

  

ಗೀತಾ ಎಸ್. ಹೆಬ್ಳೀಕರ್

ಗೀತಾ ಎಸ್. ಹೆಬ್ಳೀಕರ್ಹಿಂದೂಸ್ತಾನಿ ಸಂಗೀತಗಾರ್ತಿ ಗೀತಾ ರವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನ ಅಸೂಟಿ ಗ್ರಾಮ. ತಂದೆ ದತ್ತಾತ್ರೇಯ ಮಂಡಿಗೇರಿ, ತಾಯಿ ಕಲಾವತಿ ಮಂಡಿಗೇರಿ. ಬೆಳೆದ ಸಂಗೀತದ ಆಸಕ್ತಿಯಿಂದ ಕಲಿತದ್ದು ಕರ್ನಾಟಕ ಕಾಲೇಜಿನಿಂದ ಸಂಗೀತ ಪದವಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ. ಪಂಡಿತ ಸಂಗಮೇಶ್ವರ ಗುರುವ ಅವರಲ್ಲಿ ಹಿಂದೂಸ್ತಾನಿ ಸಂಗೀತದ ಕಲಿಕೆ. ೧೫ ವರ್ಷಗಳಿಗೂ ಮಿಕ್ಕು ಶಿಷ್ಯವೃತ್ತಿ. ಕಿರಾನಾ ಘರಾನಾ ಶೈಲಿಯಲ್ಲಿ ಪಡೆದ ಪ್ರಾವೀಣ್ಯತೆ. ಸುಗಮ ಸಂಗೀತ ಕ್ಷೇತ್ರದಲ್ಲೂ ಪಡೆದ ಪರಿಣತಿ. ಆಕಾಶವಾಣಿಯಲ್ಲಿ ಸುಗಮಸಂಗೀತ ಹಾಗೂ ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ಬಿ. ಹೈಗ್ರೇಡ್ ಕಲಾವಿದೆ.

ಧಾರವಾಡ ರಾಣಿಬೆನ್ನೂರು, ಹಳಿಯಾಳ, ಬಾದಾಮಿ, ಮಂಡ್ಯ, ಶಿವಮೊಗ್ಗ, ಹುಬ್ಬಳ್ಳಿ, ಮೈಸೂರು, ಶಿರಸಿ, ಹಾವೇರಿ, ದಾಂಡೇಲಿ, ಕೊಲ್ಹಾಪುರ, ಸಾಂಗ್ಲಿ, ಪುಣೆ ಮುಂತಾದ ನಗರಗಳಲ್ಲಿ ನೀಡಿದ ಕಾರ್ಯಕ್ರಮಗಳು.

ಹಲವಾರು ಸಂಗೀತೋತ್ಸವಗಳಲ್ಲಿ ಭಾಗಿ. ದಕ್ಷಿಣವಲಯ ಯುವಜನೋತ್ಸವ, ಸಂಗೀತ ಭಾರತಿ ವೇದಿಕೆ, ಈಚಲ ಕರಂಜಿ ಪಂ. ಬಾಲಕೃಷ್ಣಬುವಾ ಸಂಗೀತ ಸಾಧನ ಮಂಡಲ, ಡಾ. ವಸಂತರಾವ್ ದೇಶಪಾಂಡೆ ಸಂಗೀತ ಸ್ಪರ್ಧೆ, ಕರಾವಳಿ ಉತ್ಸವ, ಬನವಾಸಿಯ ಕದಂಬೋತ್ಸವ, ಮೈಸೂರು ದಸರಾ ಉತ್ಸವದ ಸಂಗೀತ ಕಾರ್ಯಕ್ರಮ, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಗೀತ ಕಲಾಕಾರ ಮಂಡಲಿಯ ಕಾರ್ಯಕ್ರಮ, ಸಂಗೀತ ಕುಟೀರದ ಗಾಯನ ಕಾರ್ಯಕ್ರಮ, ಸಂಸ್ಕೃತಿ ಇಲಾಖೆಯ ವಚನ ಗಾಯನ ಕಾರ್ಯಕ್ರಮ, ಹಳಿಯಾಳದ ಕರಾವಳಿ ಉತ್ಸವ, ಸಂಸ್ಕೃತಿ ಇಲಾಖೆ ಲಾಲ್‌ಬಾಗ್‌ನಲ್ಲಿ ನಡೆಸಿದ ಉದಯರಾಗ ಕಾರ್ಯಕ್ರಮ ಮುಂತಾದುವುಗಳಲ್ಲಿ ಭಾಗಿ.

ಸಂದ ಹಲವಾರು ಗೌರವ ಪ್ರಶಸ್ತಿಗಳು. ಗಂಗೂಬಾಯಿ ಹಾನಗಲ್ ನೇತೃತ್ವದ ‘ತಾಮ್ಹಣಕರ ಪ್ರಶಸ್ತಿ’, ಸಾಂಗ್ಲಿಯಲ್ಲಿ ನಡೆದ ಕಾರ್ಯಕ್ರಮದ ‘ಅಣ್ಣಾ ಸಾಹೇಬ್ ಕರಾಳೆ ಪ್ರಶಸ್ತಿ’ ರಾಜ್ಯ ಸಂಗೀತ ಅಕಾಡಮಿಯ ಬಹುಮಾನ, ಹಲವಾರು ಸಂಗೀತ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಮುಂತಾದ ಗೌರವಗಳು. ಇದೀಗ ಅರೋಬಿಂದು ಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿ ಕಾರ್ಯನಿರ್ವಹಣೆ.

ಮೂಲ: ಕಣಜ, ಲೇಖಕರು : ವೈ.ಎನ್. ಗುಂಡೂರಾವ್‌