Homeಭಗವದ್ಗೀತೆ ಶ್ಲೋಕ |  Contact UsGoogle+
Bhagavad Gita
ಹಿಂದೂ ಧರ್ಮ ವೇದ ಉಪನಿಷತ್ ಮಹಾಕಾವ್ಯಗಳು ಭಗವದ್ಗೀತೆ ಪುರಾಣಗಳು ಭಗವದ್ಗೀತೆ ಶ್ಲೋಕ ಪಂಚಾಂಗ Other Links
 
 
 

ಪಂಚಾಂಗ

ಪಂಚಾಂಗ ಕಾಲದ ವಿಭಾಗಗಳನ್ನು ಕ್ರಮಬದ್ಧವಾಗಿ ಸಂಘಟಿಸುವ ಒಂದು ಪದ್ದತಿ. ಸಾಮಾನ್ಯವಾಗಿ ಖಗೋಳವಿದ್ಯೆಯ ವೀಕ್ಷಣೆಗಳ ಆಧಾರದ ಮೇಲೆ ಇವನ್ನು ರಚಿಸಲಾಗುತ್ತದೆ.

ಪುರಾಣಗಳು ಪುರಾತನ ಹಿಂದೂ ಧರ್ಮದ ಒಂದು ಸಾಹಿತ್ಯ ಪ್ರಕಾರ. ಇವು ವೇದಗಳಲ್ಲಿ ವರ್ಣಿಸಲಾದ ರಹಸ್ಯ, ಅರ್ಥಗಳನ್ನು ವಿವರವಾಗಿ ಬೋಧಿಸುವ ಗ್ರಂಥಗಳು . ಪುರಾಣಗಳಲ್ಲಿ ಮಹಾಪುರಾಣವೆಂದೂ, ಉಪಪುರಾಣವೆಂದೂ ಎರಡು ಭೇದಗಳಿವೆ. ಪುರಾಣಗಳನ್ನು ಅನೇಕ ಮಂದಿ ಮಹರ್ಷಿಗಳು ಬೇರೆ ಬೇರೆ ಕಾಲಗಳಲ್ಲಿ ರಚಿಸಿದರು.

ಹಿಂದೂ ಪಂಚಾಂಗ

ಹಿಂದೂಗಳ ಸೌರಮಾನ,ಚಾಂದ್ರಮಾನ ರೀತಿಯ ಕಾಲಗಣನೆಗೆ ಪಂಚಾಂಗವೆಂದು ಕರೆಯುತ್ತಾರೆ.ಪಂಚಾಂಗವೆಂದರೆ, ಪಂಚ + ಅಂಗ = ಐದು ಅಂಗಗಳನ್ನು ಒಳಗೊಂಡದ್ದು. ತಿಥಿ , ವಾರ , ನಕ್ಷತ್ರ , ಯೋಗ ,ಮತ್ತು ಕರಣಗಳು - ಇವೇ ಆ ಐದು ಅಂಗಗಳು.ಇವುಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿಸುವಂಥದ್ದು ಪಂಚಾಂಗ.

ತಿಥಿಗಳು

ತಿಥಿಗಳು ಮೂವತ್ತು(೩೦).೩೦ ತಿಥಿಗಳನ್ನು ಎರಡು ಪಕ್ಷಗಳಲ್ಲಿ ೧೫ರಂತೆ ಎಣಿಕೆ ಮಾಡಲಾಗುತ್ತದೆ.ಪಾಡ್ಯ(ಪ್ರತಿಪದೆ)ದಿಂದ ಮೊದಲುಗೊಂಡು ಹುಣ್ಣಿಮೆಯವರೆಗೆ ಬರುವ ಮೊದಲ ೧೫ ತಿಥಿ(ದಿನ)ಗಳಿಗೆ ಶುಕ್ಲಪಕ್ಷವೆಂತಲೂ, ಪಾಡ್ಯದಿಂದ ಅಮಾವಾಸ್ಯೆಯವರೆಗೆ ಬರುವ ಮುಂದಿನ ೧೫ ತಿಥಿ(ದಿನ)ಗಳಿಗೆ ಕೃಷ್ಣಪಕ್ಷವೆಂತಲೂ ಕರೆಯುತ್ತಾರೆ.

ಪಾಡ್ಯ,ಬಿದಿಗೆ,ತದಿಗೆ,ಚೌತಿ,ಪಂಚಮಿ,ಷಷ್ಠಿ,ಸಪ್ತಮಿ,ಅಷ್ಟಮಿ,ನವಮಿ,ದಶಮಿ,ಏಕಾದಶಿ,ದ್ವಾದಶಿ,ತ್ರಯೋದಶಿ,ಚತುರ್ದಶಿ,ಹುಣ್ಣಿಮೆ / ಅಮಾವಾಸ್ಯೆ.

ವಾರಗಳು

ವಾರಗಳು ಏಳು (೭).ಅವು ಸೋಮವಾರ,ಮಂಗಳವಾರ,ಬುಧವಾರ,ಗುರುವಾರ,ಶುಕ್ರವಾರ,ಶನಿವಾರ ಮತ್ತು ಭಾನುವಾರ.ನವಗ್ರಹಗಳಲ್ಲಿ ರಾಹು,ಕೇತುಗಳನ್ನು ಬಿಟ್ಟು ಮಿಕ್ಕ ಏಳು ಅಂದರೆ ಚಂದ್ರ,ಮಂಗಳ,ಬುಧ,ಗುರು,ಶುಕ್ರ,ಶನಿ ಹಾಗೂ ರವಿ -ಈ ಗ್ರಹಗಳ ಹೆಸರಿನಿಂದ ವಾರಗಳನ್ನು ಹೆಸರಿಸಿದೆ.

ನಕ್ಷತ್ರಗಳು(೨೭)

ಮಾಸಗಳು (೧೨)

ಅಧಿಕ ಮಾಸಗಳು

ಸೂರ್ಯನು ಯಾವುದೇ ರಾಶಿಯಲ್ಲೂ ಪ್ರಯಾಣಿಸದೇ ಒಂದು ಚಾಂದ್ರಮಾನ ಮಾಸದಲ್ಲಿ ಸಂಪೂರ್ಣವಾಗಿ ಒಂದು ರಾಶಿಯ ಒಳಗೇ ಚಲಿಸುತ್ತದ್ದರೇ (ಅಂದರೆ ಅಮಾವಾಸ್ಯೆಗೆ ಮೊದಲು), ಆ ಚಾಂದ್ರಮಾನ ಮಾಸವನ್ನು ಮುಂಬರುವ ಮೊದಲ ಸಂಕ್ರಮಣದ ಪ್ರಕಾರ ಹೆಸರಿಸಲಾಗುತ್ತದೆ. ಅದು ಅಧಿಕ ಎಂಬ ಉಪಾಧಿಯನ್ನು ತೆಗೆದುಕೊಳ್ಳುತ್ತದೆ. ಉದಾಹರಣೆಗೆ, ಒಂದು ಚಾಂದ್ರಮಾನ ಮಾಸವು ಸಂಕ್ರಮಣವಿಲ್ಲದೆಯೇ ಸರಿದುಹೋದರೆ ಮತ್ತು ಮುಂದಿನ ಸಂಕ್ರಮಣವು ಮೇಷದಲ್ಲಿದ್ದರೆ, ಸಂಕ್ರಮಣವಿಲ್ಲದ ಆ ಮಾಸವನ್ನು ಅಧಿಕ ಚೈತ್ರವೆಂದು ಹೆಸರಿಸಲಾಗುತ್ತದೆ.

ಋತುಗಳು ೬ (೨ ಮಾಸಗಳಿಗೆ ಒಂದು ಋತು)

ಆಯನಗಳು (೨)

ಉತ್ತರಾಯಣ ಮತ್ತು ದಕ್ಷಿಣಾಯನ ಪ್ರತಿ ವರ್ಷದ ಜನವರಿ ೧೪ ರಿಂದ ಜುಲೈ ೧೬ ರವರೆಗೆ ಸೂರ್ಯನು ಉತ್ತರಕ್ಕೆ ಸಂಚರಿಸುವುದರಿಂದ ಉತ್ತರಾಯಣವೆಂದೂ, ಜುಲೈ ೧೬ರಿಂದ ಜನವರಿ ೧೪ ರವರೆಗೆ ಸೂರ್ಯನು ದಕ್ಷಿಣ ದಿಕ್ಕಿಗೆ ಬಾಗಿ ಸಂಚರಿಸುವುದರಿಂದ ದಕ್ಷಿಣಾಯಣವೆಂದೂ ಗುರುತಿಸಲಾಗಿದೆ.

ಯೋಗಗಳು (೨೭)

ಕರಣಗಳು (೧೧)