Homeಭಗವದ್ಗೀತೆ ಶ್ಲೋಕ |  Contact UsGoogle+
Bhagavad Gita
ಹಿಂದೂ ಧರ್ಮ ವೇದ ಉಪನಿಷತ್ ಮಹಾಕಾವ್ಯಗಳು ಭಗವದ್ಗೀತೆ ಪುರಾಣಗಳು ಭಗವದ್ಗೀತೆ ಶ್ಲೋಕ ಪಂಚಾಂಗ Other Links
 
 
 

ಪ್ರಕಾರಗಳು

ನಮಗೆ ಪರಿಚಿತವಾಗಿರುವ ಹಿಂದೂ ಧರ್ಮವನ್ನು ಹಲವಾರು ಪ್ರಮುಖ ಪಥಗಳಾಗಿ ವಿಭಜಿಸಬಹುದು. ಆರು ದರ್ಶನಗಳಲ್ಲಿ ಐತಿಹಾಸಿಕ ವಿಭಜನೆಯ ಪೈಕಿ, ಕೇವಲ ಎರಡು ಪಂಥಗಳು, ವೇದಾಂತ ಮತ್ತು ಯೋಗ ಅಸ್ತಿತ್ವದಲ್ಲಿವೆ. ವೈಷ್ಣವ ಪಂಥ, ಶೈವ ಪಂಥ, ಸ್ಮಾರ್ತ ಪಂಥ ಹಾಗೂ ಶಕ್ತಿ ಪಂಥ ಈಗಿರುವ ಹಿಂದೂ ಧರ್ಮದ ಪ್ರಮುಖ ವಿಭಾಗಗಳು.

ಸಮಕಾಲೀನ ಹಿಂದೂ ಧರ್ಮವು ಪ್ರಧಾನವಾಗಿ ಏಕದೇವತಾವಾದಿಯಾಗಿದೆ, ಆದರೆ ಹಿಂದೂ ಸಂಪ್ರದಾಯವು ಸರ್ವ ದೇವತಾವಾದಿ, ಸರ್ವಬ್ರಹ್ಮವಾದಿ, ಬಹುದೇವತಾವಾದಿ, ಮತ್ತು ನಿರೀಶ್ವರವಾದಿ ಎಂದೂ ವಿವರಿಸಬಲ್ಲ ಅಂಶಗಳನ್ನು ಒಳಗೊಂಡಿದೆ. ಇತರ ಗಮನಾರ್ಹ ವೈಶಿಷ್ಟ್ಯಗಳು, ಪುನರ್ಜನ್ಮ ಹಾಗೂ ಕರ್ಮಗಳಲ್ಲಿ ನಂಬಿಕೆ, ಮತ್ತು ವೈಯಕ್ತಿಕ ಕರ್ತವ್ಯವಾದ ಧರ್ಮದಲ್ಲಿನ ನಂಬಿಕೆಯನ್ನು ಸಹ ಒಳಗೊಳ್ಳುತ್ತವೆ.

ಹೆಚ್ಚಾಗಿ ಒಂದು ಸಂಕೀರ್ಣ ವಿಷಯದಲ್ಲಿನ ವಿವಿಧ ದೃಷ್ಟಿಗಳಿಗೆ ಸ್ಥಳಮಾಡಿಕೊಡುವ ಪ್ರಯತ್ನವಾಗಿ, ಮೆಕ್‌ಡ್ಯಾನಿಯಲ್ (೨೦೦೭) ಹಿಂದೂ ಧರ್ಮದ ಆರು ಜಾತಿವಾಚಕ "ಪ್ರಕಾರಗಳನ್ನು" ಗುರುತಿಸುತ್ತಾರೆ:

ಮುಂಚಿನ ಐರೋಪ್ಯ ಪ್ರವಾಸಿಗಳು ಮತ್ತು ಕ್ರೈಸ್ತ ಧರ್ಮಪ್ರಚಾರಕರು ಹಿಂದೂ ಸಮಾಜ ಹಾಗೂ ಧರ್ಮದ ಮೇಲೆ ಬ್ರಾಹ್ಮಣ ವರ್ಣದ ಪ್ರಾಬಲ್ಯದ ಕಾರಣ ಹಿಂದೂ ಧರ್ಮವನ್ನು ನಿರ್ದೇಶಿಸಲು "ಬ್ರಾಹ್ಮಣ ಧರ್ಮ" ಎಂಬ ಶಬ್ದವನ್ನು ಸೃಷ್ಟಿಸಿದರು. ಹಿಂದೂಗಳು ತಮ್ಮ ಧರ್ಮವನ್ನು, ಶಾಶ್ವತ ನಿಯಮಗಳನ್ನು ಆಧರಿಸಿರುವ ಕಾರಣ ಸನಾತನ ಧರ್ಮ ಎಂದು, ಅಥವಾ ವೇದಗಳ ಉಪದೇಶಗಳನ್ನು ಆಧರಿಸಿರುವ ಕಾರಣ ವೈದಿಕ ಧರ್ಮವೆಂದು ಕರೆಯಲು ಇಷ್ಟಪಡುತ್ತಾರೆ. ಹಿಂದೂಗಳ ನಾಡು ಅವರಿಗೆ ಸಾಂಪ್ರದಾಯಿಕವಾಗಿ ಭಾರತ ಅಥವಾ ಭಾರತದ ಒಬ್ಬ ಪ್ರಾಚೀನ ರಾಜನಾದ ಭರತನ ಹೆಸರಿನಿಂದ ವ್ಯುತ್ಪನ್ನವಾದ ಭರತವರ್ಷವೆಂದು ಪರಿಚಿತವಾಗಿದೆ.