Homeಭಗವದ್ಗೀತೆ ಶ್ಲೋಕ |  Contact UsGoogle+
Bhagavad Gita
ಹಿಂದೂ ಧರ್ಮ ವೇದ ಉಪನಿಷತ್ ಮಹಾಕಾವ್ಯಗಳು ಭಗವದ್ಗೀತೆ ಪುರಾಣಗಳು ಭಗವದ್ಗೀತೆ ಶ್ಲೋಕ ಪಂಚಾಂಗ Other Links
 
 
 

ಪ್ರಶ್ನೋಪನಿಷತ್

ಇದು ಅಥರ್ವವೇದದ ಪೈಪ್ಪಲಾದ ಶಾಖೆಗೆ ಸೇರಿದೆಸಾಂಖ್ಯ ದರ್ಶನದ ಮೂಲ ಸಿದ್ಧಾಂತಗಳನ್ನು ನಾವು ಈ ಉಪನಿಷತ್ತಿನಲ್ಲಿ ಕಾಣಬಹುದು.ಪ್ರಶ್ನೋಪನಿಷತ್ ಪಿಪ್ಪಲಾದ ಮಹರ್ಷಿಗಳಿಗೆ ಆರು ಮಂದಿ ಜಿಜ್ಞಾಸುಗಳು ಕೇಳಿದ ಪ್ರಶ್ನೆ ಹಾಗೂ ಮಹರ್ಷಿಗಳು ನೀಡಿದ ಉತ್ತರಗಳನ್ನೊಳಗೊಂಡಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ.

ಜಗತ್ತಿನ ಜೀವಿಗಳ ಹುಟ್ಟು, ಪ್ರಾಣ, ಪ್ರಾಣಕ್ಕೂ ದೇಹಕ್ಕೂ ಇರುವ ಸಂಬಂಧ, ಜಾಗ್ರತಾವಸ್ಠೆ ಹಾಗೂ ನಿದ್ರಾವಸ್ಥೆಗಳ ರಹಸ್ಯ, ಸುಖ ದುಖ ವಿವೇಕ, ಓಂ ಶಬ್ದದ ಮಹತ್ವ, ಷೋಡಶ ಭಾಗಾತ್ಮಕ ಶಕ್ತಿಯ ನೆಲೆ ಎಂಬ ಆರು ವಿಷಯಗಳ ಬಗೆಗೆ ಪ್ರಶ್ನೋತ್ತರಗಳು ಇದರಲ್ಲಿವೆ.