Homeಭಗವದ್ಗೀತೆ ಶ್ಲೋಕ |  Contact UsGoogle+
Bhagavad Gita
ಹಿಂದೂ ಧರ್ಮ ವೇದ ಉಪನಿಷತ್ ಮಹಾಕಾವ್ಯಗಳು ಭಗವದ್ಗೀತೆ ಪುರಾಣಗಳು ಭಗವದ್ಗೀತೆ ಶ್ಲೋಕ ಪಂಚಾಂಗ Other Links
 
 
 

ಶಬ್ದ ವ್ಯುತ್ಪತ್ತಿ

ಹಿಂದೂ ಶಬ್ದವು ಪರ್ಶಿಯಾದ ಭಾಷೆಯಲ್ಲಿ ಸಿಂಧೂ ನದಿಯ ಹೆಸರು, ವೈದಿಕ ಸಂಸ್ಕೃತದ ಸಿಂಧು (ಅಂದರೆ ಸಿಂಧೂ ನದಿ) ಶಬ್ದಕ್ಕೆ ಸಮಾನವಾದ ಪರ್ಶಿಯಾದ ಭಾಷೆಯ ಶಬ್ದವಾದ ಹಿಂದೂ (ಹಂಡೂ) ಎಂಬಲ್ಲಿ ಮೊದಲು ಕಂಡಿತು. ಋಗ್ವೇದವು ಭಾರತೀಯ-ಆರ್ಯರ ನಾಡನ್ನು ಸಪ್ತ ಸಿಂಧು (ವಾಯವ್ಯ ದಕ್ಷಿಣ ಏಷ್ಯಾದಲ್ಲಿನ ಏಳು ನದಿಗಳಿರುವ ನಾಡು, ಸಿಂಧೂ ನದಿಯು ಅವುಗಳಲ್ಲಿ ಒಂದು) ಎಂದು ಉಲ್ಲೇಖಿಸುತ್ತದೆ. ಇದು ಪಾರ್ಸಿ ಮತದ ಪವಿತ್ರಗ್ರಂಥವಾದ ಅವೆಸ್ಟಾದ (ವೆನ್‌ಡಿಡಾಡ್ ಅಥವಾ ವಿಡೇವ್‌ಡಾಡ್ ೧.೧೮) ಹಪ್ಟ ಹಂಡೂ ಪದಕ್ಕೆ ಅನುರೂಪವಾಗಿದೆ. ಈ ಪದವನ್ನು ಭಾರತೀಯ ಉಪಖಂಡದಲ್ಲಿ "ಸಿಂಧೂ" ಅಥವಾ ಅದರ ಆಚೆಗೆ ವಾಸಿಸುವವರಿಗೆ ಬಳಸಲಾಗಿತ್ತು. ಅರಬ್ಬೀ ಭಾಷೆಯಲ್ಲಿ, ಅಲ್-ಹಿಂದ್ ಪದವು 'ಆಧುನಿಕ ಭಾರತದ ಜನರ ನಾಡನ್ನೂ' ನಿರ್ದೇಶಿಸುತ್ತದೆ.

ಪರ್ಶಿಯಾದ ಭಾಷೆಯ (ಮಧ್ಯಕಾಲೀನ ಪರ್ಶಿಯಾದ ಭಾಷೆ ಹಿಂದೂಕ್, ಹೊಸ ಪರ್ಶಿಯಾದ ಭಾಷೆ ಹಿಂದೂ) ಪದವಾದ ಇದು ದೆಹಲಿ ಸಲ್ತನತ್‌ನೊಂದಿಗೆ ಭಾರತವನ್ನು ಪ್ರವೇಶಿಸಿತು ಮತ್ತು ಕನಿಷ್ಠ ಕ್ರಿ.ಶ. ೧೩೨೩ರಿಂದ ದಕ್ಷಿಣ ಭಾರತೀಯ ಹಾಗೂ ಕಾಶ್ಮೀರದ ಪಠ್ಯಗಳಲ್ಲಿ, ಮತ್ತು ಹೆಚ್ಚಾಗಿ ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ಕಾಣಿಸುತ್ತದೆ. ೧೮ನೆಯ ಶತಮಾನದ ಕೊನೆಯಿಂದ ಈ ಪದವನ್ನು ಉಪಖಂಡದ ಬಹುತೇಕ ಧಾರ್ಮಿಕ, ಆಧ್ಯಾತ್ಮಿಕ, ಹಾಗೂ ತಾತ್ವಿಕ ಸಂಪ್ರದಾಯಗಳಿಗೆ, ಸಾಮಾನ್ಯವಾಗಿ ಸಿಖ್ ಧರ್ಮ, ಜೈನ ಧರ್ಮ, ಬೌದ್ಧ ಧರ್ಮಗಳನ್ನು ಪ್ರತ್ಯೇಕವೆಂದು ಸೇರಿಸದೆ, ಒಂದು ಸರ್ವಾನ್ವಯ ಪದವಾಗಿ ಬಳಸಲಾಗಿದೆ.

ಮುಂಚಿನ ಐರೋಪ್ಯ ಪ್ರವಾಸಿಗಳು ಮತ್ತು ಕ್ರೈಸ್ತ ಧರ್ಮಪ್ರಚಾರಕರು ಹಿಂದೂ ಸಮಾಜ ಹಾಗೂ ಧರ್ಮದ ಮೇಲೆ ಬ್ರಾಹ್ಮಣ ವರ್ಣದ ಪ್ರಾಬಲ್ಯದ ಕಾರಣ ಹಿಂದೂ ಧರ್ಮವನ್ನು ನಿರ್ದೇಶಿಸಲು "ಬ್ರಾಹ್ಮಣ ಧರ್ಮ" ಎಂಬ ಶಬ್ದವನ್ನು ಸೃಷ್ಟಿಸಿದರು. ಹಿಂದೂಗಳು ತಮ್ಮ ಧರ್ಮವನ್ನು, ಶಾಶ್ವತ ನಿಯಮಗಳನ್ನು ಆಧರಿಸಿರುವ ಕಾರಣ ಸನಾತನ ಧರ್ಮ ಎಂದು, ಅಥವಾ ವೇದಗಳ ಉಪದೇಶಗಳನ್ನು ಆಧರಿಸಿರುವ ಕಾರಣ ವೈದಿಕ ಧರ್ಮವೆಂದು ಕರೆಯಲು ಇಷ್ಟಪಡುತ್ತಾರೆ. ಹಿಂದೂಗಳ ನಾಡು ಅವರಿಗೆ ಸಾಂಪ್ರದಾಯಿಕವಾಗಿ ಭಾರತ ಅಥವಾ ಭಾರತದ ಒಬ್ಬ ಪ್ರಾಚೀನ ರಾಜನಾದ ಭರತನ ಹೆಸರಿನಿಂದ ವ್ಯುತ್ಪನ್ನವಾದ ಭರತವರ್ಷವೆಂದು ಪರಿಚಿತವಾಗಿದೆ.