Homeಭಗವದ್ಗೀತೆ ಶ್ಲೋಕ |  Contact UsGoogle+
Bhagavad Gita
ಹಿಂದೂ ಧರ್ಮ ವೇದ ಉಪನಿಷತ್ ಮಹಾಕಾವ್ಯಗಳು ಭಗವದ್ಗೀತೆ ಪುರಾಣಗಳು ಭಗವದ್ಗೀತೆ ಶ್ಲೋಕ ಪಂಚಾಂಗ Other Links
 
 
 

ಧಾರ್ಮಿಕ ಪಂಥಗಳು

ಧಾರ್ಮಿಕ ಪಂಥಗಳು

ಹಿಂದೂ ಧರ್ಮವು ಒಂದು ಪ್ರಧಾನ ಸೈದ್ಧಾಂತಿಕ ಶಾಸನವನ್ನು ಹೊಂದಿಲ್ಲ ಮತ್ತು ಧರ್ಮವನ್ನು ಆಚರಿಸುವ ಹಲವು ಹಿಂದೂಗಳು ತಾವು ಯಾವುದೇ ನಿರ್ದಿಷ್ಟ ಪಂಥಕ್ಕೆ ಸೇರಿದ್ದೇವೆಂದು ಹೇಳುವುದಿಲ್ಲ. ಆದರೆ, ಸಮಕಾಲೀನ ಹಿಂದೂ ಧರ್ಮವನ್ನು ವಿದ್ವಾಂಸರು ನಾಲ್ಕು ಪ್ರಮುಖ ಪಂಥಗಳಲ್ಲಿ ವರ್ಗೀಕರಿಸುತ್ತಾರೆ: ವೈಷ್ಣವ ಪಂಥ, ಶೈವ ಪಂಥ, ಶಕ್ತಿ ಪಂಥ ಮತ್ತು ಸ್ಮಾರ್ತ ಪಂಥ. ಈ ಪಂಥಗಳು ಮುಖ್ಯವಾಗಿ ಪರಮಶಕ್ತ ರೂಪವೆಂದು ಆರಾಧಿಸಲಾಗುವ ದೇವರ ವಿಷಯದಲ್ಲಿ ಮತ್ತು ಆ ದೇವರ ಆರಾಧನೆಗೆ ಸಂಬಂಧಿಸಿದ ಸಂಪ್ರದಾಯಗಳಲ್ಲಿ ಭಿನ್ನವಾಗಿವೆ.

ವೈಷ್ಣವರು ವಿಷ್ಣುವನ್ನು ಪರಮಶಕ್ತ ದೇವರೆಂದು ಆರಾಧಿಸುತ್ತಾರೆ; ಶೈವರು ಶಿವನನ್ನು ಪರಮಶಕ್ತನೆಂದು ಆರಾಧಿಸುತ್ತಾರೆ; ಶಾಕ್ತರು ಸ್ತ್ರೀ ದೇವತೆ ಅಥವಾ ದೇವಿಯ ಮೂಲಕ ಮೂರ್ತಿಮತ್ತಾಗಿರುವ ಶಕ್ತಿಯನ್ನು ಆರಾಧಿಸುತ್ತಾರೆ; ಮತ್ತು ಸ್ಮಾರ್ತರು ಪರಮಶಕ್ತದ ಮೂರ್ತೀಕರಣಗಳೆಂದು ಐದು (ಪಂಚದೇವ) ಅಥವಾ (ತಮಿಳು ಹಿಂದೂಗಳು ಸ್ಕಂದನನ್ನು ಸೇರಿಸುವುದರಿಂದ) ಆರು (ಷಣ್ಮತ) ದೇವತೆಗಳ ಸಾರಭೂತವಾದ ಸಂಯೋಜನೆಯಲ್ಲಿ ನಂಬಿಕೆ ಇಡುತ್ತಾರೆ.

ಹಿಂದೂ ಧರ್ಮವೆಂದರೇನು ಎಂಬುದರ ಪಾಶ್ಚಾತ್ಯ ಕಲ್ಪನೆಯನ್ನು ಸ್ಮಾರ್ತ ದೃಷ್ಟಿಕೋನದ ಮೂಲಕ ವ್ಯಾಖ್ಯಾನಿಸಲಾಗಿದೆ; ಸಮಕಾಲೀನ ಹಿಂದೂ ಧರ್ಮದಲ್ಲಿ ಅದ್ವೈತ ವೇದಾಂತವನ್ನು ತಿಳಿಯದ ಅಥವಾ ಅನುಸರಿಸದ ಹಲವಾರು ಹಿಂದೂಗಳು ಸಾಂಪ್ರದಾಯಿಕವಾಗಿ ದೇವರ ಹಲವು ಸ್ವರೂಪಗಳನ್ನು ಆರಾಧಿಸುವ ಷಣ್ಮತ ನಂಬಿಕೆಯನ್ನು ಅನುಸರಿಸುತ್ತಾರೆ. ಸ್ಮಾರ್ತ ಸಂಪ್ರದಾಯದ ಪ್ರಭಾವವನ್ನು ಗಮನಿಸಿದ ಒಬ್ಬ ವಿಶ್ಲೇಷಕರು, ಹಲವು ಹಿಂದೂಗಳು ತಾವು ಸ್ಮಾರ್ತರೆಂದು ನಿಖರವಾಗಿ ಗುರುತಿಸಿಕೊಳ್ಳದಿದ್ದರೂ, ಅಪಂಥೀಯತೆಯ ಆಧಾರವಾಗಿ ಅದ್ವೈತ ವೇದಾಂತದ ಮೇಲೆ ಅವಲಂಬಿಸುವುದರ ಮೂಲಕ ಅವರು ಪರೋಕ್ಷವಾಗಿ ಸ್ಮಾರ್ತ ಪಂಥದ ಅನುಯಾಯಿಗಳಾಗಿದ್ದಾರೆಂದು ಹೇಳಿದರು.

ಗಾಣಪತ್ಯ ಮತ್ತು ಸೌರದಂತಹ ಇತರ ಪಂಥಗಳು ಅಷ್ಟೊಂದು ವ್ಯಾಪಕವಾಗಿಲ್ಲ.

ಮೂರ್ತಿಪೂಜೆ ಮತ್ತು ಬಹುದೇವತಾರಾಧನೆಯನ್ನು ವರ್ಜಿಸುವ ಸ್ವಾಮಿ ದಯಾನಂದ ಸರಸ್ವತಿಯವರ ಆರ್ಯ ಸಮಾಜದಂತಹ, ಮೇಲೆ ಪ್ರಸ್ತಾಪಿಸಲಾದ ಯಾವುದೇ ವರ್ಗಗಳಲ್ಲಿ ಸುಲಭವಾಗಿ ಸೇರಿಸಲಾರದ ಚಳುವಳಿಗಳಿವೆ. ಅದು ವೇದಗಳು ಮತ್ತು ವೈದಿಕ ಯಜ್ಞಗಳ ಮೇಲೆ ಕೇಂದ್ರೀಕರಿಸುತ್ತದೆ. ಬ್ಯಾನರ್ಜಿಯವರು ಗಮನಿಸಿದಂತೆ, ತಾಂತ್ರಿಕ ಸಂಪ್ರದಾಯಗಳು ವಿವಿಧ ಪಂಥಗಳನ್ನು ಹೊಂದಿವೆ:

ತಂತ್ರಗಳು ... ಆಸ್ತಿಕ ಅಥವಾ ವೈದಿಕ ಮತ್ತು ನಾಸ್ತಿಕ ಅಥವಾ ವೈದಿಕವಲ್ಲದ ಎಂದೂ ವಿಭಜಿಸಲಾಗಿವೆ. ದೇವತೆಯ ಪ್ರಧಾನತೆಗೆ ಅನುಗುಣವಾಗಿ ಆಸ್ತಿಕ ಗ್ರಂಥಗಳನ್ನು ಶಾಕ್ತ, ಶೈವ, ಸೌರ, ಗಾಣಪತ್ಯ ಮತ್ತು ವೈಷ್ಣವ ಎಂದು ವಿಭಜಿಸಲಾಗಿದೆ.

ಪ್ರತಿಯೊಂದು ಧರ್ಮದಲ್ಲಿರುವಂತೆ, ಕೆಲವರು ತಮ್ಮ ಸ್ವಂತ ಪಂಥವನ್ನು ಇತರ ಪಂಥಗಳಿಗಿಂತ ಶ್ರೇಷ್ಠವೆಂದು ಕಾಣುತ್ತಾರೆ. ಆದರೆ, ಹಲವು ಹಿಂದೂಗಳು ಇತರ ಪಂಥಗಳನ್ನು ತಮ್ಮ ಸ್ವಂತ ಪಂಥದ ಸಂಪ್ರದಾಯವಿಹಿತ ಪರ್ಯಾಯಗಳೆಂದು ಪರಿಗಣಿಸುತ್ತಾರೆ. ಹಾಗಾಗಿ, ಹಿಂದೂಗಳಿಗೆ ಸಾಮಾನ್ಯವಾಗಿ ಪಾಷಂಡ ಸಂಪ್ರದಾಯವು ಒಂದು ವಿವಾದಾಂಶವಾಗಿಲ್ಲ.

ಆಶ್ರಮಗಳು

ಸಾಂಪ್ರದಾಯಿಕವಾಗಿ ಒಬ್ಬ ಹಿಂದೂ ಧರ್ಮೀಯನ ಜೀವನವನ್ನು ನಾಲ್ಕು ಆಶ್ರಮಗಳಲ್ಲಿ (ಹಂತಗಳು ಅಥವಾ ಘಟ್ಟಗಳು; ಅಸಂಬಂಧಿತ ಅರ್ಥಗಳು ಏಕಾಂತಗೃಹವನ್ನು ಒಳಗೊಳ್ಳುತ್ತವೆ) ವಿಭಜಿಸಲಾಗುತ್ತದೆ. ಒಬ್ಬರ ಜೀವನದ ಮೊದಲ ಭಾಗವಾದ, ಒಬ್ಬ ವಿದ್ಯಾರ್ಥಿಯಾಗಿರುವ ಹಂತವಾದ ಬ್ರಹ್ಮಚರ್ಯವು, ಒಬ್ಬ ಗುರುವಿನ ಮಾರ್ಗದರ್ಶನದಲ್ಲಿ ಅವಿವಾಹಿತ, ನಿಯಂತ್ರಿತ, ಸಂಯಮದ ಮತ್ತು ನಿರ್ಮಲವಾದ ಅವಲೋಕನದಲ್ಲಿ ಕಳೆಯಲಾಗುತ್ತದೆ ಮತ್ತು ಆಧ್ಯಾತ್ಮಿಕ ಜ್ಞಾನಕ್ಕಾಗಿ ಮನಸ್ಸನ್ನು ಬೆಳೆಸಲಾಗುತ್ತದೆ. ಗೃಹಸ್ಥವು ಮನೆಯವನ ಹಂತ, ಅಂದರೆ ಒಬ್ಬ ವ್ಯಕ್ತಿಯು ಮದುವೆಯಾಗಿ ತನ್ನ ವಿವಾಹಿತಜೀವನದಲ್ಲಿ ಕಾಮವನ್ನು ಹಾಗೂ ವೃತ್ತಿಜೀವನದಲ್ಲಿ ಅರ್ಥವನ್ನು ಈಡೇರಿಸಿಕೊಳ್ಳುವ ಹಂತ (ಮನುಷ್ಯ ಜನ್ಮದ ಉದ್ದೇಶಗಳು ನೋಡಿ). ಒಬ್ಬ ಹಿಂದೂ ಗೃಹಸ್ಥನ ನೈತಿಕ ಕರ್ತವ್ಯಗಳು, ಒಬ್ಬರ ಹೆತ್ತವರು, ಮಕ್ಕಳು, ಅತಿಥಿಗಳು ಮತ್ತು ಪೂಜ್ಯ ವ್ಯಕ್ತಿಗಳಿಗೆ ಆಸರೆಯಾಗಿರುವುದನ್ನು ಒಳಗೊಳ್ಳುತ್ತವೆ. ನಿವೃತ್ತಿಯ ಹಂತವಾದ ವಾನಪ್ರಸ್ಥವು ಐಹಿಕ ಪ್ರಪಂಚದಿಂದ ಕ್ರಮೇಣವಾಗಿ ಅನಾಸಕ್ತಿಯ ಹಂತ. ಇದು, ಒಬ್ಬರ ಕರ್ತವ್ಯಗಳನ್ನು ತಮ್ಮ ಮಕ್ಕಳಿಗೆ ವಹಿಸುವುದು, ಹೆಚ್ಚು ಸಮಯವನ್ನು ಧಾರ್ಮಿಕ ಆಚರಣೆಗಳಲ್ಲಿ ಕಳೆಯುವುದು ಮತ್ತು ಧಾರ್ಮಿಕ ತೀರ್ಥಯಾತ್ರೆಗಳಲ್ಲಿ ತೊಡಗುವುದನ್ನು ಒಳಗೊಳ್ಳಬಹುದು. ಕೊನೆಯದಾಗಿ ವೈರಾಗ್ಯದ ಹಂತವಾದ ಸಂನ್ಯಾಸದಲ್ಲಿ, ಒಬ್ಬ ವ್ಯಕ್ತಿಯು ಪ್ರಾಪಂಚಿಕ ಜೀವನದಿಂದ ನಿರ್ಲಿಪ್ತತೆಯ ಮೂಲಕ ಏಕಾಂತವಾಗಿ ದೈವಿಕವನ್ನು ಕಂಡುಕೊಳ್ಳಲು ಮತ್ತು ಮೋಕ್ಷಕ್ಕಾಗಿ ಶಾಂತಿಯುತವಾಗಿ ದೇಹವನ್ನು ತೊರೆಯಲು ಎಲ್ಲ ಪ್ರಾಪಂಚಿಕ ಬಂಧನಗಳನ್ನು ತ್ಯಜಿಸುತ್ತಾನೆ.

ಸಂನ್ಯಾಸ

ಮೋಕ್ಷ ಅಥವಾ ಬೇರೊಂದು ಬಗೆಯ ಆಧ್ಯಾತ್ಮಿಕ ಪರಿಪೂರ್ಣತೆಯ ಅನ್ವೇಷಣೆಯಲ್ಲಿ ಕೆಲವು ಹಿಂದೂಗಳು ಸಂನ್ಯಾಸಿ ಜೀವನವನ್ನು ಜೀವಿಸಲು ಆಯ್ದುಕೊಳ್ಳುತ್ತಾರೆ. ಸಂನ್ಯಾಸಿಗಳು ಸರಳತೆ, ಬ್ರಹ್ಮಚರ್ಯೆ, ಪ್ರಾಪಂಚಿಕ ಮನರಂಜನೆಗಳಿಂದ ನಿರ್ಲಿಪ್ತತೆ, ಮತ್ತು ದೇವರ ಅವಲೋಕನದ ಜೀವನಕ್ಕೆ ಬದ್ಧವಾಗಿರುತ್ತಾರೆ. ಒಬ್ಬ ಹಿಂದೂ ಬೈರಾಗಿಯನ್ನು ಸಂನ್ಯಾಸಿ, ಸಾಧು, ಅಥವಾ ಸ್ವಾಮಿಯೆಂದು ಕರೆಯಲಾಗುತ್ತದೆ. ಒಬ್ಬ ಸ್ತ್ರೀ ಬೈರಾಗಿಯನ್ನು ಸಂನ್ಯಾಸಿನಿಯೆಂದು ಕರೆಯಲಾಗುತ್ತದೆ. ಸ್ವಾರ್ಥತೆ ಮತ್ತು ಪ್ರಾಪಂಚಿಕತೆಯ ತಮ್ಮ ಬಾಹ್ಯ ವೈರಾಗ್ಯವು ಮಾನಸಿಕ ವಿರಕ್ತಿಗಾಗಿ ಶ್ರಮಿಸುವ ಗೃಹಸ್ಥರಿಗೆ ಸ್ಫೂರ್ತಿಯಾಗಿರುವುದರಿಂದ ಬೈರಾಗಿಗಳು ಹಿಂದೂ ಸಮಾಜದಲ್ಲಿ ವಿಶೇಷ ಗೌರವವನ್ನು ಪಡೆಯುತ್ತಾರೆ. ಕೆಲವು ಸಂನ್ಯಾಸಿಗಳು ಮಠಗಳಲ್ಲಿ ವಾಸಿಸಿದರೆ, ಇತರರು ಒಂದೆಡೆಯಿಂದ ಮತ್ತೊಂದೆಡೆಗೆ ಅಲೆದಾಡುತ್ತಾರೆ, ಮತ್ತು ತಮ್ಮ ಎಲ್ಲ ಅಗತ್ಯಗಳನ್ನು ಒದಗಿಸಲು ದೇವರಲ್ಲಿ ಮಾತ್ರ ವಿಶ್ವಾಸವಿಡುತ್ತಾರೆ. ಒಬ್ಬ ಗೃಹಸ್ಥನು ಸಂನ್ಯಾಸಿಗಳಿಗೆ ಆಹಾರ ಮತ್ತು ಇತರ ಅಗತ್ಯಗಳನ್ನು ಒದಗಿಸುವ ಕಾರ್ಯ ಅತ್ಯಂತ ಶ್ಲಾಘನೀಯವೆಂದು ಭಾವಿಸಲಾಗುತ್ತದೆ. ವ್ಯಕ್ತಿಯು ಶ್ರೀಮಂತನಿರಲಿ ಅಥವಾ ಬಡವನಿರಲಿ, ಉತ್ತಮನಿರಲಿ ಅಥವಾ ನೀಚನಿರಲಿ, ಸಂನ್ಯಾಸಿಗಳು ಎಲ್ಲರನ್ನೂ ಗೌರವ ಹಾಗೂ ಅನುಕಂಪದಿಂದ ಕಾಣಲು ಮತ್ತು ಹೊಗಳಿಕೆ, ದೂಷಣೆ, ನಲಿವು ಹಾಗೂ ನೋವುಗಳಿಗೆ ಔದಾಸೀನ್ಯವುಳ್ಳವರಾಗಿರಲು ಪ್ರಯತ್ನಿಸುತ್ತಾರೆ.

ವರ್ಣಗಳು

ಹಿಂದೂ ಸಮಾಜವು ಸಾಂಪ್ರದಾಯಿಕವಾಗಿ ವರ್ಣಗಳೆಂದು (ಸಂಸ್ಕೃತ: "ಬಣ್ಣ, ರೂಪ, ನೋಟ") ಕರೆಯಲಾಗುವ ನಾಲ್ಕು ವರ್ಗಗಳಲ್ಲಿ ವರ್ಗೀಕರಿಸಲ್ಪಟ್ಟಿದೆ:

ವರ್ಣ ವ್ಯವಸ್ಥೆ ಎಂದು ಕರೆಯಲಾಗುವ ವ್ಯವಸ್ಥೆಯು ಧರ್ಮಗ್ರಂಥಗಳಿಂದ ನಿರ್ಬಂಧಿಸಲ್ಪಟ್ಟ ಹಿಂದೂ ಧರ್ಮದ ಒಂದು ಅಖಂಡ ಭಾಗವಾಗಿದೆಯೇ ಅಥವಾ ಒಂದು ಹಳತಾದ ಸಾಮಾಜಿಕ ಪದ್ಧತಿಯೇ ಎಂದು ಹಿಂದೂಗಳು ಮತ್ತು ವಿದ್ವಾಂಸರು ಚರ್ಚಿಸುತ್ತಾರೆ. ಧರ್ಮಗ್ರಂಥಗಳ ಪೈಕಿ, ಶ್ರುತಿಗಳು ವರ್ಣ ವ್ಯವಸ್ಥೆಯನ್ನು ಪ್ರಸ್ತಾಪಿಸುವ, ಆದರೆ ಬಹಳ ಮಿತವಾಗಿ ಮತ್ತು ವರ್ಣನಾತ್ಮಕವಾಗಿರುವ (ಅಂದರೆ ಆದೇಶವಾಗಿರದ), ಶ್ಲೋಕಗಳನ್ನು ಹೊಂದಿವೆ. ವಾಸ್ತವವಾಗಿ, ಋಗ್ವೇದದಲ್ಲಿ ಪುರುಷಸೂಕ್ತವು (೧೦.೯೦) ಎಲ್ಲ ನಾಲ್ಕು ವರ್ಣಗಳನ್ನು ಪ್ರಸ್ತಾಪಿಸುವ ಏಕಮಾತ್ರ ಶ್ಲೋಕವಾಗಿದೆ. ಇತರ ವರ್ಣಗಳಾದ ಬ್ರಹ್ಮ (ಅಂದರೆ ಬ್ರಾಹ್ಮಣ) ಮತ್ತು ರಾಜನ್ಯಗಳನ್ನು (ಅಂದರೆ ಕ್ಷತ್ರಿಯ) ಋಗ್ವೇದದಲ್ಲಿ ಕೆಲವು ಇತರ ಶ್ಲೋಕಗಳಲ್ಲಿ (ಉದಾಹರಣೆಗೆ ೧೦.೮೦.೧) ಮತ್ತು ಇತರ ವೇದಗಳಲ್ಲಿ ಪ್ರತ್ಯೇಕವಾಗಿ ಪ್ರಸ್ತಾಪಿಸಲಾಗಿದೆ, ಮತ್ತು ಉಪನಿಷತ್ತುಗಳಲ್ಲಿ ಅಪರೂಪವಾಗಿ ಪ್ರಸ್ತಾಪಿಸಲಾಗಿದೆ. ನಿಖರವಾಗಿ ಬಹುತೇಕ ಸ್ಮೃತಿ ಪಠ್ಯಗಳನ್ನು ಒಳಗೊಂಡಂತೆ, ಕೆಲವು ಪಠ್ಯಗಳು ಇವುಗಳನ್ನು ನಾಲ್ಕು ವರ್ಣಗಳಲ್ಲಿ ಸಮಾಜದ ವಿಭಜನೆಯನ್ನು ವಿಧಿಸುವ ಆದೇಶಗಳೆಂದು ವಿವರಿಸಿವೆ. ಒಬ್ಬ ವ್ಯಕ್ತಿಯ ವೃತ್ತಿಯು ಕಡ್ಡಾಯವಾಗಿ ಆತನ ಕುಟುಂಬದ ವೃತ್ತಿಯಿಂದ ನಿರ್ಧರಿತವಾಗಿರಲಿಲ್ಲವೆಂದು ಋಗ್ವೇದದ ಒಂದು ಶ್ಲೋಕವು ಸೂಚಿಸುತ್ತದೆ:

"ನಾನೊಬ್ಬ ಹಾಡುಗಾರ, ನನ್ನ ತಂದೆ ಒಬ್ಬ ವೈದ್ಯ, ಧಾನ್ಯವನ್ನು ಬೀಸುವುದು ನನ್ನ ತಾಯಿಯ ವೃತ್ತಿ." (ಋಗ್ವೇದ ೯.೧೧೨.೩)

ವೈದಿಕ ಯುಗದಲ್ಲಿ, ವೇದಗಳನ್ನು ಕೇಳುವುದಕ್ಕೆ ಅಥವಾ, ಮುಂದಿನ ಸಮಯದಲ್ಲೂ ಇದ್ದಂತೆ, ಯಾವುದೇ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಳ್ಳುವುದಕ್ಕೆ ಶೂದ್ರರ ಮೇಲೆ ಯಾವುದೇ ನಿಷೇಧವಿರಲಿಲ್ಲ. ಹಲವಾರು ಸಮಾಜಶಾಸ್ತ್ರಜ್ಞರಿಂದ ಸೂಚಿಸಲ್ಪಟ್ಟಂತೆ, ವರ್ಣಗಳೊಳಗಿನ ಸ್ವಲ್ಪ ಗತಿಶೀಲತೆ ಮತ್ತು ನಮ್ಯತೆಯು ಜಾತಿ ವ್ಯವಸ್ಥೆಯಲ್ಲಿನ ಸಾಮಾಜಿಕ ಭೇದಭಾವದ ಆಪಾದನೆಗಳನ್ನು ಆಕ್ಷೇಪಿಸುತ್ತವೆ.

ವರ್ಣಗಳ ವೈದಿಕ ಪ್ರಸ್ತಾಪಗಳನ್ನು ಆದೇಶಗಳೆಂದು ವಿವರಿಸುವ ಸ್ಮೃತಿಗಳು, ನಾಲ್ಕು ವರ್ಣಗಳಲ್ಲಿ ಸಮಾಜದ ವಿಭಜನೆಯನ್ನು ಸ್ಪಷ್ಟವಾಗಿ ಅನುಮೋದಿಸುತ್ತವೆ, ಮತ್ತು, ಮುಂದೆ ಇಂದಿನ ಜನ್ಮಾಧಾರಿತ ಜಾತಿ ವ್ಯವಸ್ಥೆಯಾಗಿ ಹೊರಹೊಮ್ಮಿದ, ಈ ವರ್ಣಗಳೊಳಗಿನ ವಿವಿಧ ಉಪ-ವಿಭಾಗಗಳನ್ನೂ ಪ್ರಸ್ತಾಪಿಸುತ್ತವೆ.

"ದೇವರನ್ನು ಪ್ರೀತಿಸುವವರು ಯಾವುದೇ ಜಾತಿಗೆ ಸೇರುವುದಿಲ್ಲ . . . . ಈ ಪ್ರೀತಿಯಿರದ ಬ್ರಾಹ್ಮಣನು ಬ್ರಾಹ್ಮಣನಾಗಿ ಉಳಿಯುವುದಿಲ್ಲ. ಮತ್ತು ದೇವರ ಪ್ರೀತಿಯಿರುವ ಅಸ್ಪೃಶ್ಯನು ಅಸ್ಪೃಶ್ಯನಾಗಿ ಉಳಿಯುವುದಿಲ್ಲ. ಭಕ್ತಿಯ ಮೂಲಕ ಒಬ್ಬ ಅಸ್ಪೃಶ್ಯನು ಪರಿಶುದ್ಧ ಮತ್ತು ಉತ್ತಮನಾಗುತ್ತಾನೆ." ಎಂದು ಬೋಧಿಸಿದರು.

ಅಹಿಂಸೆ ಮತ್ತು ಸಸ್ಯಾಹಾರಾಚರಣೆ

ಸಸ್ಯಗಳು ಮತ್ತು ಮನುಷ್ಯೇತರ ಪ್ರಾಣಿಗಳನ್ನು ಒಳಗೊಂಡಂತೆ, ದಿವ್ಯತೆಯು ಎಲ್ಲ ಜೀವಿಗಳ ಒಳವ್ಯಾಪಿಸುತ್ತದೆಂದು ನಂಬಲಾಗುವುದರಿಂದ, ಹಿಂದೂಗಳು ಅಹಿಂಸೆ ಮತ್ತು ಜೀವನದ ಪ್ರತಿ ಗೌರವವನ್ನು ಪ್ರತಿಪಾದಿಸುತ್ತಾರೆ. ಅಹಿಂಸೆ ಪದವು ಉಪನಿಷತ್ತುಗಳಲ್ಲಿ, ಮಹಾಭಾರತ ಮಹಾಕಾವ್ಯದಲ್ಲಿ ಕಾಣುತ್ತದೆ ಮತ್ತು ಪತಂಜಲಿಯ ಯೋಗ ಸೂತ್ರಗಳಲ್ಲಿ ಅಹಿಂಸೆಯು ಐದು ಯಮಗಳ (ಆತ್ಮನಿಗ್ರಹದ ಶಪಥಗಳು) ಪೈಕಿ ಮೊದಲಿನದು.

ಅಹಿಂಸೆಗೆ ಅನುಗುಣವಾಗಿ, ಜೀವನದ ಉನ್ನತ ಸ್ವರೂಪಗಳನ್ನು ಗೌರವಿಸಲು ಅನೇಕ ಹಿಂದೂಗಳು ಸಸ್ಯಾಹಾರವನ್ನು ಅಂಗೀಕರಿಸುತ್ತಾರೆ. ಯಜುರ್ವೇದವು ಸಸ್ಯಾಹಾರಾಚರಣೆಯನ್ನು ಪ್ರಚಾರಮಾಡುತ್ತದೆ ಮತ್ತು ಸಾತ್ವಿಕ ಜೀವನಶೈಲಿಗಾಗಿ ಸಸ್ಯಾಹಾರಾಚರಣೆಯನ್ನು ಸೂಚಿಸಲಾಗುತ್ತದೆ. (ಎಲ್ಲ ಧರ್ಮಗಳ ಅನುಯಾಯಿಗಳನ್ನು ಒಳಗೊಂಡಂತೆ) ಭಾರತದಲ್ಲಿ ಕ್ಷೀರ ಸಸ್ಯಾಹಾರಿಗಳ ಸಂಖ್ಯೆಯ ಅಂದಾಜುಗಳು ಶೇಕಡ ೨೦ರಿಂದ ೪೨ರ ನಡುವೆ ಬದಲಾಗುತ್ತವೆ. ಆಹಾರ ಪದ್ಧತಿಗಳು ಸಮುದಾಯ ಮತ್ತು ಪ್ರದೇಶದೊಂದಿಗೆ ಬದಲಾಗುತ್ತವೆ, ಉದಾಹರಣೆಗೆ ಕೆಲವು ಜಾತಿಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಸಸ್ಯಾಹಾರಿಗಳಿರುವುದು ಮತ್ತು ಕರಾವಳಿ ತೀರದ ನಿವಾಸಿಗಳು ಕಡಲಾಹಾರದ ಮೇಲೆ ಅವಲಂಬಿಸಿರುವುದು. ಕೆಲವು ಹಿಂದೂಗಳು, ರಾಜಸಿಕ ಆಹಾರಗಳೆಂದು ಪರಿಗಣಿಸಲಾದ, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಿನ್ನುವುದಿಲ್ಲ. ಕೆಲವರು ನಿರ್ದಿಷ್ಟ ಧಾರ್ಮಿಕ ದಿನಗಳಂದು ಮಾತ್ರ ಮಾಂಸ ತಿನ್ನುವುದಿಲ್ಲ.

ಮಾಂಸ ತಿನ್ನುವ ಶ್ರದ್ಧಾವಂತ ಹಿಂದೂಗಳು ಬಹುತೇಕ ಎಂದೂ ಗೋಮಾಂಸ ತಿನ್ನುವುದಿಲ್ಲ. ಹಿಂದೂ ಸಮಾಜದಲ್ಲಿ ಹಸುವನ್ನು ಸಾಂಪ್ರದಾಯಿಕವಾಗಿ ರಕ್ಷಕ ಮತ್ತು ಮಾತೃಸಮಾನವಾಗಿ ಗುರುತಿಸಲಾಗುತ್ತದೆ ಮತ್ತು ಹಿಂದೂ ಸಮಾಜವು ಹಸುವನ್ನು ನಿಸ್ವಾರ್ಥ ದಾನದ ಒಂದು ಸಂಕೇತವೆಂದು ಗೌರವಿಸುತ್ತದೆ. ಭಾರತದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಗೋಹತ್ಯೆಯನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿದೆ. ಹೆಚ್ಚಿನ ಚರ್ಚೆಗೆ ಧರ್ಮದಲ್ಲಿ ಹಸು ಮತ್ತು ನಿಷಿದ್ಧ ಆಹಾರ ನೋಡಿ.

ಮತಾಂತರ

ಧರ್ಮಾಂತರ, ಧರ್ಮ ಪ್ರಚಾರ, ಮತ್ತು ಮತಾಂತರಿಸುವಿಕೆಯ ಪರಿಕಲ್ಪನೆಗಳು ಹಿಂದೂ ಪಠ್ಯಗಳಲ್ಲಿ ಕಾಣುವುದಿಲ್ಲ ಮತ್ತು ಆಚರಣೆಯಲ್ಲಿ ಎಂದೂ ಪ್ರಮುಖವಾದ ಪಾತ್ರವಹಿಸಿಲ್ಲವಾದರೂ ಮತಾಂತರಗೊಳ್ಳಲು ಸಿದ್ಧವಿರುವವರಿಗೆ ಸಮ್ಮತಿಯು ಹೆಚ್ಚು ಸಾಮಾನ್ಯವಾಗುತ್ತಿದೆ. ಅದರ ಇತಿಹಾಸದ ಮುಂಚಿನ ಭಾಗದಲ್ಲಿ, ಇತರ ಪ್ರತಿಸ್ಪರ್ಧಿ ಧರ್ಮಗಳ ಅನುಪಸ್ಥಿತಿಯ ಕಾರಣ, ಹಿಂದೂಗಳು ತಾವು ಸಂಧಿಸಿದ ಎಲ್ಲರನ್ನೂ ಹಿಂದೂಗಳೆಂದು ಪರಿಗಣಿಸುತ್ತಿದ್ದರು ಮತ್ತು ತಾವು ಭೇಟಿಯಾದ ಎಲ್ಲರೂ ಹಿಂದೂಗಳಾಗಿರಬೇಕೆಂದು ನಿರೀಕ್ಷಿಸುತ್ತಿದ್ದರು.

ಇಂದಿಗೂ ಕೂಡ ಹಿಂದೂಗಳು ಮತಾಂತರದ ಸ್ವೀಕಾರಾರ್ಹತೆಯ ಐತಿಹಾಸಿಕ ವಿಚಾರಗಳಿಂದ ಪ್ರಭಾವಿತಗೊಳ್ಳುತ್ತಿದ್ದಾರೆ. ಹಾಗಾಗಿ, ಒಂದೆಡೆ ಅನೇಕ ಹಿಂದೂಗಳು ಹಿಂದೂ ಧರ್ಮವು ಜನ್ಮದಿಂದ ಮಾತ್ರ ಹೊಂದಬಹುದಾದ ಒಂದು ಗುರುತೆಂದು ಇಂದಿಗೂ ನಂಬಿದರೆ, ಇನ್ನೊಂದೆಡೆ ಹಿಂದೂ ನಂಬಿಕೆಗಳು ಮತ್ತು ಆಚರಣೆಗಳನ್ನು ಅನುಸರಿಸುವ ಯಾರಾದರೂ ಹಿಂದೂಗಳೆಂದು ಅನೇಕ ಇತರರು ನಂಬುತ್ತಾರೆ, ಮತ್ತು ಅನೇಕರು ಈ ಎರಡೂ ಸಿದ್ಧಾಂತಗಳ ಸ್ವಲ್ಪ ಭಾಗವನ್ನು ನಂಬುತ್ತಾರೆ. ಆದರೆ, ಇತರ ಪಮುಖ ಧರ್ಮಗಳ ಧರ್ಮ ಪ್ರಚಾರ, ಮತಾಂತರ ಮತ್ತು ಧರ್ಮಾಂತರ ಚಟುವಟಿಕೆಗಳ ಅವಗತವಾದ ಮತ್ತು ವಾಸ್ತವಿಕ ಅಪಾಯಕ್ಕೆ ಪ್ರತಿಕ್ರಿಯೆಯಾಗಿ ಬಹುತೇಕ ಹಿಂದೂಗಳು ವಾಸ್ತವಿಕವಾಗಿ (ಯಾವುದೇ) ಒಂದು ಧರ್ಮದಿಂದ (ಬೇರಾವುದೇ) ಮತ್ತೊಂದು ಧರ್ಮಕ್ಕೆ ಮತಾಂತರದ ಕಲ್ಪನೆಯನ್ನು ವಿರೋಧಿಸುತ್ತಾರೆ.

ಪಾಶ್ಚಾತ್ಯ ದೇಶಗಳಲ್ಲಿನ ಹಿಂದೂಗಳು ಸಾಮಾನ್ಯವಾಗಿ ಮತಾಂತರಹೊಂದಲು ಇಷ್ಟಪಡುವವರನ್ನು ಸ್ವೀಕರಿಸಿ ಸ್ವಾಗತಿಸುತ್ತಾರೆ, ಮತ್ತು ಭಾರತದಲ್ಲಿಯೂ ಮತಾಂತರಹೊಂದಲು ಇಷ್ಟಪಡುವವರಿಗೆ ಸಮ್ಮತಿಯು ಹೆಚ್ಚು ಸಾಮಾನ್ಯವಾಗುತ್ತಿದೆ. ಹಿಂದೂ ಪುನರುಜ್ಜೀವಕ ಚಳುವಳಿಗಳ ಹೆಚ್ಚಳದಿಂದ ಹಿಂದೂ ಧರ್ಮಕ್ಕೆ ಪುನರ್ಮತಾಂತರಗಳೂ ಹೆಚ್ಚಿವೆ. ಹಿಂದೂ ಧರ್ಮದ ಹೊರಗಿನ ಮತಾಂತರಗಳನ್ನು ಮಾನ್ಯಮಾಡಲಾಗದ ಕಾರಣ ಪುನರ್ಮತಾಂತರಗಳನ್ನು ಹೆಚ್ಚಾಗಿ ಒಪ್ಪಿಕೊಳ್ಳಲಾಗಿದೆ. ವಿವಾಹದ ಮೂಲಕ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವುದನ್ನು ಹೆಚ್ಚಾಗಿ ಅಂಗೀಕರಿಸಲಾಗಿದೆ ಮತ್ತು ಹಿಂದೂವಲ್ಲದ ಭಾಗದಾತನು ವಿಶಾಲ ಹಿಂದೂ ಕುಟುಂಬ ಹಾಗೂ ಸಮಾಜದೊಳಗಿನ ಆಧ್ಯಾತ್ಮಿಕ, ಧಾರ್ಮಿಕ, ಮತ್ತು ಸಾಂಸ್ಕೃತಿಕ ಕರ್ತವ್ಯಗಳಲ್ಲಿ ಸಂಪೂರ್ಣವಾಗಿ ಭಾಗವಹಿಸುವುದನ್ನು ಸಾಧ್ಯವಾಗಿಸಲು ಇದು ಹಲವುವೇಳೆ ನಿರೀಕ್ಷಿತವಾಗಿರುತ್ತದೆ.

ಹಿಂದೂ ಧರ್ಮಕ್ಕೆ ಮತಾಂತರಹೊಂದಲು ಯಾವುದೇ ಶಾಸ್ತ್ರೋಕ್ತ ಪ್ರಕ್ರಿಯೆಯಿಲ್ಲವಾದರೂ, ಅನೇಕ ಸಂಪ್ರದಾಯಗಳಲ್ಲಿ ದೀಕ್ಷೆ ("ಉಪಕ್ರಮ") ಎಂದು ಕರೆಯಲ್ಪಡುವ ಒಂದು ಕ್ರಿಯಾವಿಧಿಯು ಆಧ್ಯಾತ್ಮಿಕ ಜೀವನದ ಆರಂಭವನ್ನು ಮಾನ್ಯಮಾಡುತ್ತದೆ. ಶುದ್ಧಿ ಎಂದು ಕರೆಯಲ್ಪಡುವ ಒಂದು ಕ್ರಿಯಾವಿಧಿಯು ಕೆಲವೊಮ್ಮೆ ಪುನರ್ಮತಾಂತರದ ನಂತರ ಆಧ್ಯಾತ್ಮಿಕ ಜೀವನಕ್ಕೆ ಪುನರಾಗಮನವನ್ನು ಮಾನ್ಯಮಾಡುತ್ತದೆ. ಆಧ್ಯಾತ್ಮಿಕ ಜೀವನದ ಉದ್ದೇಶಗಳನ್ನು, ಪ್ರಾಮಾಣಿಕವಾಗಿ ಆಚರಿಸಿದರೆ, ಯಾವುದೇ ಧರ್ಮದ ಮೂಲಕ ಸಾಧಿಸಬಹುದೆಂದು ಹಿಂದೂ ಪಂಥಗಳು ನಂಬುವ ಕಾರಣ, ಬಹುತೇಕ ಹಿಂದೂ ಪಂಥಗಳು ಮತಾಂತರಿಗಳನ್ನು ಅರಸುವುದಿಲ್ಲ. ಆದರೆ, ಆರ್ಯ ಸಮಾಜ, ಶೈವ ಸಿದ್ಧಾಂತ ಚರ್ಚ್, ಬಿಎಪಿಎಸ್, ಇಸ್ಕಾನ್‌ನಂತಹ ಕೆಲವು ಹಿಂದೂ ಪಂಥಗಳು ಮತ್ತು ಅಂಗಸಂಸ್ಥೆಗಳು ಹಿಂದೂ ಧರ್ಮವನ್ನು ಅನುಸರಿಸುವ ಅಪೇಕ್ಷೆಯಿರುವವರನ್ನು ಸ್ವೀಕರಿಸುತ್ತವೆ.

ಸಾಮಾನ್ಯವಾಗಿ, ಹಿಂದೂ ಧರ್ಮದ ಧಾರ್ಮಿಕ ಸ್ವಾತಂತ್ರ್ಯದ ಆಶಯ ಮತಾಂತರಿಸುವ ಸ್ವಾತಂತ್ರ್ಯದ ಮೇಲೆ ಆಧರಿಸಿಲ್ಲ, ಬದಲಾಗಿ, ಒಬ್ಬರ ಧರ್ಮವನ್ನು ನಡೆಸಿಕೊಂಡು ಬರುವ ಹಕ್ಕು ಮತ್ತು ಮತಾಂತರಕ್ಕೆ ಒಳಪಡದೇ ಇರುವ ಸ್ವಾತಂತ್ರ್ಯದ ಮೇಲೆ ಆಧರಿಸಿದೆ. ಮತಾಂತರಿಸುವ ಧರ್ಮಗಳನ್ನು ಪ್ರೋತ್ಸಾಹಿಸುವ ಕಾರಣ, ಮಾನವ ಹಕ್ಕುಗಳ ವಿಶ್ವವ್ಯಾಪಿ ಘೋಷಣೆಯಲ್ಲಿರುವ ಧಾರ್ಮಿಕ ಸ್ವಾತಂತ್ರ್ಯದ ಅಧಿನಿಯಮದ ಈಗಿರುವ ಸೂತ್ರೀಕರಣವನ್ನು ಬದಲಾಯಿಸಬೇಕೆಂದು ಹಿಂದೂ ಮುಖಂಡರು ವಾದಿಸುತ್ತಿದ್ದಾರೆ.