Homeಭಗವದ್ಗೀತೆ ಶ್ಲೋಕ |  Contact UsGoogle+
Bhagavad Gita
ಹಿಂದೂ ಧರ್ಮ ವೇದ ಉಪನಿಷತ್ ಮಹಾಕಾವ್ಯಗಳು ಭಗವದ್ಗೀತೆ ಪುರಾಣಗಳು ಭಗವದ್ಗೀತೆ ಶ್ಲೋಕ ಪಂಚಾಂಗ Other Links
 
 
 

ಉಪನಿಷತ್

ಉಪನಿಷತ್‌ಗಳು (ದೇವನಾಗರಿ: उपनिषद्, "ಉಪನಿಷದ್" ಎಂದೂ ಬರೆಯುತ್ತಾರೆ) ವೇದಾಂತದ ಮೂಲ ಉಪದೇಶಗಳನ್ನು ಹೊಂದಿರುವ ಹಿಂದು ಧರ್ಮಗ್ರಂಥಗಳಾಗಿವೆ. ಸಾಂಪ್ರದಾಯಿಕವಾಗಿ ಇವುಗಳಿಗೆ ಯಾವುದೇ ಲೇಖಕರಿಲ್ಲ. ಇವುಗಳನ್ನು ಶೃತಿ ಗಳ ವರ್ಗಕ್ಕೆ ಸೇರಿಸುತ್ತಾರೆ.ಇವು ಸಂಸ್ಕೃತ ಸಾಹಿತ್ಯದ ಯಾವುದಾದರೊಂದು ವಿಶಿಷ್ಟ ಕಾಲಕ್ಕೆ ಸೇರಿರುವುದಿಲ್ಲ, ಅವುಗಳಲ್ಲಿ ಅತ್ಯಂತ ಪುರಾತನವಾದ ಬೃಹದಾರಣ್ಯಕ ಮತ್ತು ಛಾಂದೊಗ್ಯ ಉಪನಿಷತ್‌ಗಳು, ಬ್ರಾಹ್ಮಣಗಳ ಮತ್ತು ಅರಣ್ಯಕಗಳ ಕಡೆಯ ಕಾಲಕ್ಕೆ (ಅಂದಾಜು ಕ್ರಿ.ಪೂ ಮೊದಲ ಸಹಸ್ರಮಾನ)ಸೇರುತ್ತವೆ. ಉಪನಿಷತ್ತುಗಳು ನೂರಾರು ಇದ್ದರೂ ಮುಖ್ಯ ವಾದವುಗಳು (ಅಂದರೆ ಹಳೆಯವು) ೧೧ ಮಾತ್ರಾ. ಮುಖ್ಯ ಉಪನಿಷತ್ತುಗಳು ಬುದ್ಧಪೂರ್ವ ಕಾಲದಲ್ಲಿ ರಚಿಸಲ್ಪಟ್ಟಿದ್ದರೆ, ಇತ್ತೀಚಿನವುಗಳು ಮಧ್ಯಯುಗ ಮತ್ತು ಪೂರ್ವ ಆಧುನಿಕ ಕಾಲದಲ್ಲಿ ಸಂಪಾದಿಸಲ್ಪಟ್ಟಿವೆ. ಉಪನಿಷತ್‌ಗಳು ಹಿಂದು ತತ್ವಶಾಸ್ತ್ರದ ಮೇಲೆ ಮುಖ್ಯವಾದ ಪ್ರಭಾವ ಬೀರಿವೆ ಮತ್ತು ಬ್ರಿಟಿಷ್ ಕವಿ ಮಾರ್ಟಿನ್ ಸೇಮೋರ್-ಸ್ಮಿತ್ ಪ್ರಕಾರ ಇವುಗಳನ್ನು ವಿಶ್ವದ ಅತ್ಯಂತ ಪ್ರಭಾವಶಾಲಿ ೧೦೦ ಪುಸ್ತಕಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

ತತ್ವಶಾಸ್ತ್ರಜ್ಞ ಹಾಗು ಭಾಷ್ಯಕಾರರಾದ ಶಂಕರಾಚಾರ್ಯರು ಹನ್ನೊಂದು ಮುಖ್ಯ ಅಥವಾ ಪ್ರಧಾನ ಉಪನಿಷತ್‌ಗಳ ಮೇಲೆ ಅರ್ಥ ನಿರೂಪಣೆ ಮಾಡಿದ್ದಾರೆಂದು ನಂಬಲಾಗಿದೆ. ಇವುಗಳನ್ನು ಸಾಮಾನ್ಯವಾಗಿ ಬಹುಹಿಂದಿನ ಕಾಲದಲ್ಲಿ ಅಂದರೆ ವೇದಗಳ ನಂತರದ ಕಾಲದಿಂದ ಮೌರ್ಯರ ವರೆಗಿನ ಕಾಲಕ್ಕೆ ಸೇರಿದವುಗಳೆಂದು ಸಹ ತಿಳಿಯಲಾಗಿದೆ. ಮುಕ್ತಿಕಾ ಉಪನಿಷದ್‌ನಲ್ಲಿ (೧೬೫೬ಕ್ಕೂ ಹಿಂದಿನ) ೧೦೮ ಅಂಗೀಕೃತ ಪ್ರಮಾಣ ಉಪನಿಷದ್‌ಗಳ ಪಟ್ಟಿ ಇದ್ದು, ಆ ಪಟ್ಟಿಯೇ ಅಂತಿಮ ಪಟ್ಟಿ ಎಂದು ತಿಳಿಸಲಾಗಿದೆ. ಉಪನಿಷದ್‌ಗಳಲ್ಲಿ ನಾನಾ ರೀತಿಯ ತತ್ವಶಾಸ್ತ್ರದ ಮತಾಭಿಪ್ರಾಯಗಳನ್ನು ಪ್ರತಿಪಾದಿಸಿದ್ದರೂ ಅವುಗಳಲ್ಲಿ ಉದಾತ್ತವಾದ ಏಕಾತ್ಮವಾದವೇ ಪ್ರಮುಖವಾದದ್ದೆಂಬ ಶಂಕರಾಚಾರ್ಯರ ನಿಲುವನ್ನು ಅವರ ನಂತರದ ಭಾಷ್ಯಕಾರರು ಅನುಸರಿಸಿದರು.

ಮೊಘಲ್ ಚಕ್ರವರ್ತಿ ಶಹಜಹಾನನ ಮಗ ದಾರಾ ಶಿಕೊಹ್ (ಮ. ೧೬೫೯) ಐವತ್ತು ಉಪನಿಷದ್‌ಗಳನ್ನು ಪರ್ಷಿಯನ್ ಭಾಷೆಗೆ ಅನುವಾದಿಸಿದ್ದನು. ಮ್ಯಾಕ್ಸ್ ಮುಲ್ಲರ್‌ಗೆ (೧೮೭೯) ೧೭೦ ಉಪನಿಷದ್‌ಗಳ ಅರಿವಿತ್ತು. ಸದಾಲೆಯು ತನ್ನ ಬೃಹತ್ ಕಾವ್ಯಗಳ ಪಟ್ಟಿಯಲ್ಲಿUpaniṣad-vākya-mahā-kośa ಉಪಲಬ್ಧವಿರುವ ಬೇರೆ ಬೇರೆ 223 ಇದೇ ಹೆಸರಿನಿಂಡ ಕರೆಯಲ್ಪಡುವ ಗ್ರಂಥಗಳಾನ್ನು ಸೂಚಿಸಿದ್ದಾನೆ. ಇದರ ಜೊತೆಗೆ, ಉಪನಿಷದ್‌ಗಳ ಸಮಯಕ್ಕೂ ಮುಂಚೆ ರಚಿತವಾದ ಬ್ರಾಹ್ಮಣರ ಭಾಗಗಳು ಮತ್ತು ವೇದಗಳ ಸೂಕ್ತಗಳನ್ನೂ ಕೆಲವು ಬಾರಿ ಉಪನಿಷದ್‌ಗಳೆಂದು ಭಾವಿಸಲಾಗಿದೆ.

ಪದಮೂಲ

ಸಂಸ್ಕೃತ ಪದ ಉಪ- (ಹತ್ತಿರದಲ್ಲಿ), ನಿ- (ಸರಿಯಾಗಿ ಸ್ಥಳದಲ್ಲಿ,ಕೆಳಗೆ) ಮತ್ತು ಸದ್ ("ಹತ್ತಿರದಲ್ಲಿ ಕೆಳಗೆ ಕೂಡುವುದು" (ಉಪಾದ್ಯಾಯರ ಬಳಿ ಉಪದೇಶ ಪಡೆಯಲು)) - ಸ್ಕೇಯರ್ ವಿವರಿಸಿದಂತೆ ಉಪಾದ್ಯಾಯರಿಗೆ "ಮುತ್ತಿಗೆ ಹಾಕುವುದು". "ಸ್ಥಳೀಯ ಅಧಿಕೃತ ವಕ್ತಾರರ ಹೇಳಿಕೆಯಂತೆ ಉಪನಿಷದ್ ಎಂದರೆ ಬ್ರಹ್ಮ ಜ್ಞಾನವನ್ನು ಭೋದಿಸುವುದರಿಂಡ ಅಜ್ಞಾನವನ್ನು ನಿವಾರಿಸುವುದು" ಎಂದು ಮೋನಿಯರ್-ವಿಲಿಯಮ್ಸ್ರು ಸೇರಿಸಿ ಹೇಳುತ್ತಾರೆ ");..."ಶಂಕರರು ಉಪನಿಷತ್ ಪದದupaniṣad ಮೇಲೆ ಅವು ಕೊಡುವ ಟಿಪ್ಪಣಿಯು ಅದನ್ನು ಆತ್ಮವಿದ್ಯೆ ಗೆ ಅಂದರೆ ’ನಾನು’ ಎಂಬುದರ ಬಗ್ಗೆ ತಿಳುವಳಿಕೆ ಬ್ರಹ್ಮವಿದ್ಯೆ ಗೆ ದೇವನ ಬಗ್ಗೆ ತಿಳುವಳಿಕೆಗೆ ಕಠ ಮತ್ತು ಬೃಹದಾರಣ್ಯಕ ಉಪನಿಷತ್‌ಗಳು ಸಮ ಎಂದು ಸೂಚಿಸುತ್ತದೆ. ಪದದ ಶಬ್ಧಾರ್ಥವನ್ನು ಇತರೆ ಪದಕೋಶಗಳು "ವಿಶೇಷ ಜ್ಞಾನಿಗಳಿಗಾಗಿ ಇರುವ" ಮತ್ತು "ರಹಸ್ಯವಾದ ಸಿದ್ಧಾಂತ" ಎಂದು ಕೊಟ್ಟಿವೆ.

ತತ್ವಚಿಂತನೆ

ಉಪನಿಷದ್‌ಗಳು ಒಂದು ವಿಶ್ವವ್ಯಾಪಿ ಚೇತನ (ಬ್ರಹ್ಮ ) ಮತ್ತು ಒಂದು ವೈಯಕ್ತಿಕ ಸ್ವರೂಪದ (ಆತ್ಮ ), ಬಗ್ಗೆ ಹೇಳುತ್ತವೆ ಮತ್ತು ಕೆಲವೊಮ್ಮೆ ಇವೆರಡರ ಅನನ್ಯತೆಯನ್ನು ಪ್ರತಿಪಾದಿಸುತ್ತವೆ. ಬ್ರಹ್ಮನು ಸರ್ವಶ್ರೇಷ್ಠನೂ, ಇಂದ್ರಿಯಾತೀತನೂ ಆಗಿದ್ದು , ಸಂಪೂರ್ಣ ಹಾಗೂ ಅನಂತ ಅಸ್ತಿತ್ವ ವಿರುವ ಸರ್ವಾಂತರ್ಯಾಮಿಯಾಗಿದ್ದಾನೆ.ಅಲ್ಲದೇ, ಅವನು ಹಿಂದೆ ಇದ್ದ,ಈಗ ಇರುವ , ಮುಂದೆ ಇರಬಹುದಾದ ಎಲ್ಲದರ ಮೊತ್ತವಾಗಿದ್ದಾನೆ. ರಹಸ್ಯಾತ್ಮಕ ಗುಣ ಮತ್ತು ಗಾಢ ತತ್ವಶಾಸ್ತ್ರದ ಕಡೆಗೆ ಬಲ ಉಪನಿಷದ್‌ಗಳನ್ನು ನಾನಾವಿಧಗಳಲ್ಲಿ ವಿವರಿಸುವಂತೆ ಮಾಡಿದೆ. ಮತ್ತು ಮೂರು ಮುಖ್ಯವಾದ ವೇದಾಂತ ಮತಗಳನ್ನು ಹುಟ್ಟು ಹಾಕಿದೆ. ಶಂಕರರ ಉಪನಿಷದ್ ಅರ್ಥವಿವರಣೆಯು ಬ್ರಹ್ಮನನ್ನು ಏಕದೇವತತ್ವದ ದೇವರಾಗಿ ವರ್ಣಿಸಿಲ್ಲ. ಶಂಕರರ ತತ್ವವಾದವನ್ನು ಅಧ್ವೈತ, "ಎರಡು-ಅಲ್ಲದ" ಎಂದು ಕರೆಯಲಾಗಿದೆ. ಇದು ಮಧ್ವಾಚಾರ್ಯರು ಸ್ಥಾಪಿಸಿದ ದ್ವೈತವಾದಕ್ಕೆ ವಿರುದ್ಧವಾಗಿದೆ, ದ್ವೈತವಾದವು ಬ್ರಹ್ಮನನ್ನು ಸರ್ವಶ್ರೇಷ್ಠ ಸಾಕಾರ ದೇವನಾಗಿ, ಮಾನವನ ಆತ್ಮಕ್ಕಿಂತ ವಿಭಿನ್ನವಾಗಿ ಕಾಣುತ್ತದೆ ಮತ್ತು ಆ ದೇವನು ವಿಷ್ಣು ಅಥವಾ ಕೃಷ್ಣನಾಗಿರುವಂತೆ ಬಿಂಬಿಸುತ್ತದೆ. (ಬ್ರಹ್ಮನೋ ಹಿ ಪ್ರತಿಷ್ಠಾನಂ , ನಾನು ಬ್ರಹ್ಮನ ಮೂಲ ಸಂಸ್ಥಾಪಕ ಭಗವದ್ಗೀತೆ ೧೪.೨೭). ವೇದಾಂತದ ಮೂರನೇ ಮುಖ್ಯ ಮತವೆಂದರೆ ರಾಮಾನುಜಾಚಾರ್ಯರು ಸ್ಥಾಪಿಸಿದ ವಿಶಿಷ್ಠಾದ್ವೈತವಾಗಿದ್ದು ಮೇಲಿನೆರಡು ಮತಗಳಿಗೂ ಸಾಮಾನ್ಯವಾದ ತೋರಿಕೆಗಳನ್ನು ಹೊಂದಿದೆ ಮತ್ತು ಇವೆರಡನ್ನೂ ಸಮನ್ವಯಗೊಳಿಸಲು ಬಯಸಿದೆ.

ತೈತ್ತರೀಯ ಉಪನಿಷದ್‌ ನ ಒಂಭತ್ತನೆಯ ಶ್ಲೋಕ ಹೀಗೆಂದು ಹೇಳುತ್ತದೆ:

ಬ್ರಹ್ಮಾನಂದವನ್ನು ಹೊಂದಿದ ವ್ಯಕ್ತಿಯು" (ದೇವರ ಜ್ಞಾನ). "ನಾನೇಕೆ ಸತ್ಕಾರ್ಯಗಳನ್ನು ಮಾಡಿಲ್ಲ? ನಾನೇಕೆ ಕುಕರ್ಮಗಳನ್ನು ಮಾಡಿದೆ?" ಎಂದು ಬಳಲುವುದಿಲ್ಲ. ಇದನ್ನು (ಆನಂದ) ತಿಳಿದ ಯಾರಾದರೂ ಇವೆರಡನ್ನೂ (ಸ್ವಯಂ, ಆತ್ಮ), ಇವೆರಡನ್ನೂ ಆತ್ಮನ್ ಎಂದು ಅರಿತು ಸುಖಿಯಾಗುತ್ತಾನೆ. ಹೀಗೆ ನಿಜವಾಗಿ, ಉಪನಿಷತ್ ಬ್ರಹ್ಮನ ಗೌಪ್ಯವಾದ ಜ್ಞಾನವಾಗಿದೆ.

ಉಪನಿಷದ್‌ಗಳು ಅದ್ವೈತ ವೇದಾಂತಕ್ಕೆ ನೀಡಿದ ಮುಖ್ಯ ವಾಕ್ಯ ಭಾಗವೆಂದರೆ, तत् त्वं असि "ತತ್ ತ್ವಂ ಅಸಿ" (ಅದು ನೀನೆ ಆಗಿದ್ದೀಯಾ). ವೇದಾಂತಿಗಳು ಕೊನೆಗೆ ಸರ್ವಶ್ರೇಷ್ಠ, ನಿರಾಕಾರ, ನಿಗಮ್ಯ ಬ್ರಹ್ಮನು, ನಮ್ಮ ಆತ್ಮನೂ ಒಂದೇ ಆಗಿರುತ್ತಾರೆ. ನಾವು ನಮ್ಮ ತಾರತಮ್ಯ ಜ್ಞಾನದಿಂದ ಮಾತ್ರ ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. (ಈ ವಾಕ್ಯಭಾಗದ, ಅರ್ಥವಿವರಣೆಗಳು ಬೇರೆ ಬೇರೆ ರೀತಿಯಲ್ಲಿವೆ.) ಇಶಾ ಉಪನಿಷದ್, ಈಶ ಉಪನಿಶತ್, ಈಶೋಪನಿಶತ್, ಈಶಾವಾಸ್ಯೋಪನಿಶತ್, ಈಶಾವಾಸ್ಯ ಉಪನಿಷತ್,೬, ೭ & ೮ ನೇ ಶ್ಲೋಕಗಳು

ಯಾರು ಎಲ್ಲಾ ಜೀವಿಗಳನ್ನು ಆತ್ಮನಲ್ಲಿ ಕಾಣುತ್ತಾರೋ ಮತ್ತು ಆತ್ಮವನ್ನು ಎಲ್ಲಾ ಜೀವಿಗಳಲ್ಲಿ ಕಾಣುತ್ತಾರೋ...
ಯಾರು ಇವೆರಡರಲ್ಲಿರುವ ಐಕ್ಯತೆಯನ್ನು ಕಾಣುತ್ತಾರೋ ಅವರಿಗೆಲ್ಲಿದೆ ದುಖಃ ಮತ್ತು ಭ್ರಾಂತಿ?
ಅದು ಎಲ್ಲವನ್ನೂ ತುಂಬಿದೆ. ಅದು ಪ್ರಜ್ವಲ, ನಿರಾಕಾರ, ಅಮರ, ಅವಧ್ಯ...
ಸರ್ವಜ್ಞ, ಚುರುಕು ಬುದ್ಧಿಯ, ಸರ್ವವ್ಯಾಪಿ, ಸ್ವಯಂಭುವ,
ಇದು ಅನಂತಕಾಲದವರೆಗೆ ಸೃಷ್ಠಿಯನ್ನು ನಿಯಂತ್ರಿಸುತ್ತದೆ.

ಉಪನಿಷದ್‌ಗಳು ಮೊಟ್ಟ ಮೊದಲ ಹಾಗೂ ಅತ್ಯಂತ ಸ್ಪುಟವಾಗಿ ಪವಿತ್ರ ಅಕ್ಷರವಾದ ಅ‌ಉಮ್ ಅಥವಾ ಓಂಕಾರವನ್ನು ವಿವರಿಸುತ್ತವೆ. ಇದು ಎಲ್ಲಾ ಸೃಷ್ಠಿಯ ಮೂಲಾಧಾರವಾದ ವಿಶ್ವಕಂಪನ ನಾದವಾಗಿದೆ. "ಓಂ ಶಾಂತಿ ಶಾಂತಿ ಶಾಂತಿ " ಎನ್ನುವ ಮಂತ್ರ (ಶಬ್ಢವಿಲ್ಲದ ನಾದ, ಶಾಂತಿ, ಶಾಂತಿ, ಶಾಂತಿ)ಉಪನಿಷದ್‌ಗಳಾಲ್ಲಿ ಪದೇ ಪದೇ ಕಂಡುಬರುತ್ತದೆ. 'ಭಗವಂತನಿಗೆ ನಿಷ್ಠೆ' (ಸಂಸ್ಕೃತ: ಭಕ್ತಿ) ಸರಳ ಅರ್ಥದಲ್ಲಿ ಭಕ್ತಿಯು ಉಪನಿಷತ್‌ಗಳ ಸಾಹಿತ್ಯದ ಮುಂಚೂಡಿಯಾಗಿದ್ದು ಮತ್ತು ನಂತರ ಅದನ್ನು ಭಗವದ್ಗೀತೆ ಯಂತಹ ಗ್ರಂಥಗಳು ಕಂಡುಕೊಂಡವು.

ಉಪನಿಷದ್‌ಗಳ ಪಟ್ಟಿ

"ಪ್ರಧಾನ" ಉಪನಿಷತ್‌ಗಳು

ಶೃತಿ (ವೇದಗಳ ಸಮ) ಎಂದು ಬಹಳಷ್ಟು ಹಿಂದುಗಳು ಮಾನ್ಯಮಾಡಿರುವ ಮತ್ತು ಶಂಕರರು ಭಾಷ್ಯ ಬರೆದಿರುವ "ಪ್ರಧಾನ" ಮುಖ್ಯ ಉಪನಿಷತ್‌ಗಳ ಒಳಗೊಂಡ ಪಟ್ಟಿ ಈ ಕೆಳಕಂಡಂತಿದೆ. ಪ್ರತಿಯೊಂದು ನಾಲ್ಕು ವೇದಗಳಿಗೆ ಸಂಬಂಧಿಸಿವೆ (ಋಗ್ವೇದ (ṚV), ಸಾಮವೇದ (SV), ಶುಕ್ಲ ಯಜುರ್ವೇದ (ŚYV), ಕೃಷ್ಣ ಯಜುರ್ವೇದ (KYV), ಅಥರ್ವವೇದ (AV));

ಕೌಷಿಕಿ ಮತ್ತು ಮೈತ್ರಾಯಣಿ ಉಪನಿಷತ್‌ಗಳನ್ನು ಸೇರಿಸಲಾಗಿದೆ. ಇವೆಲ್ಲವೂ ಸಾಮಾನ್ಯವಾಗಿ ಕಾಲಗಣನಾ ಪದ್ಧತಿಗಿಂತಲೂ ಹಿಂದಿನವುಗಳು. ಭಾಷಾ ಶಾಸ್ತ್ರದ ಸಾಕ್ಷಿಗಳ ಆಧಾರದಲ್ಲಿ ಅವುಗಳಲ್ಲಿ ಬಹಳ ಹಿಂದಿನವು ಎಂದರೆ ಬೃಹದಾರಣ್ಯಕ ಉಪನಿಷತ್ ಮತ್ತು ಚಂದೋಗ್ಯ ಉಪನಿಷತ್‌ಗಳು. ವೈದಿಕ ಸಂಸ್ಕೃತದ ಕಡೆಯ ಕಾಲಕ್ಕೆ ಸೇರಿದ ಜೈಮಿನೀಯ ಉಪನಿಷದ್‌ಬ್ರಾಹ್ಮಣವನ್ನೂ ಇವುಗಳೊಡನೆ ಸೇರಿಸಬಹುದು. ಐತರೇಯ, ಕೌಷಿಟಕಿ ಮತ್ತು ತೈತ್ತಿರೀಯ ಉಪನಿಷತ್‍ಗಳು ಸರಿಸುಮಾರು ಒಂದೇ ಕಾಲಕ್ಕೆ ಸೇರಿದ್ದು ಉಳಿದವುಗಳು ವೈದಿಕ ಮತ್ತು ಶಾಸ್ತ್ರೀಯ ಸಂಸ್ಕೃತದ ಸಂಕ್ರಮಣ ಕಾಲದಲ್ಲಿ ರಚಿಸಿದವುಗಳಾಗಿವೆ.

ಹಳೆಯ ಉಪನಿಷತ್‌ಗಳು ವೈದಿಕ ಚರಣಗಳು, ಶಾಖೆಗಳ ಅಥವಾ ಶಾಲೆಗಳು; ಐತರೇಯ ಮತ್ತು ಕೌಷಿಕಿ ಉಪನಿಷತ್‌ಗಳು ಕೌತುಮ ಶಖಾದ ಜೊತೆಗೆ ಶಕಾಲ ಶಖಾಗೆ ಛಾಂದೋಗ್ಯೋಪನಿಷತ್ ಉಪನಿಷತ್‌, ಕೆನಾ ಉಪನಿಷತ್ ಜೊತೆಗೆ ಜೈಮಿನೀಯ ಶಖಾ, {ಕಠೋಪನಿಷತ್ ಉಪನಿಷತ್ ಜೊತೆಗೆ ಕರಕ-ಕಥಾ ಶಖಾ, ತೈತ್ತಿರೀಯೋಪನಿಷತ್ ಮತ್ತು ಶ್ವೇತಾಶ್ವತರೋಪನಿಷತ್ ಉಪನಿಷತ್‌ಗಳ ಜೊತೆಗೆ ತೈತ್ತಿರೀಯ ಶಖಾ, ಮೈತ್ರಾಯಣಿ ಉಪನಿಷತ್ ಜೊತೆಗೆ ಮೈತ್ರಾಯನಿ ಶಖಾ, ಬೃಹದಾರಣ್ಯಕ ಉಪನಿಷತ್ ಮತ್ತು ಈಶಾವಾಸ್ಯೋಪನಿಷತ್ ಉಪನಿಷತ್‌ಗಳು ಜೊತೆಗೆ ವಾಜಸನೇಯ ಮಧ್ಯಾನದಿನ ಶಖಾ, ಮತ್ತು ಮಾಂಡೂಕ್ಯೋಪನಿಷತ್ ಮತ್ತು ಮುಂಡಕೋಪನಿಷತ್ ಉಪನಿಷತ್‌ಗಳು ಜೊತೆಗೆ ಶೌನಕ ಶಖಾ.

ಮುತ್ತಿಕಾ ಉಪನಿಷತ್‌ನ ೧೦೮ ಉಪನಿಷತ್‌ಗಳ ಪೈಕಿ ಮೊದಲ ೧೦ ಮುಖ್ಯ "ಪ್ರಧಾನ" ಉಪನಿಷತ್‌ಗಳಾಗಿ ಪರಿಗಣಿಸಿದೆ. ೨೧ನ್ನು ಸಾಮಾನ್ಯ ವೇದಾಂತ "ಸಾಮಾನ್ಯ ವೇದಾಂತ"ವೆಂದು, ೨೩ನ್ನು ಸನ್ಯಾಸ, ೯ ಶಾಕ್ತ, ೧೩ನ್ನು ವೈಷ್ಣವ, ೧೪ನ್ನು ಶೈವ ಮತ್ತು ೧೭ನ್ನು ಯೋಗ ಉಪನಿಷತ್‌ಗಳು.

ಶಾಕ್ತ ಉಪನಿಷತ್‌ಗಳು

ನಂತರದ ಉಪನಿಷತ್‌ಗಳು ಆಗಾಗ ಹೆಚ್ಚು ಪಂಥಾಭಿಮಾನಿ (ಸಂಕುಚಿತ ಮನೋಭಾವ)ಗಳಾಗಿದ್ದು, ತಮ್ಮ ಪಂಥದ ಚಟುವಟಿಕಿಗಳಿವೆ, ತಮ್ಮ ಗ್ರಂಥಗಳಿಗೆ ಅಧಿಕೃತ ನಾಮಮಾತ್ರದ ’ಶೃತಿ ’ ಸ್ಥಾನವನ್ನು ಪಡೆಯುವ ತಂತ್ರಗಳಾಗಿವೆ." ಅಧಿಕೃತ ಶಾಕ್ತ ಉಪನಿಷತ್‌ಗಳು, ಅತಿಹೆಚ್ಚು ಭಾಗ, ತಮ್ಮ ಪಂಥೀಯ ದಾರಿಯಲ್ಲೇ ಸಾಗುತ್ತಾ, ಎರಡು ಮುಖ್ಯ ಗುಂಪಾದ ಶ್ರೀವಿದ್ಯಾ ಉಪಾಸನೆಯ (ತಾಂತ್ರಿಕ ರೂಪದ ಶಾಕ್ತಿ ಪಂಥ) ಸಿದ್ಧಾಂತಗಳು ಮತ್ತು ವಿವರಣಾತ್ಮಕ ವ್ಯತ್ಯಾಸಗಳನ್ನು ಪ್ರತಿಬಿಂಬಿಸುತ್ತವೆ. ಅದರ ಪರಿಣಾಮವಾಗಿ ಪಟ್ಟಿಯಲ್ಲಿ ಲಭ್ಯವಿರುವ "ಅಧಿಕೃತ" ಶಾಕ್ತ ಉಪನಿಷತ್‌ಗಳು ತಮ್ಮ ವಸ್ತು ವಿಷಯಗಳಲ್ಲಿ ವಿಭಿನ್ನವಾಗಿದ್ದು, ಅವುಗಳ ಸಂಕಲನಕಾರರ ಪೂರ್ವಗ್ರಹ ಪೀಡಿತ ಪಂಥಾಭಿಮಾನವನ್ನು ಬಿಂಬಿಸುತ್ತವೆ:

"ಶಾಕ್ತ ಉಪನಿಷತ್‌ಗಳನ್ನು ಪಟ್ಟಿಮಾಡುವ ಹಿಂದಿನ ಪ್ರಯತ್ನಗಳು ತಾಂತ್ರಿಕ ಪರಂಪರೆಯಲ್ಲಿ ಅವುಗಳ ಸ್ಥಾನವನ್ನು ಅರಿಯುವ ಅಥವಾ ವೈದಿಕ ಪಂಥಗಳಲ್ಲಿ ಅವುಗಳ ಸ್ಥಾನವನ್ನು ಅರಿವಿನ ಹತ್ತಿರಕ್ಕೂ ನಮ್ಮನ್ನು ಒಯ್ಯುವುದಿಲ್ಲ. ತಾಂತ್ರಿಕರಿಗೆ ಪಣವಾಗಿ ಇರುವುದು ವಿವಾದವಿಲ್ಲದ ಶೃತಿಯ ಅಧಿಕೃತ ಮಾನ್ಯತೆಯಲ್ಲ, ಆದರೆ ಗ್ರಂಥಗಳ ಸರಿಯಾದ ವಿವರಣೆ ನೀಡುವುದಾಗಿದೆ .ತಾಂತ್ರಿಕೇತರ ಪಂಥದವರಿಗೆ, ಆ ತಾಂತ್ರಿಕ ಗ್ರಂಥದ, ಉಪನಿಷತ್ ಗ್ರಂಥವೆಂಬ ಗುರುತು ಪ್ರಶ್ನಿಸುವ ಅದರ ವಸ್ತು ವಿಷಯಗಳು ಮುಖ್ಯವಾಗುತ್ತವೆ. ವಿಷಯದಲ್ಲಿ ಪಠ್ಯದ ವರ್ಗೀಕರಣವು ಶೃತಿ ಮತ್ತು ಅದರಿಂದ ಇದರ ಮೂಲಸ್ವರೂಪದ ಅಧಿಕಾರವು ವೇದಗಳದ್ದು."

ಮುಕ್ತಿಕಾ ಉಪನಿಷತ್ ಒಂಭತ್ತರಲ್ಲಿ ವರ್ಗೀಕರಣವಾದ ಶಾಕ್ತ ಉಪನಿಷತ್‌ಗಳು ಹೀಗಿವೆ.

ಈ ಪಟ್ಟಿಯಲ್ಲಿ ವಿಶಾಲವಾಗಿ ಬಳಸಲ್ಪಡುವ, ಪ್ರಖ್ಯಾತ ಶಾಕ್ತ ಉಪನಿಷತ್‌ಗಳು ಈ ಪಟ್ಟಿಯಲ್ಲಿ ಇಲ್ಲ, ಅವುಗಳಲ್ಲಿ Kaula Upaniṣad , Śrīvidyā Upaniṣad ಮತ್ತು Śrichakra Upaniṣad ಕೂಡಾ ಸೇರಿವೆ.

ಭಾರತದಿಂದ ಹೊರಗೆ ವಿಖ್ಯಾತಿ

ಚಕ್ರವರ್ತಿಯಾದ ಅಕ್ಬರ್ ನ ಉದಾರ ಧಾರ್ಮಿಕ ಸ್ವಭಾವದ ಪರಿಣಾಮವಾಗಿ ಸಂಸ್ಕೃತ ದಿಂದ ಮೊದಲು ಪರ್ಷಿಯನ್ ಭಾಷೆಗೆ ಉಪನಿಷತ್‌ಗಳು ಅನುವಾದ ನಂತರ ಭಾರತದಿಂದ ಹೊರಗೆ ವೇದಗಳು ವಿಖ್ಯಾತವಾದವು. ಷಹಜಹಾನ ನು ಚಕ್ರವರ್ತಿಯಿಂದ ಪ್ರಭಾವಿತನಾಗಿದ್ದು ಅವನ ದೃಷ್ಠಿಕೋನವನ್ನು ಹಂಚಿಕೊಂಡಿದ್ದನು. ಷಹ ಜಹಾನನ ಹಿರಿಯ ಮಗ ದಾರಾ ಶಿಕೊಹ್, ಒಬ್ಬ ಉದಾರ ಮುಸ್ಲಿಮನಾಗಿದ್ದನು, ಎರಡು ಸಮುದ್ರಗಳ ಮಿಲನ ಎಂಬ ಅರ್ಥ ಬರುವ ಮಜ್ಮಾ-ಉಲ್-ಬಹ್ರೇನ್ ಪುಸ್ತಕವನ್ನು ಬರೆದಿದ್ದು ಇಸ್ಲಾಂ ಮತ್ತು ಹಿಂದೂ ಧರ್ಮಗಳ ನಡುವೆ ಸೌಹಾರ್ಧತೆ ಬೆಳೆಸಲು ಪ್ರಯತ್ನಿಸಿದನು. ೧೬೪೦ರಲ್ಲಿ, ದಾರಾ ಶಿಕೊಹ್ ಕಾಶ್ಮೀರಕ್ಕೆ ತೆರಳಿದಾಗ ಕೆಲವು ಪಂಡಿತರು, ಉಪನಿಷತ್‌ಗಳ ಬಗ್ಗೆ ಅವನಿಗೆ ತಿಳಿಸಿದರು. ಅವನು, ಆಗ ಮೊಘಲರ ವಶದಲ್ಲಿದ್ದ ವಾರಣಾಸಿಯಿಂದ ಕೆಲವು ಪಂಡಿತರನ್ನು ದೆಹಲಿಗೆ, ಭಾಷಾಂತರಕ್ಕೆ ಸಹಾಯ ಮಾಡಲು ಕರೆಸಿಕೊಂಡನು. ೧೬೬೭ರಲ್ಲಿ ಭಾಷಾಂತರವು ಮುಗಿಯಿತು. ಸಿರ್-ಏ-ಅಕ್ಬರ್ (ಅತಿ ಗಹನವಾದ ರಹಸ್ಯ), ಎಂಬ ಹೆಸರಿನಿಂದ ಹೆಸರಾದ ಪುಸ್ತಕದ ಮುನ್ನುಡಿಯಲ್ಲಿ ಖುರಾನಿನ ಕಿತಾಬ್ ಅಲ್-ಮ್ಯಾಕ್ನೂನ್ " ಅಥವಾ ಅಡಗಿದ ಪುಸ್ತಕ ವು ಉಪನಿಷತ್‌ಗಳನ್ನು ಬಿಟ್ಟು ಬೇರೆ ಅಲ್ಲ ಎಂದು ತಿಳಿಸಿದ್ದನು.

ಎರಡು ವರ್ಷಗಳ ನಂತರ ೦೬೫೯ರಲ್ಲಿ, ಕಟ್ಟಾ ಮುಸ್ಲಿಮನಾದ ಅವನ ತಮ್ಮಔರಂಗಜೇಬ್, ಶರಿಯಾ ನಿಯಮದ ಪ್ರಕಾರ ತಮ್ಮ ಇಸ್ಲಾಂ ಧರ್ಮ ತ್ಯಜಿಸಿದ ಆರೋಪದ ಮೇಲೆ ಅಣ್ಣನನ್ನು ಕೊಲ್ಲಿಸಿದನು. ಇದೊಂದು ಕೇವಲ ನೆಪವಾಗಿತ್ತು, ಏಕೆಂದರೆ ಶಿಕೋಹನ ಕೊಲೆಯ ನಂತರ ಔರಂಬಜೇಬನು ಸಿಂಹಾಸನ ಏರಿದನು.

ಯೂರೋಪಿನವರ ಪಾಂಡಿತ್ಯ

೧೭೭೫ರಲ್ಲಿ, ಫ್ರೆಂಚ್ ವಿದ್ವಾಂಸ ಆಂಕ್ವೆಟಿಲ್ ಡೊಪೆರಾನ್‌ನು ಉಪನಿಷತ್‌ಗಳ ಬಗ್ಗೆ ಬಾಗಷಃ ಕೈಬರಹದ ಪುಸ್ತಕವನ್ನು ಎಮ್. ಜೆಂಟಿಲ್‌ನಿಂದ ಪಡೆದನು. ಈತ ಆಗ ಶುಲಾ ಉದ್ ದೌಲನ ದರಬಾರಿನಲ್ಲಿದ್ದನು ಡೂಪೆರಾನನು ಇನ್ನುಳಿದ ಕೈಬರಹದ ಪುಸ್ತಕವನ್ನು ಬೇಡಿ ಪಡೆದು, ಇವೆರಡನ್ನು ತಾಳೆ ನೋಡಿ ಸಂಕಲಿಸಿ ಫ್ರೆಂಚ್ ಮತ್ತು ಲ್ಯಾಟಿನ್ ಭಾಷೆಗೆ ಅನುವಾದಿಸಿದನು. ಫ್ರೆಂಚ್ ಭಾಷೆಯ ಆವೃತ್ತಿ ಪ್ರಕಟಣೆಯಾಗಲೇ ಇಲ್ಲ, ಆದರೆ ಲ್ಯಾಟಿನ್ ಭಾಷಾಂತರವು ೧೮೦೧ ರಲ್ಲಿ ಪ್ರಕಟಣೆಯಾಯಿತು. ಇದಕ್ಕೆ ಲ್ಯಾಟಿನ್ ಶೀರ್ಷಿಕೆ Oupnek'hat ಆಗಿತ್ತು.

ಜರ್ಮನ್ ತತ್ವಜ್ಞಾನಿ ಶೋಪೆನ್‌ಹಾವರ್ ಲ್ಯಾಟಿನ್ ಆವೃತ್ತಿಯನ್ನು ಓದಿ ಉದಾರವಾಗಿ "ಹೇಗೆ ಪ್ರತಿಯೊಂದು ಸಾಲು ಸಹ ದೃಢ, ಸ್ಪಷ್ಟ, ಮತ್ತು ಸಾಮರಸ್ಯ ಅರ್ಥಪೂರ್ಣತೆಯಿಂದ ತುಂಬಿದೆ! ಪ್ರತಿಯೊಂದು ಪುಟದಲ್ಲಿಯೂ ಗಹನ, ಮೂಲ, ಸರ್ವಶ್ರೇಷ್ಠ ಚಿಂತನೆಗಳನ್ನು ಕಾಣುತ್ತೇವೆ, ಉದಾತ್ತ ಮತ್ತು ಪವಿತ್ರ ಶ್ರದ್ಧೆ ಎಲ್ಲವನ್ನೂ ಆವರಿಸಿದೆ. … ಇದು ಪ್ರಪಂಚದಲ್ಲಿಯೇ ಸಾಧ್ಯವಾಗುವ ಅತ್ಯಂತ ಲಾಭಕರ, ಸರ್ವಶ್ರೇಷ್ಠವಾದ ಪುಸ್ತಕ ವಾಚನ; ಇದು ನನ್ನ ಜೀವನಕ್ಕೇ ಸಮಾಧಾನ ತಂದಿದೆ ಮತ್ತು ನನ್ನ ಸಾವಿಗೂ ಸಹ ಸಮಾಧಾನಕರವಾಗಿದೆ." ಎಂದು ಹೊಗಳಿದನು. ೧೮೧೯ ಅವನ ಮುಖ್ಯವಾದ ಪುಸ್ತಕ, ದಿ ವರ್ಲ್ಡ್ ಯಾಸ್ ವಿಲ್ ಅಂಡ್ ರೆಪ್ರೆಸೆಂಟೇಶನ್ , ಮತ್ತು (೧೮೫೧) ಪ್ರಕಟಣೆಯಾದ ಪರೆರ್ಗಾ ಅಂಡ್ ಪ್ಯಾಲಿಪೋಮಾ ಗಳಲ್ಲಿ, ಈ ಹೊಗಳಿಕೆಯನ್ನು ಓದಬಹುದು. ವ್ಯಕ್ತಿಯು ಒಂದು ಮೂಲವಸ್ತುವಿನ ಯಥಾವತ್ ತೋರ್ಪಡಿಕೆ ಎಂದು ತನ್ನದೇ ಆದ ಸಿದ್ಧಾಂತ ಭೋಧಿಸುತ್ತಾ ಬಂದಿದ್ದ ಅವನು ಉಪನಿಷತ್‌ಗಳು ಇದನ್ನು ಸಮರ್ಥಿಸುತ್ತವೆ ಎಂದು ಕಂಡುಕೊಂಡ. ಆ ಮೂಲಭೂತವಾದ ಸತ್ಯವಾದ ಏಕತೆಗೆ ಶೋಪೆನ್‌ಹಾವರ್ ನಮಗೇ ಗೊತ್ತಿರುವ ’ಮನಸ್ಸು’ ಎಂದು ತಿಳಿದಿದ್ದನು.

ಜರ್ಮನ್ ತತ್ವಜ್ಞಾನಿಯಾದ ಫ್ರೆಡ್ರಿಚ್ ವಿಲ್ಹೆಮ್ ಜೋಸೆಫ್ ಶೆಲ್ಲಿಂಗ್‌ನು ಉಪನಿಷತ್‌ಗಳ ರಹಸ್ಯವಾದ ಆಧ್ಯಾತ್ಮಿಕ ಅಂಶಗಳನ್ನು ಹೊಗಳಿದನು. ಶಿಲಿಂಗ್ ಮತ್ತು ಜರ್ಮನ್ ಆದರ್ಶವಾದಿ ಸದಸ್ಯರು ಪ್ರಚಲಿತ ಕ್ರಿಸ್ತಧರ್ಮದಲ್ಲಿ ಅತೃಪ್ತರಾಗಿದ್ದರು. ಮತ್ತು ಅವರು ವೇದ ಮತ್ತು ಉಪನಿಷತ್‌ಗಳ ಬಗ್ಗೆ ಆಕರ್ಷಿತರಾದರು. ಇಂತಹದೇ ಮನಸ್ಸು ಹೊಂದಿರುವ ಜರ್ಮನ್ ಮತ್ತು ಯೂರೋಪಿನ ಬರಹಗಾರರಾದ ಥಾಮಸ್ ಕ್ಯಾರ್ಲೈಲ್, ವಿಕ್ಟರ್ ಕೌಸಿನ್, ಸ್ಯಾಮುಯೆಲ್ ಟೇಲರ್ ಕಾಲರಿಡ್ಜ್, ಮತ್ತು Mme. ಡಿ ಸ್ಟೇಲ್, ಮುಂತಾದವರು ಈ ಪಶ್ಚಿಮ ದೇಶಗಳಲ್ಲದ ಬರಹಗಳಲ್ಲಿ ಆಳವಾದ ಜ್ಞಾನವಿದೆ ಎಂದು ಸಾಧಿಸಿದರು.

ಅಮೆರಿಕ ಸಂಯುಕ್ತ ಸಂಸ್ಥಾನ‌ನಲ್ಲಿ, ಅನುಭವಾತೀತ ದಾರ್ಶನಿಕರು ಎಂಬ ಹೆಸರಿನ ಗುಂಪು ಶಿಲಿಂಗ್‌ನ ಜರ್ಮನ್ ಆದರ್ಶವಾದಿಗಳಿಂದ ಪ್ರಭಾವಿತರಾಗಿದ್ದರು. ಎಮರ್ಸನ್ ಮತ್ತು ಥೋರೋರಂತಹ ಈ ಅಮೆರಿಕನ್ನರು ಸಾಂಪ್ರದಾಯಿಕ ಕ್ರೈಸ್ತ ಪುರಾಣ ಕಥಾನಕಗಳಿಂದ ತೃಪ್ತರಾಗಿರಲಿಲ್ಲ ಆದ್ದರಿಂದ ಶಿಲಿಂಗ್ ನೀಡಿದ ಕ್ಯಾಂಟ್‌ನ ಅನುಭವಾತೀತ ಆದರ್ಶವಾದದ ನಿರೂಪಣೆಗಳನ್ನು ಮತ್ತು ಜೊತೆ ಜೊತೆಗೆ ಅವನ ಉಪನಿಷತ್‌ಗಳ ರಮ್ಯ ವಿಚಿತ್ರಾಕರ್ಷಕ ಅನುಭಾವಿ ಅಂಶಗಳ ಆಚರಣೆಗಳನ್ನು ಸಹ ಒಪ್ಪಿಕೊಂಡರು. ಈ ಬರಹಗಾರರ ಪ್ರಭಾವದ ಪರಿಣಾಮವಾಗಿ ಉಪನಿಷತ್‌ಗಳು ಪಶ್ಚಿಮದ ದೇಶಗಳಲ್ಲಿ ಹೆಸರುವಾಸಿಯಾದವು.

ವಿಖ್ಯಾತ ಪರಮಾಣು ಭೌತಶಾಸ್ತ್ರಜ್ಞನಾದ ಎರ್ವಿನ್ ಶ್ರೋಡಿಂಗರ್‌ರು ಹೇಳುವಂತೆ: ವಿವಿಧತೆಯು ಕೇವಲ ಕಣ್ಣಿಗೆ ಕಾಣುವಂತಹದು. ಇದು ಉಪನಿಷತ್‌ಗಳ ಸಿದ್ಧಾಂತ ಮತ್ತು ಇದು ಕೇವಲ ಉಪನಿಷತ್‌ಗಳದ್ದು ಮಾತ್ರವಲ್ಲ. ಪಶ್ಚಿಮದ ಬಲವಾದ ಪೂರ್ವಾಗ್ರಹವು ಅಡ್ಡ ಬರದಿದ್ದರೆ ಪರಮಾತ್ಮನೊಂದಿಗೆ ಸೇರುವಂತಹ ಇಂದ್ರಿಯಾತೀತ ಅನುಭವ ಸಾಮಾನ್ಯವಾಗಿ ಈ ಅಭಿಪ್ರಾಯದತ್ತ ಕೊಂಡೊಯ್ಯುವುದು.

ಏಕನಾಥ ಈಶ್ವರನ್‌ರವರು ಉಪನಿಷತ್‌ಗಳನ್ನು ಅನುವಾದಿಸುವಾಗ, "ಅವು ಹೀಗೆ ಬೇರೆ ಬೇರೆ ಸಮಯಗಳಲ್ಲಿ ಬೇರೆ ಬೇರೆ ವೀಕ್ಷಕರು ಅಂತಹ ಪ್ರಜ್ಞೆಯ ಎತ್ತರವಾದ ಶಿಖರಗಳನ್ನು, ತಕ್ಷಣ ತೆಗೆದು ಅತಿಕಡಿಮೆ ವಿವರಣೆಯೊಂದಿಗೆ ರವಾನಿಸಿದ ತುಣುಕು ಛಾಯಾಚಿತ್ರಗಳಾಗಿವೆ" ಎಂದು ಹೇಳಿದ್ದಾರೆ.

ಉಪನಿಷತ್‌ಗಳ ಅನುಭವಾತೀತ ಆದರ್ಶದ ಆಧುನಿಕ ವಿಮರ್ಷೆ

ಉಪನಿಷತ್ ದಾರ್ಶನಿಕರು ಬದಲಾವಣೆಯನ್ನು ಕೇವಲ ಮಾಯೆಯೆಂದು ಭಾವಿಸಿದರು, ಏಕೆಂದರೆ ಅದಕ್ಕೆ ಶಾಶ್ವತ ಮತ್ತು ಸದೃಶ ವಾಸ್ತವತೆಯೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವರು ವಿವಿಧತೆಯನ್ನು ಪೂರ್ಣವಾಗಿ ನಿರಾಕರಿಸಲು ಮುಂದಾದರು. ಡೇವಿಡ್ ಕಾಲುಪಹಾನರ ಪ್ರಕಾರ, "ವಸ್ತುಗಳಲ್ಲಿ ಒಂದು ಅವಶ್ಯಕ ಐಕ್ಯತೆಗಾಗಿ ನಡೆಸಿದ ಅನ್ವೇಷಣೆಗೆ ಯಶಸ್ಸಿನ ಕಿರೀಟ ದೊರೆತರೂ, ಅತೀಂದ್ರಿಯ ಆದರ್ಶವಾದದಿಂದ ತತ್ವಶಾಸ್ತ್ರವು ಒಂದು ಭಾರಿ ಹಿನ್ನಡೆಯನ್ನು ಕಂಡಿದೆ." ಪಾಲ್ ಡ್ಯೂಸನ್‌ರು ಈ ಐಕ್ಯತೆಯ ಬಗ್ಗೆ ಹೀಗೆ ಬರೆದಿದ್ದಾರೆ: "ಈ ಐಕ್ಯತೆಯು ಎಲ್ಲಾ ವೈವಿದ್ಯತೆಗಳನ್ನು ದೂರವಿಟ್ಟಿದೆ, ಮತ್ತು ಆದ್ದರಿಂದ ಆಕಾಶದಲ್ಲಿ ಎಲ್ಲಾ ಅಂತರ, ಸಮಯದಲ್ಲಿನ ಎಲ್ಲಾ ಕಾಲಾನುಕ್ರಮತೆ, ಕಾರಣ ಮತ್ತು ಪರಿಣಾಮಗಳ ನಡುವಿನ ಎಲ್ಲಾ ಅಂತರ ಸಂಬಂಧ, ಮತ್ತು ವಿಷಯ ಮತ್ತು ವಸ್ತುವಿನ ನಡುವಿನ ಎಲ್ಲಾ ವೈರುಧ್ಯಗಳನ್ನು ಒಟ್ಟಿಗಿಂಟಂತಾಗಿದೆ." ಕಲುಪಹನಾರ ಪ್ರಕಾರ, "ಯಥಾರ್ಥತೆಯನ್ನು ಕಾಲ, ಆಕಾಶ, ಬದಲಾವಣೆಯಿಂದ ಹೊರತಾಗಿರುವುದರಿಂದ ಇದೊಂದು ಆಘಾತ. ಬದಲಾವಣೆ ಕೇವಲ ಪದಗಳ ಸಮೂಹ, ಏನೂ ಅಲ್ಲದ ಬರಿಯ ಹೆಸರು, ಮಾತಿನ ಆಡಂಬರವು ಹೆಸರನ್ನು ವಿಕಾರಗೊಳಿಸಿದೆ (ವಾಚಾರಂಭನಮ್ ವಿಕಾರೊ ನಾಮಧೇಯಮ್ ). ಇದಾದ ನಂತರ ಆಧ್ಯಾತ್ಮಕ ಊಹೆಯೇ ಮೇಲುಗೈಯನ್ನು ಪಡೆಯಿತು ಮತ್ತು ಅನುಭವಕ್ಕೆ ಬಂದ ವಸ್ತುಗಳಿಗೆ ಒಂದು ತರ್ಕಬದ್ಧ ವಿವರಣೆ ನೀಡುವ ಗಂಭೀರವಾದ ಪ್ರಯತ್ನ ಉಪನಿಷತ್‌ಗಳಲ್ಲಿ ಇಲ್ಲವೇ ಇಲ್ಲ."

ದಲಿತ ಹೋರಾಟಗಾರ ಮತ್ತು ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದ್ದ ಭೀಮರಾವ್ ಅಂಬೇಡ್ಕರ್‌ ಅವರು ಒತ್ತು ನೀಡಿ ಹೇಳಿದ್ದೇನೆಂದರೆ, "ಉಪನಿಷತ್‌ಗಳ ತತ್ವಶಾಸ್ತ್ರವು ತೀರ ಪರಿಣಾಮಕಾರಿಯಲ್ಲದ, ಕಾಲಕ್ಕೆ ಹೊಂದಿಕೊಳ್ಳಲಾರದ, ಊಹಾಪೋಹಗಳಿಂದ ತುಂಬಿದ, ಹಿಂದುಗಳ ನೈತಿಕ ಮತ್ತು ಸಾಮಾಜಿಕ ವ್ಯವಸ್ಥೆಯ ಮೇಲೆ ಯಾವ ಪರಿಣಾಮವನ್ನೂ ಬೀರಲಾರದಂತಹುದಾಗಿದೆ."