Jootoor Designs

Arrow Up

Arrow Down

Posted By: ರಶ್ಮಿ ಬಾಸುತ್ಕರ್

ವಿಚಿತ್ರವಾದರು ಸತ್ಯ

 • ಒಬ್ಬ ವ್ಯಕ್ತಿ ಅವನು ಎಷ್ಟೇ ಆತ್ಮೀಯನಾದರೂ ಅವನ ಬಳಿ ನಮ್ಮ ಒಳ ಹೊರಗುಟ್ಟುಗಳೆಲ್ಲವನ್ನೂ (ಇತಿ ಮಿತಿಗಳನ್ನು) ಬಿಚ್ಚಿಡಕೂಡದು. ಕಾರಣ ಅದೇ ಆತ್ಮೀಯತೆಯೆಂಬುದು ಮುಂದೊಂದು ದಿನ ಆತ್ಮವಂಚನೆಗೆ ಸುಲುಭ ಮಾರ್ಗವಾಗಬಹುದು.
 • ಬಡತನ ಸಿರಿತನವೆನ್ನುವುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆ ನಾಣ್ಯವನ್ನು ಮೇಲೆಸೆದು ಕಾಯುವಂತೆ ನಮ್ಮ ಬದುಕು ಸಾಗುತ್ತಿರುತ್ತದೆ. ಮುಂದಿನ ಹಂತದಲ್ಲಿ ಅಲ್ಲಿ ಯಾವ ರೀತಿಯ ಬದಲಾವಣೆಯಾದರೂ ಆಗಬಹುದು ಆದರೆ ಅದನ್ನು ಇದೇ ಅಂಥ ಹೇಳಲಾಗುವುದಿಲ್ಲ.
 • ನೀತಿಗೆಟ್ಟವನಿಗೆ ನಿಯತ್ತಿನ ಅರ್ಥ ಗೊತ್ತಿರುವುದಿಲ್ಲ. ಗೊತ್ತಿದ್ದರೂ ಅದು ಅವನಿಗೆ ಅರ್ಥವಾಗುವುದಿಲ್ಲ. ಅರ್ಥವಾದರೂ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಸಾಧ್ಯವಾದರೂ ಜನ ಅವನನ್ನು ಸುಲಭವಾಗಿ ನಂಬುವುದಿಲ್ಲ.
 • ಹುಟ್ಟು ಉಲ್ಲಾಸದಿಂದ ಬರುತ್ತದೆ. ಸಾವು ಅತಿ ಘೋರವಾಗಿ ಕಾಡುತ್ತದೆ. ಆದರೆ ಇವೆರಡರ ಮಧ್ಯೆ ಸುಖ ದುಃಖಗಳೆಂಬುವು ಸದಾ ಕಿತ್ತಾಟದಲ್ಲಿ ತೊಡಗಿ ದಾಯಾದಿಗಳಂತೆ ಸೆಣೆಸಾಡುತ್ತ ಮನುಷ್ಯನ ಮೇಲೆ ಅಧಿಕಾರ ಸಾಧಿಸುತ್ತವೆ.
 • "ಕಡಲಲ್ಲಿ ಸಾವಿರ ಮುತ್ತುಗಳು ಸಿಗಬಹುದು ಆದರೆ ಜೀವನದಲ್ಲಿ ಸಿಗುವುದು ಎರಡೆ ಮುತ್ತುಗಳು ಅದುವೆ ಪ್ರೀತಿ ಮತ್ತು ಸ್ನೇಹ ಇದರಲ್ಲಿ ಯಾವುದನ್ನೆ ಕಳಕೊಂಡರು ಮನಸಿಗೆ ನೊವಾಗುತ್ತೆ ಅಲ್ವ"
 • ಕೆಲವರಿಗೆ ನಾಲಿಗೆಯು ಉದ್ದವಾಗಿದ್ದರೂ ಮಾತುಗಾರಿಕೆಯಲ್ಲಿ ಎಲ್ಲರ ನಾಲಿಗೆಯಂತೆ ಸಮವೆನಿಸುತ್ತದೆ. ಆದ್ದರಿಂದ ನಾಲಿಗೆಯ ಉದ್ದವನ್ನು ನೋಡಿ ಮಾತನ್ನು ಅಳೆಯುವುದಲ್ಲ ಮಾತಿನ ಇತಿ ಮಿತಿಯನ್ನು ನೋಡಿ ತೀವ್ರತೆಯನ್ನು ಅಳೆಯಬೇಕು.
 • ಅಲ್ಪರ ಜೊತೆ ವಾಗ್ವಾದಕ್ಕಿಳಿದು ಸೋಲೊಪ್ಪಿಕೊಳ್ಳುವುದಕ್ಕಿಂತ ಅವರ ಅಲ್ಪ ಗುಣಗಳನ್ನೇ ಹೊಗಳಿ ಗೆದ್ದು ಬರುವುದೇ ಲೇಸು.
 • ಪರರ ಉಪಕಾರಕ್ಕೆ ಉಳ್ಳವರೇ ಹಿಂದೆ ತುಳಿಯುವಾಗ. ಬೀಸುವ ಗಾಳಿ, ಸುರಿಯುವ ಮಳೆ, ಬೆಳಕು ಮೂಡಿಸುವ ಸೂರ್ಯನ್ಯಾಕೆ ಉಪಕಾರ ಮಾಡಬೇಕು ?
 • ಆ ಸಾವೇ ಬಂದು ನನ್ನ ಎಳೆದೊಯ್ದರೂ ಚಿಂತೆಯಿಲ್ಲ,, ಈ ಸ್ವಾರ್ಥ ಮನಸ್ಸುಗಳ ನಡುವೆ ಬದುಕಿಗಾಗಿ ಹೋರಾಟ ನಡೆಸಲಾರೆ.
 • ಲೋಕವೆಲ್ಲಾ ಸದ್ದು ಗದ್ದಲಗಳಿಂದ ಸಂಭ್ರಮಪಟ್ಟು ಕುಣಿದಾಡಿದರೂ ನನ್ನ ಮನಸ್ಸು ಮಾತ್ರ ಮೌನವನ್ನೇ ಪ್ರೀತಿಸುತ್ತದೆ.
 • ಪ್ರೀತಿಸುವುದು ಕರ್ತವ್ಯ ಪ್ರೀತಿಸಲ್ಪಡುವುದು ವಿಜಯ ನೀವು ಪ್ರೀತಿಸುವವರ ಜೊತೆಗಿರುವುದು ಸಾಧನೆ. ನಿಮ್ಮನ್ನು ಪ್ರೀತಿಸುವವರ ಜೊತೆಗಿರುವುದು ಜೀವನ -ಅನಾಮಿಕ
 • ಸಾವಿರ ಕಾಗೆಗಳು ಕೂಗಾಡಿದರೇನು ಒಂದು ಕೋಗಿಲೆಯ ಧ್ವನಿಯನ್ನು ಸರಿದೂಗಿಸಲಾಗದು. ಸಾವಿರ ಜನ ಕೊಂಕಾಡಿದರೇನು ಒಂದು ಒಳ್ಳೆಯ ವ್ಯಕ್ತಿತ್ವವನ್ನು ವಿರೂಪಗೊಳಿಸಲಾಗದು.
 • ಬೇಡವೆಂದರೂ ಮತ್ತೆ ಮತ್ತೆ ಚುಚ್ಚಿ ಕಾಡಿಸಿ, ಪೀಡಿಸಿ, ನೋಯಿಸುವುದು ಪ್ರೀತಿಯೆಂಬ ಕಹಿ ನೆನಪುಗಳು ಮಾತ್ರ.
 • ನನಗೆ ಬೆಟ್ಟದಷ್ಟು ಕಷ್ಟಗಳು ಬಂದು ಎಲ್ಲವನ್ನೂ ಕಳೆದುಕೊಂಡರೂ ಸರಿ ನಿನ್ನ ನೆನಪುಗಳಿಗೆ ಸ್ವಲ್ಪವೂ ದಕ್ಕೆಯಾಗದಂತೆ ನನ್ನ ಹೃದಯದ ಕಪಾಟನಲ್ಲಿ ಭದ್ರಪಡಿಸಿ ಮತ್ತೆ ಬದುಕನ್ನು ಗೆದ್ದು ತೋರಿಸುತ್ತೇನೆ.
 • ಮನುಷ್ಯನಿಗೆ ಅತಿ ಹೆಚ್ಚು ಖುಷಿಯಾದಲ್ಲಿ ಅವನು ಪಕ್ಷಿಗಳ ಜೊತೆ, ಪ್ರಾಣಿಗಳ ಜೊತೆ, ಬೆಟ್ಟ ಗುಡ್ಡಗಳ ಜೊತೆಯೂ ತನ್ನ ಸಂತಸವನ್ನು ಹಂಚಿಕೊಳ್ಳಲು ತವಕಿಸುತ್ತಾನೆ.
 • ಒಮ್ಮೊಮ್ಮೆ ಅತಿ ಗಾಡವಾದ ಪ್ರೀತಿಯು ಸಹ ಬರ ಬರುತ್ತ ಬಣ್ಣ ಕಳೆದುಕೊಂಡು ಸ್ವಾರ್ಥಕ್ಕೆ ಗುರಿಯಾಗಿ, ಕಲಹಕ್ಕೆ ಕಿಡಿಯಾಗಿ, ದ್ವೇಶಕ್ಕೆ ಅಡಿಯಾಗಿ, ಆ ಪ್ರೀತಿಯೇ ಅಸೂಯೆಯೆಂಬ ಕತ್ತಿಯಂತಾಗಿ ಅವನನ್ನಿವಳು ಇವನನ್ನವಳು ಹಿಂಬಾಲಿಸಿ ಕಾಡಿಸಿ ಕೊನೆಗೆ ಅಲ್ಲೊಂದು ಅಂತ್ಯವನ್ನಾಗಿಸುವಂತೆ ಮಾಡಿಬಿಡುತ್ತದೆ.
 • ಮನುಷ್ಯನಿಗೆ ಸಾವೆಂಬ ನೋವಿಗಿಂತ ಅತಿಹೆಚ್ಚಾಗಿ ಹುಟ್ಟೆಂಬ ಸಂತಸವೇ ಪರಿಣಮಿಸುತ್ತದೆ. ಆದರೆ ಅನಾದಿಕಾಲದಿಂದಲೂ ಈ ಸಮಾಜದಲ್ಲಿ ಹೆಣ್ಣು ಸಂತತಿಗಿಂತ ಗಂಡು ಸಂತತಿಗೆ ಹೆಚ್ಚು ಪ್ರಾಧಾನ್ಯತೆಯನ್ನು ಕೊಡುತ್ತಾರೆ ಎಂದರೆ ತಪ್ಪಾಗಲಾರದು.
 • ಸೃಷ್ಟಿಯ ಪ್ರತಿ ಲಯದಲ್ಲೂ ಸಹ ನಮಗೆ ಕಾಣದಂತ ಅದ್ಭುತ ಶಕ್ತಿಯೊಂದು ಅಡಗಿರುತ್ತದೆ. ಇದನ್ನು ಕೆಲವರು ದೇವರು ಎಂದು ಪೂಜಿಸಿದರೆ, ಇನ್ನೂ ಕೆಲವರು ದೆವ್ವವೆಂದು ವಾದಿಸುತ್ತಾರೆ.
 • ಹಿಂದೊಂಮ್ಮೆ ಯಾರೋ ಕಟ್ಟಿಹೋದ ಉರುಳಿಗೆ ಇಂದು ಮತ್ಯಾರೋ ಸಿಲುಕಿ ಅತ್ತ ಬದುಕಲಾಗದೆ ಇತ್ತ ಸಾಯಲಾಗದೆ ಒದ್ದಾಡುವಂತ ಆಯೋಮಯದ ಸ್ಥಿತಿ ಈಗಿನ ಕಾವೇರಿ ಕೊಳ್ಳದ ಪರಿಸ್ಥಿತಿ.
 • ನಾಳೆ ನೆನ್ನೆಗಳೆಂಬುವು ಸದಾ ಕಳೆದುಹೋಗುತ್ತಲೇ ಇರುತ್ತವೆ ಆದರೆ ನಾವು ಚಿಂತನ ಶೀಲತೆಗೆ ಒಳಪಡಿಸಬೇಕಿರುವುದು ಪ್ರಸ್ತುತ ದಿನದ ಶ್ರಮದ ಬಗ್ಗೆ ಮಾತ್ರ.
 • ಒಂದು ಕುಟುಂಬಕ್ಕೆ ಗಂಡ, ಹೆಂಡತಿ, ಮಕ್ಕಳು ಎಂಬುದು ಎಷ್ಟು ಮುಖ್ಯವೋ. ಅದೇ ರೀತಿ ಒಂದು ಸಮಾಜಕ್ಕೆ ನ್ಯಾಯ, ನೀತಿ, ಆದರ್ಶವೆಂಬುದು ಅಷ್ಟೇ ಮುಖ್ಯ.
 • ಧರ್ಮ ಮತ್ತು ಅಧರ್ಮದ ಯುದ್ದದಲ್ಲಿ ಮೊದಲಿಗೆ ಅಧರ್ಮಕ್ಕೆ ಜಯ ಕಂಡರೂ ಕೊನೆಯಲ್ಲಿ ಧರ್ಮವೇ ಗೆಲ್ಲುವುದು.
 • ಪ್ರಸ್ತುತಕ್ಕೆ ಹೇಳುವುದಾದರೆ ನಮ್ಮ ಸಮಾಜದಲ್ಲಿ ಮಮತೆ ಪ್ರೀತಿಗಿಂತ, ಆಸ್ತಿ ಹಣದ ಮೋಹವೇ ಹೆಚ್ಚು ?.
 • ಪ್ರಪಂಚದಲ್ಲಿನ ಅತಿಲೋಕ ಸುಂದರಿಗಿಂತ ತನ್ನ ಹಿತವನ್ನು ಬಯಸಿ ಬರುವ ಅತಿ ಸಾಮಾನ್ಯಳೇ ಲೇಸಲ್ಲವೆ ?
 • ಮಾಡಿದ ಪಾಪ ಯಾವ ಬಗೆಯೇ ಆಗಿದ್ದರೂ ಅದಕ್ಕೊಂದಷ್ಟು ಕಾಲಮಿತಿಯಿರುತ್ತದೆ ಅದನ್ನು ದಾಟಿ ಆದ ಮೇಲೆ ಪರಮಾತ್ಮನೂ ಅವನನ್ನು ರಕ್ಷಿಸಲಾರ.
 • ಜೀವನದಲ್ಲಿ ಬೇಸತ್ತು, ಜೀವದ ಮೇಲೆಯೇ ವಿರುಕ್ತಿ ಹೊಂದಿ ಸಾಯಬೇಕೆಂಬ ನಿರ್ಣಯದೊಂದಿಗೆ ಬೆಟ್ಟದ ತುದಿಗೆ ತಲುಪಿ ಇನ್ನೇನು ಬೀಳಬೇಕು ಎನ್ನುವಂತ ಸಮಯ. ಬೇಟೆಗಾರ ಒಡೆತಕ್ಕೆ ರೆಕ್ಕೆ ತುಂಡರಿಸಿಕೊಂಡ ಪಕ್ಷಿಯೊಂದು ರಕ್ತ ಸುರಿಸಿಕೊಂಡು ಶ್ರಮಪಟ್ಟು ಅವನ ಮುಂದೆ ಹಾದು ಹೋಗುತ್ತದೆ. ಆ ಕ್ಷಣ ಅವನ ಮನದಲ್ಲಿ ಏನಾಯಿತೋ ಏನೋ ಮರಳಿ ತನ್ನೂರಿಗೆ ದಾರಿಯಿಡಿಯುತ್ತಾನೆ.
 • ನಕ್ಷತ್ರಗಳು ಹಗಲಿನಲ್ಲಿ ಹೊಳೆದರೂ ಸಹ ಅದರ ಪ್ರತಿಫಲನ ಯಾರಿಗೂ ಗೋಚರಿಸುವುದಿಲ್ಲ. ಅಂತೆಯೇ ಸತ್ಯವೆನ್ನುವುದು ಸಹ ಹಗಲಿನಲ್ಲಿ ಪ್ರತಿಫಲಿಸುವ ನಕ್ಷತ್ರದಂತೆ ಅದರ ನಿಜ ರೂಪವನ್ನು ಅರಿಯಲು ಒಂದಷ್ಟು ಸಮಯ ಕಾದು ಕಡುಕತ್ತಲಾವರಿಸಿದ ಮೇಲೆಯೇ ಗೊತ್ತಾಗೋದು.
 • ಕೆಲವು ಘಟನೆಗಳು ಒಬ್ಬ ಮನುಷ್ಯನನ್ನು ಉಚ್ಚ ಸ್ಥಾನಕ್ಕೆ ಕೊಂಡೊಯ್ಯುತ್ತವೆ. ಅವನ ಸ್ಥಾನ ಮಾನ ಏನೇ ಆದರೂ ನೋಡುವ ಕಣ್ಣು ಸಂಕುಚಿತ ಮನೋಭಾವವಿಲ್ಲದೆ ವಿಶಾಲವಾಗಿರಬೇಕು ಅಂತವನಿಗೆ ಲೋಕವೆಲ್ಲಾ ನೆಂಟರಿದ್ದಂತೆ ಎನ್ನಬಹುದು.
 • ಕೆಲವರು ಎಲ್ಲರಿಗೂ ಧೈರ್ಯ ತುಂಬುತ್ತಾರೆ ಕಷ್ಟದಲ್ಲಿದ್ದವರಿಗೆ ಸಾಂತ್ವಾನಿಸುತ್ತಾರೆ ನೊಂದವರ ಕಣ್ಣೀರು ಒರೆಸುತ್ತಾರೆ ಆದರೆ ಈ ಮೇಲಿನ ತೊಂದರೆಗಳು ಅವರನ್ನು ಕಾಡಿದಾಗ ಆ ಸಮಯದಲ್ಲಿ ಏನೂ ಅರ್ಥವಾಗದಂತೆ ಸುಮ್ಮನಿರುತ್ತಾರೆ.
 • ತನ್ನನ್ನು ತಾನು ದೈವವೆಂದು ತೀರ್ಮಾನಿಸಿಕೊಂಡು ವಿಡಂಬಣೆಗಳನ್ನು ಕಟ್ಟಿ ಇತರರನ್ನು ಸೆಳೆದು ವಂಚಿಸುವ ಮಂದಿಗೆ ದೈವದ ಬಗ್ಗೆ ಕಿಂಚಿತ್ತೂ ಭಯವಾಗಲಿ ಭಕ್ತಿಯಾಗಲಿ ಇರುವುದಿಲ್ಲ. ದೈವತ್ವವನ್ನೇ ಬಂಡವಾಳವನ್ನಾಗಿಸಿಕೊಂಡು ಅಂಕುಡೊಂಕಿನ ಹಾದಿಯಲ್ಲಿ ಸ್ವಲ್ಪಮಟ್ಟಿಗೆ ಮೆರೆದರೂ ವಿವಾದಗಳು ಅವರನ್ನು ಸುಮ್ಮನೆ ಬಿಡುವುದಿಲ್ಲ.
 • ಒಂದರ್ಥದಲ್ಲಿ ಹೇಳುವುದಾದರೆ ಎಲ್ಲರಿಗೂ ಸಾವಿವ ಬಗ್ಗೆ ಅಳುಕಿರುತ್ತದೆ. ಹಾಗಂತ ಯಾರೂ ಸಾವಿನ ಕ್ಷಣಗಳನ್ನು ನಿರೀಕ್ಷಿಸುವುದಿಲ್ಲ. ತಾವು ಬದುಕಿರುವ ಕಡೆಯ ಕ್ಷಣದವರೆಗೂ ಬದುಕಿಗಾಗಿ ಹೋರಾಟ ನಡೆಸುತ್ತಲೇ ಇರುತ್ತಾನೆ. ಈ ಸಾವು ಮತ್ತು ಬದುಕಿನ ಹೋರಾಟ ಹಗಲು ರಾತ್ರಿಯ ಸೂತ್ರದಂತೆ ಗೋಚರಿಸುತ್ತದೆ.
 • ನಮ್ಮ ನಡುವೆಯೇ ಕೊಲೆ, ಸುಲುಗೆ, ಅತ್ಯಾಚಾರ, ಅನಾಚಾರಗಳು ರಾಜಾರೋಷವಾಗಿ ತಿರುಗಾಡುತ್ತಿದ್ದರೂ ಅದನ್ನು ಗುರ್ತಿಸಿ ತಡೆಯುವಲ್ಲಿ ಜನ ಹಿಂದೇಟು ಆಕುತ್ತಾರೆ. ಕಾರಣ ಅದು ನಮಗೇಕೆಂಬ ಅಸಡ್ಡೆಯಿಂದಲ್ಲ ಜೇನು ಗೂಡಿಗೆ ಕಲ್ಲೆಸೆದು ತೊಂದರೆ ಅನುಭವಿಸುವುದಕ್ಕಿಂತ ದೂರವಿರುವುದೇ ಕ್ಷೇಮವೆಂಬ ಭಾವನೆಯಿಂದ. ಸಧ್ಯದ ಸ್ಥಿತಿ ಈ ಮಟ್ಟಿಗೆ ಹಾಳಾಗಿ ಹೋಗಿದೆ ಎಂದರೆ ತಪ್ಪಾಗಲಾರದು.
 • ಈ ಜಗತ್ತಿನಲ್ಲಿ ಎಲ್ಲವನ್ನೂ ದಕ್ಕಿಸಿಕೊಳ್ಳಬಹುದು ಸತ್ತ ಬಳಿಕ ಬೇರ್ಪಡುವ ಉಸಿರೊಂದನ್ನು ಬಿಟ್ಟು.
 • ಮನುಷ್ಯ ನೆಮ್ಮದಿಯಿಂದ ಬದುಕಲು ಸಣ್ಣ ಕುರಿ ಕಾಯುವ ಕೆಲಸವಾದರೂ ಸಾಕು ಆದರೆ ಅವನ ಸುತ್ತ ಮುತ್ತಲಿನ ಸೆಳೆತಗಳು, ಆಸೆಗಳು, ಆಪೇಕ್ಷೆಗಳು ಅವನ ಬೆನ್ನು ಹತ್ತದಿದ್ದಲ್ಲಿ ಮಾತ್ರ ಅದು ಸಾಧ್ಯವಾಗಬಹುದು.
 • ನಮ್ಮ ಮನಸ್ಸು ಕೆಲ ಸಮಯ ನಿಚ್ಚಳವಾಗಿರುತ್ತದೆ, ಮತ್ತೊಮ್ಮೆ ರೋಮಾಂಚನಗೊಳ್ಳುತ್ತದೆ. ಮಗದೊಮ್ಮೆ ಘನ ಘೋರವಾಗಿ ಉರಿಯಲಾರಂಭಿಸುತ್ತದೆ ನಂತರ ಪಶ್ಚಾತ್ತಾಪದಲ್ಲಿ ಸಿಲುಕಿ ಒದ್ದಾಡುತ್ತದೆ. ಆದ್ದರಿಂದಲೇ ಮನಸ್ಸನ್ನು ಚಂಚಲೆಗೆ ಹೋಲಿಸಬಹುದು ಎನ್ನುತ್ತಾರೆ.
 • ಒಬ್ಬ ಮನುಷ್ಯನನ್ನು ಹುಚ್ಚನನ್ನಾಗಿಸಲು ಹತ್ತಲವು ಕೊಂಕು ಮಾತುಗಳು ಸಾಕು. ಆದರೆ ಅದೇ ಮನುಷ್ಯನನ್ನು ಮನುಷ್ಯನನ್ನಾಗಿ ಒಪ್ಪಿಕೊಳ್ಳಲು ಕುಲ, ಧರ್ಮ, ಮತಗಳ ಎಲ್ಲೆಗಳನ್ನೂ ಮೀರಿ ನಡೆಯಬೇಕಾಗುತ್ತದೆ.
 • ಹೊರಗಿನ ಸೌಂದರ್ಯಕ್ಕಿಂತ ಒಳ ಮೂಡುವ ಸಂವೇಧನೆಯನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಲೆತ್ನಿಸಬೇಕು. ಬಾಹ್ಯ ಸೌಂದರ್ಯ ಕೇವಲ ಆಕರ್ಷಣೆಯಷ್ಟೆ ಅದು ಕ್ಷಣಿಕ ಮಾತ್ರದಲ್ಲಿ ತನ್ನ ಇತಿ ಮಿತಿಯನ್ನು ಬದಲಿಸಬಹುದು ಆದರೆ ತಮಗಾಗಿ ಅಪಅಪಿಸುವಂತ ಒಳ ಸಂವೇಧನೆಯು ಅಚಲವಾಗಿರುತ್ತದೆ.
 • ಕಥೆಗೊಂದು ಕಲ್ಪನೆ ಆತ್ಯಗತ್ಯ ಅದರಂತೆ ಜೀವನಕ್ಕೊಂದು ಗುರಿ ಆತ್ಯಗತ್ಯ.
 • ಬೆಳಕು ಮೂಡಿಸುವುದಕ್ಕೆ ನಮ್ಮ ಬಳಿ ಹಲವಾರು ಸಲಕರಣೆಗಳಿದ್ದರೂ ಅವು ಸೂರ್ಯನಷ್ಟು ಶಕ್ತಿಯುತವಲ್ಲ. ಪ್ರತಿ ನಿತ್ಯ ತಂಪು ಕೋಣೆಗಳಲ್ಲಿ ಕುಳಿತು ಕಳೆದರೂ ಅದು ಬೆಳದಿಂಗಳ ರಾತ್ರಿಯಷ್ಟು ಹಿತವೆನಿಸುವುದಿಲ್ಲ. ಗೋಚರಕ್ಕೂ ಅಗೋಚರಕ್ಕೂ ಇರುವ ವ್ಯತ್ಯಾಸವನ್ನು ಈ ಮಾನದಂಡಗಳ ಮೂಲಕ ಅಳೆಯಬಹುದೇ ?
 • "ಮಾತು ಬಲ್ಲವನಿಗೆ ಜಗಳವಿಲ್ಲ"ವೆಂಬ ಗಾದೆಮಾತಿದೆ ಈ ಮಾತನ್ನು ಯಾರು ಯಾರಿಗೆ ಹೇಳಿದರೆಂಬ ಸಂದೇಹ ಮೂಡದಿರದು ಕಾರಣ ಇಷ್ಟೆ ಇಂದಿನ ರಾಜಕಾರಣಿಗಳಿಗೆ ಈ ಮಾತೇ ವರದಾನವಾಗಿ ಮಾರ್ಪಟ್ಟಿದೆ ಎಂದರೆ ತಪ್ಪಾಗಲಾರದು.
 • ಓ ದೇವರೆ ನನಗೆ ಒಂದು ಹೊತ್ತಿನ ಊಟವನ್ನು ಕರುಣಿಸು - ಅಸಹಾಯಕ
  ಓ ದೇವರೆ ನನಗೆ ಸಖಲ ಸೌಭಾಗ್ಯವನ್ನೆಲ್ಲಾ ದಯಪಾಲಿಸು - ಧನಿಕ
  ಓ ದೇವರೆ ಇಂದಿನ ಕಳ್ಳತನವನ್ನು ಕಷ್ಟವಾಗಿಸದೆ ಸುಲಭವಾಗಿಸು - ಕಳ್ಳ
  ಓ ದೇವರೆ ಅವನ ಮಣಿಸಿ ಈ ರಾಜ್ಯವನ್ನಾಳುವ ಶಕ್ತಿಯನ್ನು ನನಗೆ ಮಾತ್ರ ಕೊಡು - ರಾಜಕಾರಣಿ
  ಇಲ್ಲಿ ವಿಧ ವಿಧ ಬೇಡಿಕೆಗಳು ಬೇರೆ ಬೇರೆಯಂತಿದ್ದರೂ ಭಕ್ತಿಯ ಸಂವೇದನ ರೂಪ ಒಂದೇ ರೀತಿಯಾಗಿದೆ. ಆದ್ದರಿಂದ ಇಲ್ಲಿನ ಅಪೇಕ್ಷೆ ಮತ್ತು ಬೇಡಿಕೆಗಳಿಗನುಗುಣವಾಗಿ ಫಲ ನೀಡುವುದು ಮಾತ್ರ ಆ ದೇವನಿಗೆ ಬಿಟ್ಟದ್ದು ಅಲ್ಲವೆ ?
 • ಭಾವನೆ ವ್ಯಕ್ತಪಡಿಸುವುದಕ್ಕೆ ಇಂಥದ್ದೇ ಭಾಷೆಯೆಂಬ ಹಂಗಿಲ್ಲ ಸಾಧನೆಗೆ ಎಂದಿಗೂ ರೂಪ ಲಾಮಣ್ಯದ ಅಂತರವಿಲ್ಲ ನೆಮ್ಮದಿ ಪಡೆಯಲು ಧನವಂತನೇ ಆಗಬೇಕೆಂಬ ನಿಯಮವಿಲ್ಲ ಕುಷಿ ಹಂಚಿಕೊಳ್ಳಲು ಮನುಷ್ಯರೇ ಆಗಬೇಕೆಂಬ ಘೋಷಣೆಯಿಲ್ಲ ಒಟ್ಟಿನಲ್ಲಿ ಈ ಮಾತನ್ನು ಒಪ್ಪಿಕೊಳ್ಳಲೇ ಬೇಕೆಂಬ ಆಜ್ಞೆಯಂತೂ ಇಲ್ಲವೇ ಇಲ್ಲ,,,,,,
 • ಒಬ್ಬ ಸಾಮಾನ್ಯ ವ್ಯಕ್ತಿ (ಅನಕ್ಷರಸ್ತ) ತನ್ನ ಕುಟುಂಬ, ಮನೆ, ತೋಟ, ಹೊಲ ಗದ್ದೆಗಷ್ಟೆ ತನ್ನ ಜೀವನವನ್ನು ಮೊಟಕುಗೊಳಿಸಿ ಲೋಕದ ಆಗುಹೋಗುಗಳ ಬಗೆಗಿನ ಆಸಕ್ತಿಯನ್ನಾಗಲಿ ಚಿಂತೆಯನ್ನಾಗಲಿ ಅವನು ಮಾಡಲಾರ. ಕಾರಣ ಅವನ ಸುತ್ತ ಮುತ್ತಲಿನ ವಾತವರಣವೇ ಅವನಿಗೆ ಪ್ರಪಂಚದಷ್ಟು ವಿಶಾಲವಾಗಿ ಕಾಣುತ್ತದೆ.
 • ನಮ್ಮೆದುರಲ್ಲಿ ನಡೆದಾಡುವ ಮತ್ತು ನಮ್ಮ ಕಣ್ಣಿಗೆ ಕಾಣುವಂತ ಮತ್ತೊಂದು ದೈವಸ್ವರೂಪಿಯೆಂದರೆ ಅದು ತಾಯಿಯೆಂದೇ ಹೇಳಬೇಕು. ಆದರೆ ಕೆಲವರು ಮುಕ್ತಿಗಾಗಿ ಕಣ್ಣಿಗೆ ಕಾಣದಂತ ದೇವರುಗಳಿಗೆ ಲಕ್ಷ ಲಕ್ಷ ಹಣವನ್ನು ವ್ಯಯಿಸುತ್ತಾರೆ. ಸಿಕ್ಕ ಸಿಕ್ಕ ದೇವರುಗಳಿಗೆ ನಮಸ್ಕರಿಸುತ್ತಾರೆ. ಅದೇ ದೈವಸ್ವರೂಪಿ ತಾಯಿಯನ್ನು ರೋಗದ ನೆಪವೊಡ್ಡಿ ಅಥಾವ ಮತ್ಯಾವುದೋ ಕಾರಣ ಸೃಷ್ಟಿಸಿ ಬೀದಿಗಳಲ್ಲೋ ಅಥವಾ ಅನಾಥಶ್ರಮಗಳಲ್ಲೋ ಬಿಟ್ಟು ಕೈತೊಳೆದಿಕೊಳ್ಳುವುದು ಯಾವ ನ್ಯಾಯ ? ಇದನ್ನು ಪರಮಾತ್ಮನೂ ಸಹ ಮೆಚ್ಚುವುದಿಲ್ಲ.
 • ಪ್ರಜೆಗಳನ್ನು ಪರಿಪಾಲಿಸುವ ನಾಯಕನಿಗೆ ಪ್ರಜೆಗಳ ಅಂತರಂಗದ ಬಗ್ಗೆ ಅರಿವಿರಬೇಕು ಮುಂದೆ ನಡೆಯಬಹುದಾದ ಹಿಂದೆ ನಡೆದುಹೋದ ಸರ್ವಕಾಲಿಕ ಘಟನೆಗಳ ಬಗ್ಗೆ ಜಾಗರೂಕನಾಗಿರಬೇಕು.
 • ಪ್ರೀತಿಸುವ ಮನಸ್ಸುಗಳಿಗೆ ಯಾವುದೇ ಸಂಪ್ರದಾಯಗಳು ಬೇಕಿಲ್ಲ ಅಂತೆಯೇ ಸಮಯ, ಸಂದರ್ಭ, ಕುಲ ಮತಗಳ ಹಂಗಿನ ಅವಶ್ಯವಿಲ್ಲ. ನಿರ್ಮಲವಾದ ಎರಡು ಹೃದಯಗಳ ಬೆಸುಗೆಯೇ ಪ್ರೀತಿ. ಇಂಥ ಪ್ರೀತಿಗೂ ಸಂಪ್ರದಾಯ ವಾದದಲ್ಲಿ ಜಾಗವಿಲ್ಲ ಎನ್ನಬಹುದು.
 • ಬೇಟೆಗೆ ಬಂದ ಬೇಟೆಗಾರನ ಸ್ಥಿತಿ ಪ್ರಾಣಿ / ಪಕ್ಷಿಗಳಿಗೆ ಅವನೊಬ್ಬ ತಿರುಕನಂತೆ, ಹೊಟ್ಟೆಗೆ ಅನ್ನವಿಲ್ಲದ ಅಸಹಾಯಕನಂತೆ, ಎಲ್ಲವನ್ನೂ ಕಳೆದುಕೊಂಡ ಮೂಡನಂತೆ ಕಾಣುತ್ತದೆ. ಅದನ್ನರಿತ ಪ್ರಾಣಿ / ಪಕ್ಷಿಗಳು ಮನನೊಂದು ಅವನ ಆಯುಧಕ್ಕೆ ಆಹುತಿಯಾಗುತ್ತವೆ. ಇದರಿಂದ ಬೇಟೆಗಾರ ಅಂದಿನ ದಿನವನ್ನು ತುಂಬಾ ಸಂತಸದಿಂದ ಖುಷಿಯಿಂದ ಕಳೆಯುತ್ತಾನೆ.
 • ಜೇನು ನೊಣ ಗಾತ್ರದಲ್ಲಿ ಸಣ್ಣಗೆ ಕಂಡರೂ ದಾಳಿಕೋರರ ಪ್ರಾಣವನ್ನೇ ಬಲಿಪಡೆಯುವಂತ ಶಕ್ತಿ ಅವಕ್ಕಿದೆ.
 • ಸಮಾಜದ ಅಂಕು ಡೊಂಕುಗಳನ್ನು ಎತ್ತಿತೋರಿಸುವ ಮತ್ತು ರೀತಿ ರೀವಾಜುಗಳನ್ನು ಪ್ರಶ್ನಿಸುವಂತ ವ್ಯಕ್ತಿಗಳನ್ನು ಸಮಾಜವೇ ಗುಟ್ಟಾಗಿ ಪರಿಸಮಾಪ್ತಿ ಮಾಡಿಬಿಡುತ್ತದೆ.
 • ನಾನೇ ಇಲ್ಲದ ನನ್ನಲ್ಲಿ ಹಣತೆ ಉರಿದರೇನು, ಮಳೆಯೇ ಭೋರ್ಗರೆದು ಸುರಿದರೇನು, ಮೊದಲು ನಾನು ನಾನಾಗುವ ತನಕ ನಾನು ಯಾರಿಗೂ ಅರ್ಥವಾಗುವುದಿಲ್ಲ.
 • ಒಬ್ಬ ವ್ಯಕ್ತಿ ಒಂದು ಹಂತವನ್ನು ತಲುಪಿದ ಬಳಿಕ ಅವನು ಹೇಗೇ ನಡೆದರೂ ಜನ ಒಪ್ಪಿಕೊಳ್ಳುತ್ತಾರೆ. ಆ ನಂತರವೇ ಅವನನ್ನು ಅನುಮಾನಿಸುವುದು.
 • ಲೋಕವನ್ನು ಬದಲಿಸಲು ನನ್ನಿಂದ ಸಾಧ್ಯವಾಗದಿದ್ದರೂ ಮೊದಲು ನನ್ನನ್ನು ನಾನು ಬದಲಿಸಿಕೊಳ್ಳುತ್ತೇನೆ.
 • ರ್ಮ ಮತ್ತು ಅಧರ್ಮದ ನಡುವಿನ ಘರ್ಷಣೆಯೇ ಮುಂದಿನ ಬದಲಾವಣೆಯ ಚಿಂತನೆ....
 • ಎತ್ತಣ ಲಾಲಸೆ, ಎತ್ತಣ ಗಾಂಭೀರ್ಯ
  ಎತ್ತಣದಿಂದ್ ಎತ್ತಣ
  ಪರಿಹಾಸವಯ್ಯ ಮಲ್ಲಿಕಾರ್ಜುನ
 • ಎನಗುಂಟು ಸಾಮ್ರಾಜ್ಯ, ಎನಗುಂಟು ಐಶ್ವರ್ಯ, ಎನಗುಂಟು ಕೋಟೆ ಕೊತ್ತಲಗಳು ಏನಿದ್ದರೇನಯ್ಯಾ ಮಲ್ಲಿಕಾರ್ಜುನ ಮನದೊಳು ಭಕ್ತಿಯೆಂಬ ದೀಪ ಉರಿಯದೊಡೆ.
 • ಒಬ್ಬ ಕೊಲೆಗಾರ ಮತ್ತೊಬ್ಬ ವ್ಯಕ್ತಿಯನ್ನು ದ್ವೇಶಕ್ಕೋ, ಕ್ರೋದಕ್ಕೊ ಅಥವಾ ಮತ್ಯಾವುದೋ ಕಾರಣಕ್ಕೊ ಕೊಂದು ಮುಗಿಸುತ್ತಾನೆ ಬಳಿಕ ಅವನು ಸತ್ತನೆಂದು ಸಂತಸಪಡುತ್ತಾನೆ. ಆದರೆ ನಿಜವಾದ ಅರ್ಥದಲ್ಲಿ ಕೊಲೆಗಾರ ಅವನೊಬ್ಬನ್ನನ್ನೇ ಕೊಂದಿರುವುದಿಲ್ಲ ಅವನನ್ನು ಮತ್ತು ಅವನ ಪರಿವಾರದವರ ಆಸೆ ಆಕಾಂಕ್ಷೆಗಳೆಲ್ಲವನ್ನೂ ಸಹ ಕೊಂದು ಮುಗಿಸಿರುತ್ತಾನೆ.
 • ನನ್ನದಲ್ಲದ ನೋವನ್ನು ನನ್ನದೆಂದುಕೊಂಡರೂ ಆ ಭಾವನೆಗೆ ಅರ್ಥವಿರುವುದಿಲ್ಲ. ಅದೇ ರೀತಿ ನನ್ನ ನೋವಿಗೆ ನೆರೆಹೊರೆಯವರು ಕಾರಣ ಎಂದುಕೊಂಡರೂ ಆ ಭಾವನೆಗೂ ಅರ್ಥವಿರುವುದಿಲ್ಲ.
 • ರೂಪದಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರು. ಮಮತೆಯಲ್ಲಿ .......... ?
 • ಒಂದು ವೃಕ್ಷ ತನ್ನ ತಾನು ಒಣಗಿಸಿಕೊಂಡು ಯಾವುದೇ ಫಲಾಪೇಕ್ಷೆಯಿಲ್ಲದೆ ಇತರರಿಗೆ ಗಾಳಿ ನೆರಳು ಕೊಡುತ್ತದೆ. ಅದೇ ಮನುಷ್ಯ ತನ್ನ ಸ್ವಂತ ಹಿತಾಸಕ್ತಿಗಾಗಿ ಇಡೀ ವೃಕ್ಷ ಪ್ರಭೇದವನ್ನೆ ಕಡಿಯುತ್ತ ವಿಕೃತ ಅಟ್ಟಹಾಸ ಮೆರೆಯುತ್ತಿದ್ದಾನೆ.
 • ಒಬ್ಬ ತಿರುಕ ಹತ್ತು ಮನೆ ತಿರುಗಿ ಅನ್ನ ಸಂಗ್ರಹಿಸುತ್ತಾನೆ. ಅದರಂತೆ ಒಬ್ಬ ರಾಜಕಾರಣಿ ಹತ್ತು ಮನೆ ತಿರುಗಿ ಅಧಿಕಾರ ಸಂಗ್ರಹಿಸುತ್ತಾನೆ.
 • ಒಂದು ಸಣ್ಣ ಇರುವೆ ಗೂಡಿನಲ್ಲಿ ಸಾವಿರ ಇರುವೆಗಳಿದ್ದರೂ ತಮ್ಮ ತಮ್ಮ ಕೆಲಸದಲ್ಲಿ ಕಿಂಚಿತ್ತೂ ತಾರತಮ್ಯವಿಲ್ಲದೆ ಕಾರ್ಯ ನಿರ್ವಹಿಸುತ್ತವೆ. ಅದೇ ಒಂದು ಊರಿನಲ್ಲಿ ಸಾವಿರ ಜನ ಇದ್ದರೆ ? ಮುಂದಿನದನ್ನು ಹೇಳಬೇಕಿಲ್ಲ ಎಂದೆನಿಸುತ್ತದೆ.
 • ಸಭೆಗಳ ಮುಂದೆ ಸಾಕ್ಷಾತ್ಕಾರದ ಸಾವಿರ ಮಾತುಗಳನ್ನಾಡಿದರೂ ಅದು ತನ್ನ ಇತಿಮಿತಿಗಳನ್ನು ಮೀರಿ ನಡೆಯಲು ಸಾಧ್ಯವಾಗಲಾರದು ಹಾಗೇನಾದರೂ ಆ ಪರದಿಯನ್ನು ದಾಟಿ ನಡೆದದ್ದೇ ಆದರೆ ಅದುವೇ ನಿಜವಾದ ಪ್ರಜಾ ಸಾಕ್ಷಾತ್ಕಾರವೆನ್ನಬಹುದು.
 • ಆಲಯದ ಗೋಡೆಗಳಿಗೆ ಗೊತ್ತಿರುವುದಿಲ್ಲ ಯಾವುದೇ ಕುಲ ಮತದ ವಿಡಂಬಣೆಗಳು. ಅವನೊಬ್ಬ ಆಲಯವನ್ನು ಹೊಕ್ಕ ಬಳಿಕವಷ್ಟೇ ಅದರ ಪ್ರಕಾರತೆ ಹೊಳಪನ್ನು ಪಡೆದುಕೊಳ್ಳುವುದು.
 • ಬೆಲೆ ಕಟ್ಟುವ ಬೆಳ್ಳಿ ಬಂಗಾರದ ಆಭರಣಗಳಿಗಿಂತ ನಮ್ಮನ್ನು ಚಿನ್ನದಂತೆ ಕಾಣುವ ನಿರ್ಮಲವಾದ ಸ್ನೇಹವೇ ಲೇಸು.
 • ಸರ್ಕಾರ ಒಬ್ಬ ವ್ಯಕ್ತಿಯನ್ನು ತಾನು ಎಣಿಸದಂತ ಅತ್ಯುನ್ನತ ಸ್ಥಾನಕ್ಕೆ ಕೊಂಡೊಯುತ್ತದೆ. ಆದರೆ ಅವನೇನಾದರೂ ಸಮಾಜ ಮುಖಿ ದೋರಣೆಯನ್ನು ಕೈಗೊಂಡು ಆ ಕಾರ್ಯಗಳತ್ತ ಹೆಚ್ಚು ಗಮನ ಹರಿಸಿದ್ದೇ ಆದಲ್ಲಿ ರಾತ್ರೋ ರಾತ್ರಿ ನೀರು ನೆರಳಿಲ್ಲದ ಸ್ಥಳಕ್ಕೆ ಅವನನ್ನು ವರ್ಗಾವಣೆ ಮಾಡಿಬಿಡುತ್ತೆ.
 • ಸಂಗೀತವೆಂಬುದು ಒಬ್ಬ ಮನುಷ್ಯನನ್ನು ಹುಚ್ಚನನ್ನಾಗಿಸಬಹುದು ಅದೇ ರೀತಿ ಒಬ್ಬ ಹುಚ್ಚನನ್ನು ಮನುಷ್ಯನನ್ನಾಗಿಸಬಹುದು.
 • ಭಾವನೆಗಳೇ ಇಲ್ಲದ ಮನುಷ್ಯ ಸತ್ತ ಶವಕ್ಕೆ ಸಮಾನ.
 • ಕೆಲವೊಮ್ಮೆ ನಾವಾಡುಂತ ಮಾತುಗಳು ಬೇರೆಯವರಿಗೆ ಅರ್ಥವಾಗದಿದ್ದರೂ ಚಿಂತೆಯಿಲ್ಲ ಮೊದಲು ನಮ್ಮ ಮಾತು ನಮಗೆ ಅರ್ಥವಾದರೆ ಸಾಕು.
 • ಆತ್ಮ ವಿಶ್ವಾಸಕ್ಕೆ ಇಷ್ಟೇ ಅಂಥ ಯಾವುದೇ ವಯಸ್ಸಿಲ್ಲ ಪ್ರಯತ್ನ ಒಂದಷ್ಟೇ ಮುಂದಾಗಬೇಕು.
 • ಕಾಮ ಮನುಷ್ಯನ ವಿವೇಕವನ್ನು ಕುಗ್ಗಿಸುತ್ತದೆ ಕ್ರೋಧ ಮನುಷ್ಯನ ವಿಶ್ವಾಸವನ್ನು ಕುಗ್ಗಿಸುತ್ತದೆ ಮೋಹ ಮನುಷ್ಯನ ಶಾಂತಿಯನ್ನು ಕುಗ್ಗಿಸುತ್ತದೆ ಲೋಭ ಮನುಷ್ಯನನ್ನು ಸ್ವಾರ್ಥದಲ್ಲಿ ಮುಳುಗಿಸುತ್ತದೆ ಮದ ಮನುಷ್ಯನ ಆಯುಸ್ಸನ್ನು ಕುಗ್ಗಿಸುತ್ತದೆ ಮಾತ್ಸರ್ಯವೆಂಬುದು ದ್ವೇಷ ಮತ್ತು ಹಗೆತನವನ್ನು ಹೆಚ್ಚಿಸುತ್ತದೆ ಈ ಮೇಲಿನ ಆರೂ ಗುಣಗಳು ಮಾನವನ ಬದುಕಿನ ಆರು ಶತ್ರುಗಳಂತೆ.
 • ಕೆಲವರು ವಯಸ್ಸಿನಲ್ಲಿ ಹಿರಿಯರಾಗಿದ್ದರೂ ಬುದ್ದಿಯಲ್ಲಿ ಮಾತ್ರ ಕಿರಿತನದ ಭಾವಗಳನ್ನೇ ಉಳಿಸಿಕೊಂಡಿರುತ್ತಾರೆ. ಅಂಥವರನ್ನು ಜನ ಒಳ್ಳೆ ಮತ್ತು ಕೆಟ್ಟ ಭಾವನೆಗಳಿಂದ ಗುರ್ತಿಸುತ್ತಾರೆ.
 • ಕೌಶಲ್ಯವನ್ನು ಉನ್ನತ ವಿಚಾರಗಳಿಗೆ ಬಳಸಿಕೊಳ್ಳಬೇಕೇ ಒರೆತು ಹೊಟ್ಟೆ ಹುರಿಗಲ್ಲ.
 • ಅಲ್ಪನ ಬುದ್ದಿ ಅವಿವೇಕತನಕ್ಕೆ ಕಾರಣ, ಅದೇ ರೀತಿ ಉತ್ತಮನ ಬುದ್ದಿ ಊರಿನ ಉಪಯೋಗಕ್ಕೆ ಕಾರಣ.
 • ಸಮಾನತೆಯೆಂಬುದು ಕೇವಲ ಸಂಬಂಧಗಳಿಗೆ ಮಾತ್ರ ಸೀಮಿತವಾದುದ್ದಲ್ಲ ಅದು ಸರ್ವ ಸದಸ್ಯನನ್ನು ಪ್ರೀತಿಯಿಂದ ಕಾಣುವಂತದ್ದಾಗಬೇಕು.
 • ಆತ್ಮ ಸಾಕ್ಷಿಯ ಅರಿವು ಅರಿಯದವನಿಗೆ ಆತ್ಮ ವಂಚನೆಯ ಕಾರ್ಯಗಳು ತುಂಬಾ ಸಲೀಸು.
 • ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯ ಬದುಕಲ್ಲಿ ಘಟಿಸುವ ಪದೇ ಪದೇ ಸೋಲುಗಳು ಮತ್ತೊಂದು ರೀತಿಯ ಸಂಗರ್ಷಕ್ಕೆ ಕಾರಣವಾಗಬಹುದು.
 • ಕೇವಲ ಒಬ್ಬರ ಹಿತಾಸಕ್ತಿಗಾಗಿ ಇಡೀ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸುವುದು ಆತ್ಮವಂಚನೆಯ ಕೆಲಸ.
 • ತಪ್ಪು ಘಟಿಸಿದ ಮೇಲೆ ತಕರಾರೆತ್ತಕೂಡದು ಹಾಗೇನಾದರೂ ತಕರಾರೆತ್ತಿ ಸಂಗರ್ಷಕ್ಕೆ ಕರೆದಲ್ಲಿ ಅವನೇ ನಯವಂಚಕ.
 • ಆಸೆಯೆಂಬುದು ಅರಿವಿನ ದೀಪವಿದ್ದಂತೆ ಪ್ರಕಾರತೆಯಿಂದ ಹೆಚ್ಚು ಉರಿದರೆ ಮನೆಯ ಮಾಳಿಗೆಗ ಕಷ್ಟ, ಕಡಿಮೆ ಉರಿದರೆ ಜೀವನದ ಜೋಳಿಗೆಗೆ ಕಷ್ಟ.
 • ಬೆಲೆಬಾಳುವ ಮುತ್ತುಗಳನ್ನು ಪೋಣಿಸಿ, ಚಿನ್ನದಿಂದ ಪಂಜರವ ನಿರ್ಮಿಸಿ, ಸ್ವಚ್ಚಂದವಾಗಿ ಹಾರುವ ಪಕ್ಷಿಯೊಂದನ್ನು ಅದರೊಳು ತಂದಿಟ್ಟರೆ ಆ ಪಕ್ಷಿ ಅಲ್ಲಿನ ಬೆಲೆಬಾಳುವ ಮುತ್ತುಗಳನ್ನೋ, ತಳತಳಿಸುವ ಚಿನ್ನದ ಹೊಳಪನ್ನೋ ನೋಡಿ ಮೋಹಗೊಂಡು ಒಂದು ಕ್ಷಣವೂ ಅಲ್ಲಿರಲು ಇಷ್ಟ ಪಡುವುದಿಲ್ಲ. ಅಲ್ಲಿಂದ ಎಷ್ಟು ಬೇಗ ಹಾರಿಹೋದರೆ ಸಾಕೆಂದು ಆತೊರೆಯುತ್ತದೆ.
 • ಇಡೀ ಜಗತ್ತೇ ಒಂದು ಕನ್ನಡಿ ಇದ್ದಂತೆ ನೀ ಮುಗುಳ್ನಕ್ಕರೆ ಇಡೀ ಜಗತ್ತೇ ಮುಗುಳ್ನಗುವುದು .- ಅನಾಮಿಕ
 • ನಿಜವಾದ ಮತ್ತು ಶುದ್ಧ ಸ್ನೇಹ, ಒಳ್ಳೆಯ ಆರೋಗ್ಯವಿದ್ದಂತೆ. ಅದರ ಬೆಲೆ, ಅದನ್ನು ನಾವು ಕಳೆದುಕೊಳ್ಳುವವರೆಗೂ, ನಮಗೆ ಗೊತ್ತಾಗುವುದೇ ಇಲ್ಲ. - ಚರ್ಲೆಸ್ ಕಾಲ್ತೊನ್
 • ಈ ಪ್ರಪಂಚದಲ್ಲಿ ಜನರೆಲ್ಲರಿಗೂ ತಮಗೇನು ಬೇಕೆಂದು ಅರಿವೇ ಇಲ್ಲ. ಆದರೂ ತಾವು ಅರಿಯದ ಯಾವುದನ್ನೋ ಪಡೆಯಲು ಪಡಬಾರದ ಕಷ್ಟಗಳನ್ನೆಲ್ಲ ಪಡುತ್ತಾರೆ.
 • ಒಂದು ಬಂಡಿಯಿಂದ ಐದು ಗಜ ದೂರವಿರಬೇಕು, ಕುದುರೆಯಿಂದ ಹತ್ತು ಗಜ ಮತ್ತು ಆನೆಯಿಂದ ನೂರು ಗಜ ದೂರವಿರಬೇಕು. ಆದರೆ ಒಬ್ಬ ದುಷ್ಟ ಮನುಷ್ಯನಿಂದ ಎಷ್ಟು ದೂರವಿರಬೇಕು ಎನ್ನುವುದನ್ನು ಅಳೆಯಲು ಸಾಧ್ಯವೇ ಇಲ್ಲ.
 • ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ. — ಶಂಕರಾಚಾರ್ಯರು
 • ಸೋಮಾರಿತನವು ಮಾನವರ ಶರೀರದೊಳಗೆ ಇರುವ ದೊಡ್ಡ ಶತ್ರು.ಸಕ್ರಿಯತೆಯೇ ಮಾನವರ ನಿಜ ಬಂಧು. ಕೆಲಸದಲ್ಲಿ ಮಗ್ನರಾದವರು ಎಂದಿಗೂ ಕೆಡುವುದಿಲ್ಲ. – ಸುಭಾಷಿತ ಮಂಜರಿ
 • ಯಾರಿಗಾದರೂ ಏನನ್ನಾದರೂ ಕೊಡುವಾಗ ಶ್ರದ್ಧೆಯಿಂದ ಕೊಡಬೇಕು, ಅಶ್ರದ್ದೆಯಿಂದ ಕೊಡಬಾರದು, ಒಳ್ಳೆಯದನ್ನೇ ಕೊಡಬೇಕು, ಸಂತೋಷದಿಂದ ಕೊಡಬೇಕು, ಹೆದರಿಕೆಯಿಂದ ಕೊಡಬೇಕು, ಪೂರ್ಣವಾಗಿ ಕೊಡಬೇಕು, ಹಾಗೆ ಕೊಡುವ ವಿಚಾರದಲ್ಲಿ ಏನು, ಎಷ್ಟು, ಎಲ್ಲಿ, ಹೇಗೆ ಕೊಡಬೇಕು ಎನ್ನುವ ಸಂದೇಹ ಬಂದರೆ, ತಿಳಿದವರಲ್ಲಿ ವಿಚಾರಿಸಿ, ಕೊಡಬೇಕು. – ತೈತ್ತರೀಯ ಉಪನಿಷತ್ತು
 • ಎಲ್ಲೊ ಹುಡುಕಿದೆ ಇಲ್ಲದ ದೇವರ ಕಲ್ಲುಮಣ್ಣುಗಳ ಗುಡಿಯೊಳಗೆ ಇಲ್ಲೆ ಇರುವ ಪ್ರೀತಿ ಸ್ನೇಹಗಳ ಗುರಿತಿಸಲಾದೆನು ನಮ್ಮೊಳಗೆ.
 • ಹತ್ತು ಪಂದ್ಯಗಳಲ್ಲಿ ಗೆದ್ದವನಿಗೆ ಕೊನೆಯ ಒಂದು ಪಂದ್ಯದ ಸೋಲು ಬಹಳ ನೋವು ತರಿಸುತ್ತೆ.
 • ತಾಳ್ಮೆಯಂದರೆ ನಮ್ಮನ್ನು ತಡೆಯುವ ಅಥವಾ ನಮಗೆ ನೋವುಂಟುಮಾಡುವುದನ್ನು ಅನುಭವಿಸುತ್ತ ನಮ್ಮ ಮಾನಸಿಕ ಸಂತುಲನೆಯನ್ನು ಕಾಪಾಡಿಕೊಳ್ಳುವುದು . ತಾಳ್ಮೆ ನಮ್ಮನ್ನು ಗಟ್ಟಿಯಾಗಿಸಿ ಔನ್ನತ್ಯಕ್ಕೆ ಕೊಂಡುಹೋಗುತ್ತದೆ .ಪರರ ಪ್ರತಿ ತಾಳ್ಮೆ ಇದ್ದರೆ ಸಾಲದು . ನಮ್ಮ ಅಂತರಂಗದಲ್ಲಿ ನಡೆಯುವ ಯುದ್ಧದಲ್ಲೂ ನಾವು ತಾಳ್ಮೆ ವಹಿಸಬೇಕು . ಆದರೆ ತಾಳ್ಮೆ ನಮ್ಮ ಕ್ರಿಯಾಹೀನತೆ ಮತ್ತು ಬಲಹೀನತೆಯಾಗಬಾರದು. – ಅನಾಮಿಕ
 • ನೋಡುವ ಕಣ್ಣು ಆಡುವ ಬಾಯಿ ಸ್ವಚ್ಛವಾಗಿದ್ದರೆ ಅವನಿಗೆ ಲೋಕವೆಲ್ಲಾ ಮಿತ್ರರಂತೆ
 • ಒಂದೊಂದು ಧರ್ಮ ಒಂದೊಂದು ಬಗೆಯ ಚಿಂತನಾ ಶೀಲತೆಯಲ್ಲಿ ತೊಡಗಿರುತ್ತವೆ. ಕೆಲವು ತನ್ನವರ ಹಿತವನ್ನು ಬಯಸಿದರೆ ಮತ್ತಲವು ತನ್ನವರನ್ನೇ ತುಳಿಯುತ್ತ ತಾಂಡವವಾಡುತ್ತಿರುತ್ತವೆ. ಧರ್ಮಗಳೆಷ್ಟೇ ಇದ್ದರು ಧರ್ಮದ ಮೂಲ ಎಂದಿಗೂ ದಯೆ ದಾಕ್ಷಣ್ಯದಿಂದ ಕೂಡಿರಬೇಕು. ಇಲ್ಲದಿದ್ದಲ್ಲಿ ಅಧರ್ಮವು ಕವಲೊಡೆದು ಧರ್ಮದ ದಾರಿಯನ್ನೇ ತಪ್ಪಿಸಬಹುದು.
 • ಒಬ್ಬ ಬೇಟೆಗಾರ ಪ್ರಾಣಿಗಳನ್ನು ಕೊಲ್ಲುವುದು ಹಿಂಸೆಯೆಂದು ತಿಳಿದಿದ್ದರೂ ಸಹ ಅವುಗಳನ್ನು ಕೊಲ್ಲುತ್ತಾನೆ. ಆದರೆ ಇದನ್ನು ವೃತ್ತಿ ಎನ್ನುವುದೋ ಅಥವಾ ಅವನ ಪ್ರೌರುತ್ತಿಯೆನ್ನುವುದೋ ಅರ್ಥಕಾಣದ ವಿಷಯ.
 • ಈ ವಿಕೃತ ಸಮಾಜದಲ್ಲಿ ಸ್ವಚಂದ ಬದುಕಿಗೆ ಸ್ಥಾನವಿಲ್ಲ ಕಾರಣ ಸಮಾನತೆಯ ಅಂತರ ಮತ್ತು ಮೇಲು ಕೀಳಿನ ಲೆಕ್ಕಾಚಾರ
 • ಆಳುವವನ ಮನದಲ್ಲಿ, ಒಡಕಿನ ಕುಡಿಯೊಡೆದರೆ, ಇನ್ನು ಸಾಮ್ರಾಜ್ಯದ ಸುಸ್ಥಿತಿಯು, ದುಸ್ಥಿತಿಯ ಕೂಪವೇ ಸರಿ.
 • ದಿನದಿಂದ ದಿನಕ್ಕೆ ಮನಷ್ಯ ತನ್ನ ಉನ್ನತಿ ಮತ್ತು ಪ್ರಗತಿಯ ಜೊತೆಗೆ ಪ್ರೀತಿ, ವಿಶ್ವಾಸ, ನೆಮ್ಮದಿಯನ್ನೂ ಸಹ ಮರೆಯುತ್ತ ಸಾಗುತ್ತಿದ್ದಾನೆ, ಒಂದೆಡೆಯ ನಿಶಬ್ದವಾದಂತ ಸನ್ನಿವೇಶ ಒಂದು ಗ್ರಂಥವನ್ನೇ ರಚಿಸಿಕೊಡಬಲ್ಲದು ಆದರೆ ಅದನ್ನು ನಿಭಾಯಿಸುವಂತ ತಾಳ್ಮೆ ಮತ್ತು ಸಮಯಪ್ರಜ್ಞೆ ಅವನಿಗಿರಬೇಕಷ್ಟೆ.
 • ಕೆಲಹೊಂದು ವಿಚಾರಗಳಲ್ಲಿ ದಾನವನನ್ನಾದರೂ ಮಣಿಸಬಹುದು ಆದರೆ ಧರ್ಮಾಂಧನನ್ನು ಮಾತ್ರ ಮಣಿಸಲಾಗದು.
 • ನಮ್ಮ ನಮ್ಮಲ್ಲಿ ಎಲ್ಲಿಯ ತನಕ ಅವನ ಕಂಡರೆ ಇವನಿಗೆ ಇವನ ಕಂಡರೆ ಅವನಿಗೆ ದ್ವೇಶ, ಅಸೂಯೇ, ಹೊಟ್ಟೆ ಉರಿ, ಕೋಪ ತಾಪಗಳಿರುತ್ತವೆಯೋ ಅಲ್ಲಿಯ ತನಕ ಸಮಾಜದಲ್ಲಿ ಹೊಂದಾಣಿಕೆ, ಸಾತ್ವಿಕತೆಯೆಂಬುದು ಮರೀಚಿಕೆಯ ಮಾತೇ ಸರಿ.
 • ನೆನ್ನೆ ಮೂಡಿದ್ದ ಚಂದ್ರ ಇಂದು ಮರೆಯಾಗಿ ಹೋದನೆಂದರೆ ಅದಕ್ಕೆ ಆಶ್ಚರ್ಯ ಪಡುವಂತದ್ದೇನಿಲ್ಲ ಬೇಕಿದ್ದರೆ ಮನುಷ್ಯ ಚಂದ್ರನನ್ನೂ ಹೊಡೆದು ಚೂರಾಗಿಸುವ ಛಲ ಮತ್ತು ಬಲವನ್ನು ಹೊಂದಿದ್ದಾನೆ.
 • ಒಬ್ಬ ಕಳ್ಳ ತನ್ನ ಯೋಜನೆಗಳನ್ನು ದಿನದಿಂದ ದಿನಕ್ಕೆ ಬದಲಾಯಿಸುತ್ತ ತನ್ನ ಬುದ್ದಿಯನ್ನು ಮತ್ತಷ್ಟು ಚುರುಕನ್ನಾಗಿಸಿಕೊಳ್ಳುತ್ತಿರುತ್ತಾನೆ. ಆದರೆ ಇದೇ ಬುದ್ದಿಯನ್ನು ಆ ಕಳ್ಳ ತನ್ನ ಭವಿಷ್ಯದ ಉದ್ದಾರಕ್ಕೋ ಅಥವಾ ಮತ್ಯಾವುದಾದರೊಂದು ವಿದ್ಯೆಗೋ ಬಳಸಿದ್ದರೆ ಜನ ಅವನ ಏಳಿಗೆಯನ್ನು ಕಂಡು ಕೊಂಡಾಡಬಹುದಿತ್ತು.
 • ಯಾವುದೇ ಪ್ರಾರ್ಥನೆಗೆ ಭಕ್ತಿ ಮುಖ್ಯವೇ ಹೊರೆತು ಶಕ್ತಿ ಮುಖ್ಯವಲ್ಲ.
 • ಉನ್ನತ ಅಧ್ಯಾತ್ಮಿಕ ಅನುಭೂತಿಯನ್ನು ಪಡೆದವರೆಲ್ಲ, ಬೇರೆ ಬೇರೆ ಮತಗಳಲ್ಲಿ ಉಲ್ಲೇಖಿಸಿರುವ ಪರಮಾತ್ಮನ ರೂಪದ ಬಗ್ಗೆ ಕಿತ್ತಾಡುವುದಿಲ್ಲ. ಏಕೆಂದರೆ ಅವರಿಗೆ ಗೊತ್ತು, ಎಲ್ಲ ಮತಗಳು ಬೇರೆ ಬೇರೆ ಭಾಷೆಯನ್ನೂ ಮತ್ತು ಪರಿಭಾಷೆಯನ್ನು ಆಡಿದರೂ,ಅವುಗಳ ಮೂಲ ತತ್ವ ಮತ್ತು ಅವು ಪ್ರತಿಪಾದಿಸುವ ಸತ್ಯವೊಂದೇ ಎಂದು. – ಸ್ವಾಮಿ ವಿವೇಕಾನಂದ
 • ಅಲ್ಲೊಂದು ಅಸಹಾಯಕನ ಮನೆ ಅಗ್ನಿಗಾಹುತಿಯಾಗಿ ಧಗ ಧಗ ಉರಿಯುತ್ತಿದೆ ಎಂದರೆ ಅದು ಅವನು ಮಾಡಿದ ಪಾಪದಿಂದಲ್ಲ ಆ ಸನಿಹದಲ್ಲೇ ಇರುವ ಪರಮ ಪಾತಕಿಗಳ ನೀಚ ಕೃತ್ಯದಿಂದ.
 • ನಮ್ಮ ಮನಸ್ಸು ಕೆಲವೊಮ್ಮೆ ಮೋಹಕ್ಕೆ, ಮತ್ತೊಮ್ಮೆ ಪ್ರೀತಿಗೆ, ಮಗದೊಮ್ಮೆ ಆಸೆಗೆ, ಅದರೊಮ್ಮೆ ಭಯಕ್ಕೆ ಹೀಗೆ ಸೋಲುತ್ತಲೇ ಸಾಗುತ್ತಲಿರುತ್ತೆ
 • ಸಾವುದಾನಕ್ಕಿಂತ ಸಮಾದಾನ ಮುಖ್ಯ. ಸಮಾದಾನಕ್ಕಿಂತ ಆ ಸಂದರ್ಭವನ್ನು ಭೇದಿಸುವಂತ ಚಾಣಕ್ಷತನ ಇನ್ನೂ ಬಹಳ ಮುಖ್ಯ.
 • ಬಾಹ್ಯ ಸೌಂದರ್ಯಕ್ಕಿಂತ ಹೆಚ್ಚು ಅಂತರಂಗದ ಸೌದರ್ಯವನ್ನು ಪ್ರೀತಿಸಬೇಕು. ಕಾರಣ ಬಾಹ್ಯ ಸೌಂದರ್ಯ ಯಾವ ಕ್ಷಣದಲ್ಲಾದರೂ ಬದಲಾವಣೆಗೊಳ್ಳಬಹುದು ಆದರೆ ಅಂತರಂಗ ಸೌಂದರ್ಯವನ್ನು ಯಾರೂ ಬದಲಿಸಲು ಸಾಧ್ಯವಾಗುವುದಿಲ್ಲ.
 • ಒಂದು ಸುಂದರ ಕಲಾಕೃತಿಗೆ ಇಂತದ್ದೇ ರೂಪವಿರಬೇಕೆಂಬ ನಿಯಮವಿಲ್ಲ. ಅದರಂತೆ ಆ ಕಲಾವಿದನ ಕಾರ್ಯ ಮತ್ತು ನೈಪುಣ್ಯತೆಯನ್ನು ಅವಲಂಭಿಸಿ ಆ ಕಲಾಕೃತಿಯ ಮೌಲ್ಯವನ್ನು ನಿರ್ಧಾರಿಸಬಹುದು.
 • ಯಾವುದೇ ವ್ಯವಸ್ಥೆಯಲ್ಲಾದರೂ ಅಕ್ರಮಗಳು ಹೆಚ್ಚಾದಾಗ ಅದಕ್ಕಿಂತ ಹತ್ತು ಪಟ್ಟು ಅನುಮಾನಗಳು ಜಾಗೃತ ಗೊಳ್ಳುತ್ತವೆ.
 • ಪ್ರಾರ್ಥನೆಯಿಂದ, ನಮಗೆ ಪರಮಾತ್ಮನಲ್ಲಿ ಪ್ರೀತಿ ಬೆಳೆಯುತ್ತದೆ, ಆ ಪ್ರೀತಿ ಕ್ರಮೇಣ ಅತ್ಯುನ್ನತ ಭಕ್ತಿಯಾಗುತ್ತದೆ. ಆ ಸ್ಥಿತಿಯಲ್ಲಿ ರೂಪಗಳು ಮಾಯವಾಗಿ, ಆಚಾರಗಳು ಹಾರಿಹೋಗಿ, ಪುಸ್ತಕದ ಜ್ಞಾನವನ್ನು ಮೀರಿ, ವಿಗ್ರಹಗಳು, ದೇವಾಲಯಗಳು, ಇಗರ್ಜಿಗಳು, ಮತಗಳು, ಜಾತಿಗಳು ದೇಶಗಳು ಮತ್ತು ನಮ್ಮ ಗುರುತುಗಳ ಮಿತಿಗಳು ಮತ್ತು ಬಂಧನಗಳು ಅಳಿಸಿಹೋಗಿ ಆತ್ಮಜ್ಞಾನ ಉಂಟಾಗುತ್ತದೆ. – ಸ್ವಾಮೀ ವಿವೇಕಾನಂದ.
 • ಎಲ್ಲಾ ಸಮಯದಲ್ಲೂ ಅನುಕರಣೆಯ ಮಂತ್ರಕ್ಕೆ ಅವಲಂಭಿತವಾಗಬಾರದು ಸ್ವಂತ ಬುದ್ದಿಯೆಂಬುದು ಉನ್ನತಿಗೆ ಸೋಪಾನ.
 • ಯಾರೋ ತಿಂದರೆ ಅದು ನಾವು ತಿಂದಂತೆ ಆಗುವುದಿಲ್ಲ ಅದರಂತೆಯೇ ನಮ್ಮ ಹೊಟ್ಟೆಯನ್ನು ನಾವೇ ತುಂಬಿಸಿಕೊಳ್ಳಬೇಕು.
 • ಕೆಲವೊಂದು ಘಟನೆಗಳು ನಮ್ಮ ಊಹೆಯನ್ನೇ ತಲೆಕೆಳಗಾಗಿ ಮಾಡಬಹುದು.
 • ಹಡಗೊಂದು ಭಯಂಕರ ಸಮುದ್ರದ ಅಲೆಗಳ ಮಧ್ಯೆ ಹಾದಿ ತಪ್ಪಿಹೋದರೂ ತನ್ನ ನಿರೀಕ್ಷಿತ ಸ್ಥಳವನ್ನು ತಲುಪಲು ಸಣ್ಣ ದಿಕ್ಸೂಚಿಯ ಮಾರ್ಗವನ್ನು ಅವಲಂಭಿಸಿರುತ್ತದೆ. ಅದೇ ರೀತಿ ನಮ್ಮ ಬಾಳಿನಲ್ಲಿ ಭಯಾನಕ ಕಷ್ಟಗಳೇ ಎದುರಾದರೂ ನಮ್ಮ ತಾಳ್ಮೆ ಆ ದಿಕ್ಸೂಚಿಯಂತೆಯೇ ಕಾರ್ಯ ನಿರ್ವಹಿಸುತ್ತದೆ.
 • ಒಂದು ಉತ್ತಮವಾದ ಮಾತು ಒಬ್ಬನ ಗೆಲುವಿಗೆ ಕಾರಣವಾಗಬಹುದು ಅದೇ ರೀತಿ ಒಂದು ಕೆಟ್ಟ ಮಾತು ಒಬ್ಬನ ಅಳಿವಿಗೂ ಕಾರಣವಾಗಬಹುದು.
 • ದೇವರಿಗೆ ಒಂದು ಕಾಯಿ ಹೊಡೆದಲ್ಲಿ ಅದು ಬಯಕೆ. ಅದೇ ರೀತಿ ನೂರು ಕಾಯಿ ಹೊಡೆದು ಖುಷಿ ಪಟ್ಟಲ್ಲಿ ಅದು ಅರಕೆ.
 • ಅರ್ಹತೆಯಿದ್ದವನೆ ಅದೃಷ್ಟಗಳು ಅವನ ಮನೆಯ ಕದವನ್ನು ತಟ್ಟಿ ಎಚ್ಚರಿಸುತ್ತವೆ. ಆದರೆ ಅದನ್ನು ಬಳಸಿಕೊಳ್ಳುವುದು ಬಿಡುವುದು ಅವನ ಸ್ವಂತಿಕೆಗೆ ಬಿಟ್ಟ ವಿಚಾರ.
 • ಒಬ್ಬ ಸತ್ಯವಂತನಿಗೆ ಮೊದ ಮೊದಲು ಅನುಭವಗಳಿಗಿಂತ ಅಪವಾದಗಳೇ ಹೆಚ್ಚು ಕಾಡಲಾರಂಭಿಸುತ್ತವೆ. ಅವನ ಮರಣಾನಂತರ ಅದೇ ಸತ್ಯವೂ ಅವನನ್ನು ಮೂರ್ತಿಯನ್ನಾಗಿ ಪರಿವರ್ತಿಸಿ ಜನರ ಮನದಲ್ಲಿ ಆರಾಧಿಸುವಂತೆ ಬದಲಾಯಿಸುತ್ತದೆ.
 • ಪ್ರತಿಯೊಂದು ಓಲೈಕೆಯ ಹಿಂದೆ ಘನವವಾದ ಸ್ವಾರ್ಥವು ಮೌನವಾಗಿ ಅಡಗಿರುತ್ತದೆ.
 • ಹೃದಯದ ಭಾಷೆಯನ್ನು ಅರಿತವನಿಗೆ ಕಲ್ಲು ಶಿಲೆಯಾದರೂ ಹೃದಯ ವೈಶಾಲ್ಯತೆಯನ್ನು ಮೆರೆಯುತ್ತಾನೆ.
 • ಪಾಂಡಿತ್ಯವೆಂಬುದು ಬಲ್ಲವನ ವಿದ್ಯೆಯೇ ಹೊರೆತು ಬಲವಂತನ ವಿದ್ಯೆಯಲ್ಲ.
 • ಅರಳುವ ನಗುವಿಗೆ ಬಡವ ಬಲ್ಲಿದನೆಂಬ ಬೇಧವಿಲ್ಲ, ಆಗುವ ಹಸಿವಿಗೆ ಕುಲ ಮತದ ವ್ಯತ್ಯಾಸವಿಲ್ಲ, ಗುಡಿಸಲಿದ್ದರೇನು, ಅರಮನೆಯೇ ಇದ್ದರೇನು, ಬದುಕು ಎಲ್ಲರಿಗೂ ಒಂದೇ, ಭವಣೆಯೂ ಒಂದೇ.
 • ಜಗತ್ತಿನೆಲ್ಲೆಡೆ ಈಗ ಪ್ರಳಯದ್ದೇ ಭೀತಿ. ಆದರೆ ಅದರ ಸತ್ಯಾ ಸತ್ಯತೆಗಳನ್ನು ತಿಳಿಯಲು ಆ ಸಮಯ ಸಮೀಪಿಸಬೇಕು. ಒಂದು ಪಕ್ಷದಲ್ಲಿ ಅದು ಆಗಲೇ ಬೇಕೆಂದಿದ್ದರೆ ಅದ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.
 • ಕಾಡಾದರೇನು ನೆಮ್ಮದಿಯ ಬದುಕಿಗೆ, ಕಾಡು ಪ್ರಾಣಿಗಳಿಗಿಂತ ಕ್ರೂರಿ ಮನುಜನೇ ಅಯ್ಯಾ.
 • ನೋಟದಲ್ಲಿ ತಪ್ಪಿದ್ದರೆ ಕರೆದು ಬುದ್ದಿ ಹೇಳಬಹುದು ಆದರೆ ನಡತೆಯಲ್ಲೇ ತಪ್ಪಿದ್ದರೆ ಅಂತವರನ್ನು ತಿದ್ದಲು ಅಸಾಧ್ಯ.
 • ಹಂಚಿಕೊಂಡು ತಿನ್ನುವಂತ ಸ್ವಭಾವ ಒಂದು ಗುಂಪಿನಲ್ಲಿದ್ದರೆ ಅವರನ್ನು ಅಸೂಯೆಯೂ ಸಹ ಪ್ರಶ್ನಿಸಿಸಲು ಸಾಧ್ಯವಾಗುವುದಿಲ್ಲ..
 • ಕಂದಾಚಾರಗಳಿಲ್ಲದ ನೈಜ ಸಂಸ್ಕೃತಿಯು ಒಬ್ಬ ನೀಚ ಮನುಷ್ಯನ ಸ್ವಭಾವವನ್ನೂ ಸಹ ಬದಲಿಸುತ್ತೆ.
 • ಸೌಂದರ್ಯವೆಂದಿಗೂ ಆಕರ್ಷಣೆಯ ಕೇಂದ್ರ ಬಿಂದುವಾಗಕೂಡದು. ಕಾರಣ ಅದೇ ಸೌಂದರ್ಯ ಮುಂದಿನ ಅನಾಹುತಗಳಿಗೆ ದಾರಿಯಾಗಬಹುದು.
 • ಒಂದು ಕುಟುಂಬಕ್ಕೆ ಗಂಡ, ಹೆಂಡತಿ, ಮಕ್ಕಳು ಎಂಬುದು ಎಷ್ಟು ಮುಖ್ಯವೋ. ಅದೇ ರೀತಿ ಒಂದು ಸಮಾಜಕ್ಕೆ ನ್ಯಾಯ, ನೀತಿ, ಆದರ್ಶವೆಂಬುದು ಅಷ್ಟೇ ಮುಖ್ಯ.
 • ನೂರು ಜನರನ್ನು ಒಂದೇ ಏಟಿಗೆ ಹೊಡೆದು ಉರುಳಿಸುವಂತ ಬಲ ಭೀಮ ಪುರುಷನನನ್ನೂ ಸಹ ಒಬ್ಬ ಸಾಮಾನ್ಯ ಹೆಣ್ಣು ಪಳಗಿಸಿ ನಿಯಂತ್ರಿಸಬಲ್ಲಳು.
 • ಧರ್ಮ ಮತ್ತು ಅಧರ್ಮದ ಯುದ್ದದಲ್ಲಿ ಮೊದಲಿಗೆ ಅಧರ್ಮಕ್ಕೆ ಜಯ ಕಂಡರೂ ಕೊನೆಯಲ್ಲಿ ಧರ್ಮವೇ ಗೆಲ್ಲುವುದು.
 • ಪ್ರಸ್ತುತಕ್ಕೆ ಹೇಳುವುದಾದರೆ ನಮ್ಮ ಸಮಾಜದಲ್ಲಿ ಮಮತೆ ಪ್ರೀತಿಗಿಂತ, ಆಸ್ತಿ ಹಣದ ಮೋಹವೇ ಹೆಚ್ಚು ?.
 • ನೂರು ಜನ ಒಂದೆಡೆ ನಿಂತಿದ್ದಲ್ಲಿ. ಅದರಲ್ಲೊಬ್ಬ ನೋಡು ಆ ಕಾಗೆಯ ಬಣ್ಣ ಕಪ್ಪಾಗಿದೆ ಎಂದರೆ. ಉಳಿದವರು ಅಲ್ಲಾ ಅದು ಬಿಳಿ ಬಣ್ಣದ ಕಾಗೆ ಎಂದು ವಾದಿಸಿದ್ದಲ್ಲಿ ತಲೆಬಾಗಿ ಕೈಮುಗಿದು ಹೊರನಡೆದರೇ ಕ್ಷೇಮ. ಇಲ್ಲದಿದ್ದಲ್ಲಿ ಉಳಿದವರು ಆ ಒಬ್ಬನನ್ನು ಹುಚ್ಚನನ್ನಾಗಿಸುವಂತ ಪ್ರಕ್ರಿಯೆಯೂ ಘಟಿಸಬಹುದು.
 • ಮನುಷ್ಯಗೆ ಜ್ಞಾನೋದಯ ಮೂಡಿಸುವಂತ ಎರಡು ಸಂದರ್ಭಗಳು.
  1. ಮದುವೆಯಾದ ಬಳಿಕ ಸಂಭವಿಸುವಂತ ಘಟನೆಗಳಿಂದ.
  2. ತನ್ನವರು ತನ್ನದೇ ಮನೆಯಿಂದ ತನ್ನನ್ನು ಹೊರ ಕೆಡವಿದಾಗ.
 • ಜ್ಞಾನದಲ್ಲೇ ಮುಳುಗಿ ಜನರ ಅವಹೇಳನಕ್ಕೆ ಗುರಿಯಾದ ಮನುಷ್ಯನಿಗೆ. ನಂತರವೇ ಸುಜ್ಞಾನದ ಬಗ್ಗೆ ಕುತೂಹಲ ಮತ್ತು ಅರಿವು ಮೂಡುವುದು.
 • ಮನುಷ್ಯನಿಗೆ ನೂರು ಜಾತಿ, ನೂರು ಮತ, ನೂರು ಧರ್ಮಗಳು. ಸಾವಿಗೂ ಇದೆಯ ಈ ತಾರತಮ್ಯ ?.
 • ಒಬ್ಬ ಸಭ್ಯಸ್ತ ಉಡುಗರೆಯನ್ನು ಕೊಟ್ಟರೆ ಅದು ಸಮಾನ. ಅದೇ ಒಬ್ಬ ರಾಜಕಾರಣಿ ಉಡುಗರೆಯನ್ನು ಕೊಟ್ಟರೆ ಅದು ಅನುಮಾನ.
 • ಸಾಹಸಕ್ಕಿಂತ ದುಸ್ಸಾಹಸ ದುರುದ್ದೇಶದಿಂದ ಕೂಡಿರುತ್ತದೆ.
 • ಆಕಾಶದಲ್ಲಿ ಕೇವಲ ಪಕ್ಷಿಗಳೇ ಅಲ್ಲಾ ವಿಮಾನಗಳೂ ಸಹ ಹಾರುತ್ತವೆ. ಪಕ್ಷಿಗಳು ಹೊಟ್ಟೆಪಾಡಿಗಾಗಿ ಹಾರಿದರೆ ವಿಮಾನಗಳು ಹಣಕ್ಕಾಗಿ ಹಾರಾಡುತ್ತವೆ.
 • ಆತ್ಮ ವಂಚನೆಗಿಂತ ಮತ್ತೊಬ್ಬ ಶತೃ ಬೇರಿಲ್ಲ.
 • ಸಣ್ಣ ಸಣ್ಣ ವಿಷಯಗಳಿಗೂ ಸಹ ವಿಚ್ಛೇಧನವಾಗುತ್ತೆ ಅಂದ್ರೆ ಅದು ಖಂಡಿತ ಪ್ರೀತಿಯಲ್ಲಾ ವ್ಯಾಪಾರ.
 • ಹಿಂದೊಮ್ಮೆ ಯಾವುದೇ ವಿಷಯವನ್ನೇ ಆಗಲಿ "ಇದ್ದದ್ದು ಇದ್ದಂತೆ ಹೇಳಿದರೆ ಎದ್ದು ಬಂದು ಎದೆಗೆ ಒದೆಯುತ್ತಿದ್ದರು" ಎನ್ನುವಂತ ಪ್ರತೀತಿಯಿತ್ತು ಆದರೆ ಈಗ ಅವನಿಗೂ ಮತ್ತು ಅವನ ಸಂಬಂಧಿಕರಿಗೂ ಹಾಗೂ ಅವನ ಒಡೆತನ ಆಸ್ತಿಗಳನ್ನೂ ಸಹ ಹೊ(ಒ)ದ್ದು ಮುಗಿಸುತ್ತಾರೆ ಎಂಥ ಕಾಲ ಬಂತು ಶಿವನೇ.
 • ಆಸೆಯೆಂಬುದು ಅರಿವಿನ ದೀಪವಿದ್ದಂತೆ ಪ್ರಕಾರತೆಯಿಂದ ಹೆಚ್ಚು ಉರಿದರೆ ಮನೆಯ ಮಾಳಿಗೆಗ ಕಷ್ಟ, ಕಡಿಮೆ ಉರಿದರೆ ಜೀವನದ ಜೋಳಿಗೆಗೆ ಕಷ್ಟ.
 • ಲೋಕದ ಅಂಕು ಡೊಂಕುಗಳನ್ನಾಗಲಿ ಅಥವಾ ಇತರರ ಒಪ್ಪು ತಪ್ಪುಗಳನ್ನಾಗಲಿ ತಿಳಿಸಿ ತಿದ್ದುವುದಕ್ಕಿಂತ ನನ್ನ ಮನಸ್ಸಿನ ವಿರ್ಮಶೆಯನ್ನೇ ನಾನು ಮಾಡಿಕೊಳ್ಳುವುದಕ್ಕೆ ಸಮಯ ಸಾಕಾಗುತ್ತಿಲ್ಲ.
 • ಬದಲಾವಣೆಯೆಂಬುದು ಮನುಷ್ಯನ ಸಹಜ ಪ್ರೌವೃತ್ತಿ. ಆದರೆ ಕಂಡದ್ದನ್ನೆಲ್ಲಾ ಕಡಿದು, ಬಡಿದು ಬದಲಾಯಿಸು ಅಂತಲ್ಲ ನಿಮ್ಮ ಅಂತರಂಗ ಮತ್ತು ಬಹಿರಂಗದ ಇತಿ ಮಿತಿಗಳ ಎಲ್ಲೆಯೊಳಗಷ್ಟೇ ಬಡಿದು ಬದಲಿಸುಕೋ ಎಂಬ ಭಾವಾರ್ಥ ಮೂಡಬಹುದು.
 • ಈ ಪ್ರಪಂಚದಲ್ಲಿ ಮಾನವತೆಗಿಂತ ದುಬಾರಿ ಬೆಲೆಯ ವಸ್ತು ಬೇರೊಂದಿಲ್ಲ. ಕಾರಣ ಮೊದಲು ನಾವು ಮನುಷ್ಯರಾದರೆ ಎಲ್ಲಾ ವ್ಯಾಮೋಹಗಳು ಶೂನ್ಯದಂತೆ ಬಾಸವಾಗುತ್ತವೆ.
 • ಒಬ್ಬ ವ್ಯಕ್ತಿಯ ಮೌಲ್ಯವನ್ನು ನಿರ್ಧರಿಸಲು ಅವನ ಹಣ, ಅಧಿಕಾರ, ಅಂತಸ್ಸೇ ಮುಖ್ಯವಾಗುವುದಿಲ್ಲ ಅದಕ್ಕಿಂತ ಹೆಚ್ಚಾಗಿ ಅವನ ಗುಣ, ವಿಶ್ವಾಸ ಮತ್ತು ಸನ್ನಡತೆಗಳು ಬಹಳ ಪ್ರಮುಖವಾಗುತ್ತವೆ.
 • ಹಣ ನಮ್ಮದೇ ಆದರೂ ಅದನ್ನು ಅನಗತ್ಯವಾಗಿ ಫೋಲು ಮಾಡಿ ವ್ಯರ್ಥಮಾಡುವುದಕ್ಕಿಂತ ನಾಳಿನ ಯೋಚನೆಯನ್ನು ಮನದಲ್ಲಿಟ್ಟುಕೊಂಡು ನಡೆದರೆ ಒಳ್ಳೆಯದು.
 • ಬರ ಬರುತ್ತ ಮನುಷ್ಯ ಭಯದ ನಡುವೆ ಮನೆ ಕಟ್ಟಿಕೊಳ್ಳುತ್ತಿದ್ದಾನೆ. ಕಾರಣ ಅವಘಡವೆನ್ನುವುದು ಯಾವ ರೂಪದಲ್ಲಾದರೂ ಅವನ ಮನೆ ಬಾಗಿಲನ್ನು ತಟ್ಟಬಹುದು. ಕೇವಲ ಚಿಲ್ಲರೆ ನಾಣ್ಯಗಳಿಗೂ ಈಗ ಕೊಲೆ ಮಾಡುವ ಹಂತಕ್ಕೆ ಸಮಾಜದ ಚಟುವಟಿಕೆಗಳು ಬದಲಾಗಿವೆ ಎಂದರೆ ಇದಕ್ಕಿಂತ ದುರಂತ ಮತ್ತೊಂದು ಬೇಕೆ ?.
 • ಒಬ್ಬ ವ್ಯಕ್ತಿ ಪ್ರತಿಯೊಂದು ಹಂತದಲ್ಲೂ ಹೊಸ ಹೊಸ ಅನುಭವವನ್ನು ಪಡೆಯುತ್ತಿರುತ್ತಾನೆ. ಆ ಮಾರ್ಗವು ಕಠಿಣವೇ ಇರಲಿ ಅಥವಾ ಸುಲಭವೇ ಆಗಿರಲಿ.
 • ನಮ್ಮ ನಮ್ಮೊಳಗೆ ನಾವೇ ಬೇಲಿಗಳನ್ನು ನಿರ್ಮಿಸಿಕೊಂಡಲ್ಲಿ ಅಲ್ಲಿ ಪ್ರೀತಿಗೆ ಜಾಗವಿಲ್ಲ. ನಮ್ಮ ತಿಂಡಿಯನ್ನು ಹತ್ತು ಮಂದಿಗೆ ಹಂಚಿದ್ದಲ್ಲಿ ಅಲ್ಲಿ ವಿಶ್ವಾಸಕ್ಕೆ ಕೊರತೆಯಿಲ್ಲ.
 • ಲೋಕದ ಅಂಕು ಡೊಂಕುಗಳನ್ನಾಗಲಿ ಅಥವಾ ಇತರರ ಒಪ್ಪು ತಪ್ಪುಗಳನ್ನಾಗಲಿ ತಿಳಿಸಿ ತಿದ್ದುವುದಕ್ಕಿಂತ ನನ್ನ ಮನಸ್ಸಿನ ವಿರ್ಮಶೆಯನ್ನೇ ನಾನು ಮಾಡಿಕೊಳ್ಳುವುದಕ್ಕೆ ಸಮಯ ಸಾಕಾಗುತ್ತಿಲ್ಲ.
 • ಮನುಷ್ಯನಿಗೆ ಅತಿ ಹೆಚ್ಚು ಖುಷಿಯಾದಲ್ಲಿ ಅವನು ಪಕ್ಷಿಗಳ ಜೊತೆ, ಪ್ರಾಣಿಗಳ ಜೊತೆ, ಬೆಟ್ಟ ಗುಡ್ಡಗಳ ಜೊತೆಯೂ ತನ್ನ ಸಂತಸವನ್ನು ಹಂಚಿಕೊಳ್ಳಲು ತವಕಿಸುತ್ತಾನೆ.
 • ನಾವು ಮಾಡಿದ ತಪ್ಪಿಗೆ ಕ್ಷಮೆ ಕೇಳುವುದು ನಮ್ಮ ಪ್ರಭುದ್ಧತೆಯ ಮತ್ತು ಬಲದ ಗುರುತು. ಮಾಡಿದ ತಪ್ಪಿನಿಂದ ಪಾಠ ಕಲಿಯುವುದು ನಿಜವಾದ ಬುದ್ಧಿವಂತಿಕೆ – ವೆರ್ಮನ್ ಕೋಲ್ಮನ್